ಮ್ಯಾನೇಜ್ಮೆಂಟ್ ಪೆಸ್ಟ್ ನ ಫಲಿತಾಂಶಗಳು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.23: ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಅಲ್ಲಂ ಕರಿಬಸಪ್ಪ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೇಂಟ್ ಎಂಬಿಎ ಕಾಲೇಜಿನಲ್ಲಿ– “ಪಾಂಚಜನ್ಯ 2022” ಒಂದು ದಿನದ ರಾಷ್ಟ್ರೀಯ ಮಟ್ಟದ  ಪದವಿ ಕಾಲೇಜ್ ವಿದ್ಯಾರ್ಥಿಗಳಿಗೆ ಮ್ಯಾನೇಜ್ಮೇಂಟ್ ಪೆಸ್ಟ್ ಆಯೋಜಿಸಲಾಗಿತ್ತು.
ಮ್ಯಾನೇಜ್ಮೇಂಟ್ ಪೆಸ್ಟ್ ಸ್ಪರ್ಧೆಯ ಐಸ್ ಬ್ರೇಕಿಂಗ್ ನಲ್ಲಿ  ಪ್ರಥಮ ಮತ್ತು ತೃತೀಯ ಸ್ಥಾನವನ್ನು ಬಳ್ಳಾರಿಯ ಶ್ರೀಗುರು ತಿಪ್ಪೇರುದ್ರ ಕಾಲೇಜ್ ವಿದ್ಯಾರ್ಥಿಗಳು,  ದ್ವಿತೀಯ ಸ್ಥಾನವನ್ನು ಶ್ರೀ ಮೇಧ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಬ್ಯುಸಿನೆಸ್ ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಬಳ್ಳಾರಿಯ ಡಾ. ಪಿ. ಆರ್ ಕೆ ಕಾಲೇಜಿನ ವಿದ್ಯಾರ್ಥಿಗಳು
ಶ್ರೀ ಮೇಧಾ ಪದವಿ ಕಾಲೇಜ್ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಹಾಗೂ ನಂದಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ತೃತೀಯ ಸ್ಥಾನದ ಬಹುಮಾನ ಪಡೆದುಕೊಂಡಿದ್ದಾರೆ.
ಹೆಚ್ ಆರ್ ವಿಭಾಗದಲ್ಲಿ ಬಳ್ಳಾರಿಯ ಬಳ್ಳಾರಿ ಬ್ಯುಸಿನೆಸ್ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು
ಶ್ರೀಗುರು ತಿಪ್ಪೇರುದ್ರ ಕಾಲೇಜ್ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಹಾಗೂ ಬಳ್ಳಾರಿಯ ಶ್ರೀ ಮೇಧಾ ಕಾಲೇಜ್ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ತೃತೀಯ ಸ್ಥಾನ ಬಹುಮಾನ ಪಡೆದುಕೊಂಡಿದ್ದಾರೆ.
ಪಿನಾನ್ಸ್ ವಿಭಾಗದಲ್ಲಿ ಬಳ್ಳಾರಿಯ ಬಳ್ಳಾರಿ ಬ್ಯುಸಿನೆಸ್ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು
ನಂದಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ  ಹಾಗೂ ಶ್ರೀ ಮೇಧಾ ಕಾಲೇಜ್ ವಿದ್ಯಾರ್ಥಿಗಳು ತೃತೀಯ ಸ್ಥಾನದ ಬಹುಮಾನಗಳನ್ನು ಪಡೆದಿದ್ದಾರೆ.
ಮಾರ್ಕೇಟಿಂಗ್ ವಿಭಾಗದಲ್ಲಿ ಶ್ರೀ ಮೇಧಾ ಕಾಲೇಜ್ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು
ಹೊಸಪೇಟೆಯ ವಿಜಯನಗರ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಬಳ್ಳಾರಿಯ ಬಳ್ಳಾರಿ ಬ್ಯುಸಿನೆಸ್ ಕಾಲೇಜು ವಿದ್ಯಾರ್ಥಿಗಳು ತೃತೀಯ ಸ್ಥಾನದ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಎಂಟ್ರಪ್ರೈನರ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬಳ್ಳಾರಿ ನಂದಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಶ್ರೀ ಮೇಧಾ ಪದವಿ ಕಾಲೇಜ್ ವಿದ್ಯಾರ್ಥಿಗಳು ಹಾಗೂ ತೃತೀಯ ಸ್ಥಾನವನ್ನು  ಬಳ್ಳಾರಿಯ ವೀರಶೈವ  ಕಾಲೇಜ್ ವಿದ್ಯಾರ್ಥಿಗಳು ಪಡೆದುಕೊಂಡಿರುತ್ತಾರೆ.
ಬೆಸ್ಟ್ ಮ್ಯಾನೇಜರ್ ವಿಭಾಗದಲ್ಲಿ ಬಳ್ಳಾರಿಯ ನಂದಿ ಪದವಿ ಕಾಲೇಜಿನ ವಿದ್ಯಾರ್ಥಿಯು ಪಡೆದುಕೊಂಡಿರುತ್ತಾನೆ  ಹಾಗೂ ಚಾಂಪಿಯನ್ ಶಿಪ್‍ನ್ನು  ಬಳ್ಳಾರಿಯ ಶ್ರೀ ಮೇಧಾ ಪದವಿ ಕಾಲೇಜ್ ವಿದ್ಯಾರ್ಥಿಗಳು ಪಡೆದುಕೊಂಡಿರುತ್ತಾರೆ. ರನ್ನರ್ ಆಪ್ ನ್ನು ನಂದಿ ಪದವಿ ಕಾಲೇಜು ವಿದ್ಯಾರ್ಥಿಗಳು ಪಡೆದುಕೊಂಡಿರುತ್ತಾರೆ ಎಂದು ಕಾರ್ಯಕ್ರಮ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.