ಮ್ಯಾದನ ಹೊಳೆ ಗ್ರಾಮದಲ್ಲಿ ಒನಕೆ ಒಬ್ಬವ ಜಯಂತಿ

ಹಿರಿಯೂರು ನ-13 : ತಾಲೂಕಿನ ಮ್ಯಾದನಹೊಳೆ ಗ್ರಾಮದಲ್ಲಿ ಛಲವಾದಿ ಯುವಕರ ಬಳಗದ ವತಿಯಿಂದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಚಿವರಾದ ಡಿ ಸುಧಾಕರ್  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ವೀರ ವನಿತೆ ಒನಕೆ ಓಬವ್ವ ಛಲವಾಧಿ ಜನಾಂಗದ ಹೆಣ್ಣು ಮಗಳಾಗಿದ್ದು,  ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಪತ್ನಿ. ಹೈದರಾಲಿಯು ಚಿತ್ರದುರ್ಗದ ಮೇಲೆ ಹಟಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವ ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ನೂರಾರು ಶತ್ರುಗಳನ್ನು ಸದೇ ಬಡಿದಿದ್ದಳು,  ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು.  ಇವರನ್ನು ಕನ್ನಡ ನಾಡಿನ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕ ರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ ಎಂದರು, ಛಲವಾದಿ ಜನಾಂಗದವರು ಅತ್ಯಂತ ಶಿಸ್ತು ಬದ್ದ ಸಮಾಜದವರಾಗಿದ್ದು, ಸಮಾಜದ ಹಿರಿಯ ಮುಖಂಡರಾದ ಕೆ.ಹೆಚ್.ರಂಗನಾಥ್, ಬಿ.ಬಸವಲಿಂಗಪ್ಪ, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ.ಪರಮೇಶ್ವರ್ , ಮೋಟಮ್ಮ, ಮಂತ್ರಿಗಳಾಗಿ ಅತ್ಯಂತ ದಕ್ಷತೆಯಿಂದ ಆಡಳಿತ ನೆಡೆಸಿದವರಾಗಿದ್ದಾರೆ ಎಂದು ಹೇಳಿದರು. ಸಮಾಜ ಸೇವಕರಾದ ಶಶಿಕಲಾ ರವಿಶಂಕರ್  ಮಾತನಾಡಿ ವೀರ ವನಿತೆ ಒನಕೆ ಓಬವ್ವರವರ ಚರಿತ್ರೆಯನ್ನು ಎಳೆ ಎಳೆಯಾಗಿ ಕಾರ್ಯಕ್ರಮದಲ್ಲಿ ವಿವರಿಸಿದರು.  ಕೆ.ಪಿ.ಸಿ.ಸಿ ಸದ್ಯರಾದ ಎಸ್.ವಿಜಯ ಕುಮಾರ್  ಮಾತನಾಡಿ ಬದ್ದತೆಗೆ ಛಲವಾದಿ ಜನಾಂಗದವರು ಹೆಸರುವಾಸಿ  ಹಿಂದೆ ತಾಲ್ಲೂಕಿನಲ್ಲಿ ಕೆ.ಹೆಚ್.ರಂಗನಾಥ್ ರವರು ಜನಾಂಗದ ಹಿತವನ್ನು ಕಾಪಾಡುತ್ತಿದ್ದರು.  ಮಾಜಿ ಸಚಿವರಾದ ಡಿ.ಸುಧಾಕರ್ ರವರು  ಅಧಿಕಾರ ಇದ್ದಂತ ಸಂದರ್ಭದಲ್ಲಿ ಹಾಗೂ ಈಗಲೂ ಸಹ ಛಲವಾದಿ ಜನಾಂಗದ ಹಿತ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ  ಎಲ್ಲರೂ ಸುಧಾಕರ್ ರವರಿಗೆ ಬೆಂಬಲಿಸಬೇಕೆಂದು ಹೇಳಿದರು.  ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್ ಹಾಗೂ ಜಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ ಯಾವುದು ಜನಾಂಗದ ಬಗ್ಗೆ ಸವೀಸ್ಥಾರವಾಗಿ ಮಾತನಾಡಿದರು.ಮಾಜಿಗ್ರಾ.ಪಂ.ಸದಸ್ಯರಾದ ರಾಘವೇಂದ್ರ, ಹಿರಿಯ ಮುಖಂಡರಾದ ಹೆಚ್.ಎನ್.ಕೇಶವಮೂರ್ತಿ, ಶಿಕ್ಷಕರಾದ ಕುಮಾರ್, ಡಾ. ನಾಗೇಂದ್ರಗೌಡ, ಸೋಮನಾಥ್, ಗ್ರಾ.ಪಂ.ಸ  ಏಕಾಶಪ್ಪ, ಭೂತೇಶ್, ನಿಜಲಿಂಗಪ್ಪ, ಹೂವಿನಹೊಳೆ ಹೇಮಂತ್ ಗೌಡ, ಶಿವಕುಮಾರ್.ಟಿ, ವೀರಭದ್ರಪ್ಪ.ಎಂ.ಬಿ, ನರಸಿಂಹಸ್ವಾಮಿ, ದಿನೇಶ್, ರಮೇಶ್, ಜನಾರ್ಧನ್, ತೇಜಮೂರ್ತಿ, ಮಾರುತಿ, ರವಿ,ಸೇರಿದಂತೆ  ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.