ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ: ಡಿಸಿ ಆದೇಶ

ಪಿರಿಯಾಪಟ್ಟಣ:ಮಾ:29: ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಸಫಾಯಿ ಕರ್ಮಚಾರಿ ಹುಣಸೂರು ಉಪ ವಿಭಾಗದ ಜಾಗೃತ ಸಮಿತಿಗೆ ಪಿರಿಯಾಪಟ್ಟಣದ ಎಚ್.ಕೆ. ಮಹೇಶ್ ರನ್ನು ಆಯ್ಕೆ ಮಾಡಿ ಜಾಗೃತ ಸಮಿತಿಯ ಜಿಲ್ಲಾ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ಆದ ರೋಹಿಣಿ ಸಿಂಧೂರಿ ರವರು ಆದೇಶ ಹೊರಡಿಸಿದ್ದಾರೆ.
ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳನ್ವಯ ಉಪ ವಿಭಾಗ ಮಟ್ಟದ ಜಾಗೃತ ಸಮಿತಿ ರಚಿಸಲಾಗಿದ್ದು, ಈ ಈ ಸಮಿತಿಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖಾಧಿಕಾರಿ ಕಾರ್ಯದರ್ಶಿಗಳಾಗಿದ್ದು, ಉಪ ವಿಭಾಗಾಧಿಕಾರಿಗಳು, ಮುಖ್ಯಾಧಿ ಕಾರಿಗಳು, ಪೆÇಲೀಸ್ ಇಲಾಖಾಧಿಕಾರಿಗಳು ಸದಸ್ಯರಾಗಿರುತ್ತಾರೆ.
ಈ ಸಮಿತಿಯ ಸದಸ್ಯರು ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳ ನೇಮಕಾತಿ ನಿಷೇಧ ಮತ್ತು ಸಫಾಯಿ ಕರ್ಮಚಾರಿಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಯ ಬಗ್ಗೆ ಮೇಲ್ವಿಚಾರಣೆ ಮಾಡಿ ಇವರ ಪುನರ್ವಸತಿಗೆ ಮಾರ್ಗೋಪಾಯ ಕಂಡು ಕೊಳ್ಳುವುದು ಮತ್ತು ಈ ಅಧಿನಿಯಮದ ಮೇರೆಗೆ ದಾಖಲುಗೊಂಡಅಪರಾಧಗಳ ನೋಂ ದಣಿಯನ್ನು ಮತ್ತು ಅವುಗಳ ವಿಚಾರಣೆ ನಡೆಸುವುದು ಹಾಗೂ ಈ ಬಗ್ಗೆ ಕಾನೂನು ಕ್ರಮ ಜರುಗಿಸುವುದನ್ನು ಮೇಲ್ವಿಚಾರಣೆ ಮಾಡುವ ಅಧಿಕಾರ ಹೊಂದಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.