ಮ್ಯಾನ್ಮಾರ್ ಅಕ್ರಮ ವಲಸಿಗರ ಡೇಟಾ ಸಂಗ್ರಹ

ಇಂಫಾಲ.ಜು.೩೦- ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾದ ಬಳಿಕೆ ಎಚ್ಚೆತ್ತುಕೊಂಡಿರುವ ಮಣಿಪುರ ಸರ್ಕಾರ, ರಾಜ್ಯದಲ್ಲಿ ವಾಸಿಸುತ್ತಿರುವ ಮ್ಯಾನ್ಮಾರ್ ಅಕ್ರಮ ವಲಸಿಗರ ಬಯೋಮೆಟ್ರಿಕ್ ಡೇಟಾ ಕಲೆ ಹಾಕುವ ಕೆಲಸ ಆರಂಭಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಮಣಿಪುರದಲ್ಲಿನ ಜನಾಂಗೀಯ ಘರ್ಷಣೆಗಳು ಮಾದಕವಸ್ತು ಭಯೋತ್ಪಾದನೆಯ ಹೊರತಾಗಿ ಮ್ಯಾನ್ಮಾರ್‌ನಿಂದ ಅಕ್ರಮ ವಲಸಿಗರನ್ನು ಒಳಗೊಂಡಿರುವ ಆರೋಪಕ್ಕೆ ಸಂಬಂಧಿಸಿವೆ ಎಂದು ಸರ್ಕಾರದ ಅಂಕಿ ಅಂಶಗಳು ಮಾಹಿತಿ ನೀಡಿವೆ.
ರಾಜ್ಯದಲ್ಲಿ ನೆಲೆಸಿರುವ ಮ್ಯಾನ್ಮಾರ್‍ನಿಂದ ಎಲ್ಲಾ ಅಕ್ರಮ ವಲಸಿಗರ ಬಯೋಮೆಟ್ರಿಕ್ ಡೇಟಾವನ್ನು ವಶಪಡಿಸಿಕೊಳ್ಳುವ ಅಭಿಯಾನ ಸೆಪ್ಟೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸ ಲಾಗುವುದು ಎಂದು ಮಣಿಪುರ ಗೃಹ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಅಕ್ರಮ ಮ್ಯಾನ್ಮಾರ್ ವಲಸಿಗರ ಬಯೋಮೆಟ್ರಿಕ್ ಡೇಟಾ ಕಲೆ ಹಾಕಲು ಸರ್ಕಾರದ ಅಧಿಕಾರಿಗಳಿಗೆ ತರಬೇತಿ ನೀಡಲು ಗೃಹ ಸಚಿವಾಲಯದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ತಂಡದ ನೆರವು ಪಡೆಯಲಾಗುವುದು ಎಂದು ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪೀಟರ್ ಸಲಾಮ್ ತಿಳಿಸಿದ್ದಾರೆ.
“ರಾಜ್ಯದಲ್ಲಿರುವ ಎಲ್ಲಾ ಅಕ್ರಮ ಮ್ಯಾನ್ಮಾರ್ ವಲಸಿಗರ ಬಯೋಮೆಟ್ರಿಕ್ ಡೇಟಾ ಕಲೆಹಾಕಲಾಗುವುದು. ಈ ಅಭಿಯಾನ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರಿಯುತ್ತದೆ. ಸೆಪ್ಟೆಂಬರ್ ರೊಳಗೆ ಪೂರ್ಣಗೊಳ್ಳುವ ಗುರಿ ಹೊಂದಿದೆ” ಎಂದು ಹೇಳಿಕೆ ತಿಳಿಸಿದ್ದಾರೆ.
ಮಣಿಪುರದಲ್ಲಿ ಮೇ ೩ ರಿಂದ ಗುಡ್ಡಗಾಡು ಬಹುಸಂಖ್ಯಾತ ಕುಕಿ ಬುಡಕಟ್ಟು ಮತ್ತು ಕಣಿವೆಯ ಬಹುಸಂಖ್ಯಾತ ಮೈಟೈಸ್ ನಡುವೆ ಜನಾಂಗೀಯ ಕಲಹದಲ್ಲಿ ಸಿಲುಕಿಕೊಂಡಿದೆ.ಈ ಮೊದಲು, ಬಯೋಮೆಟ್ರಿಕ್ ಮಾಹಿತಿ ಸಂಗ್ರಹ ಅಭಿಯಾನ ಸೆಪ್ಟೆಂಬರ್‌ನೊಳಗೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರ, ಮಣಿಪುರ ಮತ್ತು ಮಿಜೋರಾಂ ಸರ್ಕಾರಗಳಿಗೆ ಸೂಚಿಸಿದೆ.

ಗಂಭೀರ ಆರೋಪ
ಮಣಿಪುರದ ಚುರಾಚಂದಪುರ ಜಿಲ್ಲೆಯಲ್ಲಿ ಕನಿಷ್ಠ ಏಳು ಮ್ಯಾನ್ಮಾರ್ ಪ್ರಜೆಗಳು ಬುಲೆಟ್ ಮತ್ತು ಸ್ಫೋಟಕ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ ಎಂದು ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಗಂಬೀರ ಆರೋಪ ಮಾಡಿದ್ದಾರೆ. ಅಲ್ಲಿ ಕುಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಮ್ಯಾನ್ಮಾರ್ ವಲಸಿಗರು ಅರಣ್ಯನಾಶ, ಗಸಗಸೆ ಕೃಷಿ ಮತ್ತು ಮಾದಕ ದ್ರವ್ಯಗಳ ಹಾವಳಿಗೆ ಕಾರಣರಾಗಿದ್ದಾರೆ ಎಂದು ದೂರಿದ್ದಾರೆ.