ಮ್ಯಾನಹೋಲ ಚೇಂಬರ್ ಮುಚ್ಚಳಿಕೆಗಳನ್ನು ಕಳ್ಳತನ ಮಾಡುವವರ ವಿರುದ್ಧ ಕಾನೂನು ಕ್ರಮ

ಕಲಬುರಗಿ:ನ.16: ಕಲಬುರಗಿ ನಗರದ ವಿವಿಧ ಬಡಾವಣೆಗಳಲ್ಲೊ ಒಳಚರಂಡಿ ವ್ಯವಸ್ಥೆಯಲ್ಲಿನ ಮ್ಯಾನಹೋಲ ಚೇಂಬರ್ ಮುಚ್ಚಳಿಕೆಗಳನ್ನು ಕಳವು ಮಾಡುತ್ತಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಚೇಂಬರಗಳ ಮೇಲೆ ಮುಚ್ಚಳಿಕೆಗೆ ಇಲ್ಲದಿದ್ದರೆ ಅದರಲ್ಲಿ ಮನುಷ್ಯರು ಪ್ರಾಣಿಗಳು ಬಿದ್ದು ಗಾಯಗಳು ಆಗುವ ಅಥವ ಪ್ರಾಣಾಪಾಯದ ಸಾಧ್ಯತೆ ಹಾಗೂ ವಾಹನಗಳ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಇರುತ್ತವೆ ಎಂದು ಕ.ನ.ನೀ.ಸ ಮತ್ತು ಒ.ಚ. ಮಂಡಳಿ ವಿಭಾಗ ಕಲಬುರಗಿ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮ್ಯಾನಹೋಲ ಚೇಂಬರಗಳ ಮುಚ್ಚಳಿಕೆಗಳು ಕಳವು ಮಾಡುವುದು ಅಪರಾಧಿಕ ಕೃತ್ಯವಾಗಿರುತ್ತದೆ. ಹಾಗೂ ಕಳ್ಳತನದ ಸಾಮಾನುಗಳನ್ನು ಖರೀದಿ ಮಾಡುವುದು ಸಹ ಅಪರಾಧಿಕ ಕೃತ್ಯವಾಗಿರುತ್ತದೆ. ಅಂಥವರ ಮೇಲೆ ನಿಯಮಾನುಸಾರ ಕಾನೂನು ಕ್ರಮವಾಗುವುದು ಹಾಗೂ ಅವರ ಕೃತ್ಯದಿಂದ ಯಾವುದೆ ವ್ಯಕ್ತಿ ಪ್ರಾಣಿ ಅಥವಾ ವಾಹನಗಳಿಗೆ ಹಾನಿ ಆದರೆ ಅದಕ್ಕೆ ಅವರೇ ನೇರವಾಗಿ ಹೊಣೆಗಾರರಾಗುತ್ತಾರೆ ಕಾನೂನು ಪ್ರಕಾರ ದಂಡ ಮತ್ತು ಜೈಲು ಶಿಕ್ಷೆ ಆಗುವುದು ಕಳ್ಳತನ ಕಂಡು ಬಂದಲ್ಲಿ ಸಾರ್ವಜನಿಕರು ಸಮೀಪದ ಪೋಲಿಸ್ ಠಾಣೆಗೆ ತಿಳಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.