`ಮ್ಯಾಟ್ನಿ’ಗೆ  ದರ್ಶನ್ ಬಲ ರಚಿತಾ ,ಸತೀಶ್ ಗೆ ಆನೆ ಬಲ

* ಚಿ.ಗೋ ರಮೇಶ್

“ಆಯೋಗ್ಯ” ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ ನೀನಾಸಂ ಸತೀಶ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯ “ಮ್ಯಾಟ್ನಿ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

 ನಟ ಚಾಲೆಜಿಂಗ್ ಸ್ಟಾರ್  ದರ್ಶನ್ “ಮ್ಯಾಟ್ನಿ” ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿರುವುದು   ರಚಿತಾ ರಾಮ್,ಸತೀಶ್  ಸೇರಿ ಇಡೀ ತಂಡಕ್ಕೆ ಆನೆಬಲ ಬಂದಿದೆ.

ಇತ್ತೀಚಿನ ದಿನಗಳಲ್ಲಿ ನಟ ದರ್ಶನ್ ಅವರು  ಟ್ರೈಲರ್ ಬಿಡುಗಡೆ ಮಾಡಿದ ಚಿತ್ರಗಳು ನಿರೀಕ್ಷೆ ಮೀರಿ ಯಶಸ್ಸು ಕಂಡಿವೆ.ಅದಕ್ಕೆ ತಾಜಾ ಉದಾಹರಣೆ ಟಗರು ಪಲ್ಯ, ಉಪಾಧ್ಯಕ್ಷ ಚಿತ್ರಗಳೇ ಸಾಕ್ಷಿ.‌ಹೀಗಾಗಿ  ಮ್ಯಾಟ್ಬಿ ಚಿತ್ರ ಕೂಡ ಈ ಸಾಲಿಗೆ ಸೇರಲಿದೆ ಎನ್ನುವುದು ಪಕ್ಕಾ ಎನ್ನುತ್ತಿದೆ ಚಿತ್ರತಂಡ.

ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್ ಅವರು, ನಟ ನೀನಾಸಂ ಸತೀಶ್ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ದೊಡ್ಡ‌ ನಟನಾಗಿ ಬೆಳೆದಿದ್ದಾರೆ.  ಸಾಮಾನ್ಯ ಹಳ್ಳಿಯ ಹುಡುಗನೊಬ್ಬ ಈ ಮಟ್ಟಕ್ಕೆ ಬೆಳೆಯುವುದು ಸುಲಭವಲ್ಲ.ಅದಕ್ಕೆ ಅವರ ಶ್ರದ್ದೆ ಮತ್ತು ಪರಿಶ್ರಮವೇ ಕಾರಣ. ಇನ್ನು ಬುಲ್ ಬುಲ್ ಬೆಡಗಿ ರಚಿತಾ ರಾಮ್ ಚಿತ್ರರಂಗದಲ್ಲಿ ದಶಕ ಪೂರೈಸಿದ್ದಾರೆ. ನಟಿಯಾಗಿ ಇತ್ತೀಚಿನ ದಿನಗಳಲ್ಲಿ ಇದು ಸುಲಭವಲ್ಲ. ಮೊದಲ ಚಿತ್ರದಲ್ಲಿ ಹೇಗೆ ಇದ್ದರೂ ಈಗಲೂ ಹಾಗೆ ಇದ್ದಾರೆ. ಸತೀಶ್,ರಚಿತಾ ರಾಮ್ ಜೊತೆಗೆ ನಾಗಭೂಷಣ್, ಕೆಆರ್ ಪೇಟೆ ಶಿವರಾಜ್ ಮತ್ತಿತರ ಅದ್ಬುತ ಕಲಾವಿದರಿದ್ದಾರೆ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು‌ ಮನದುಂಬಿ ಹರಿಸಿದರು.

ನಟ ನೀನಾಸಂ ಸತೀಶ್ ಮಾತನಾಡಿ, ದರ್ಶನ್ ಸಾರ್ ಚಿತ್ರ ಯಾವಾಗ ಬಿಡುಗಡೆ ಮಾಡುತ್ತೀರಾ ಎಂದು ಕೇಳಿದ್ದರು. ಆಗ ನೀವು ಟ್ರೈಲರ್ ಬಿಡುಗಡೆಗೆ ಬರಬೇಕು ಅಂದಾಗ ಹೀರೋ , ನೀವು ಯಾವಾಗ ಬೇಕಾದರೂ ದಿನಾಂಕ‌ ನಿಗದಿ ಪಡಿಸಿ ನಾನು ಬರುತ್ತೇನೆ ಎಂದಿದ್ದರು ಅದರಂತೆ ಬಂದಿದ್ದಾರೆ. ಅವರ ಸಹಕಾರ ಬೆಂಬಲದಿಂದ ಚಿತ್ರ ಯಶಸ್ಸು ಗಳಿಸಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಟಿ ರಚಿತಾ ರಾಮ್ ಮಾತನಾಡಿ, ಚಿತ್ರರಂಗದಲ್ಲಿ ಮೊದಲ ಹತ್ತು ವರ್ಷ ಪೂರೈಸಿದ್ದೇನೆ. ಇದೇ ಮೊದಲ ಬಾರಿಗೆ ನನ್ನ ಚಿತ್ರದ ಟ್ರೈಲರ್ ಬಿಡುಗಡೆಗೆ ಡಿಬಾಸ್ ಬಂದಿದ್ದಾರೆ ಇದು ಖುಷಿಕೊಟ್ಟಿದೆ ಎಂದರು

ಕಲಾವಿದರಾದ ನಾಗಭೂಷಣ್, ಶಿವರಾಜ್ ಕೆಆರ್ ಪೇಟೆ,  ದಿಗಂತ್ ದಿವಾಕರ್ ಸೇರಿದಂತೆ ಅನೇಕರು ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಚಿತ್ರಕ್ಕೆ ಪಾರ್ವತಿ ಎಸ್ ಗೌಡ ಬಂಡವಾಳ ಹಾಕಿದ್ದಾರೆ.‌ಪೂರ್ಣ ಚಂದ್ರ ತೇಜಸ್ವಿ ಸಂಗೀತ, ಸುಧಾಕರ್ ಎಸ್ ರಾಜ್ ಮತ್ತು ಕೀರ್ತನ್ ಪೂಜಾರಿ ಚಿತ್ತಕ್ಕಿದೆ.

ಏಪ್ರಿಲ್ 5ಕ್ಕೆ ಬಿಡುಗಡೆ

ಮ್ಯಾಟ್ನಿ ಚಿತ್ರ ಏಪ್ರಿಲ್ 5 ಕ್ಕೆ ತೆರೆಗೆ ಬರಲಿದೆ. ಒಳ್ಳೆಯ ಕಂಟೆಂಟ್ ಚಿತ್ರದಲ್ಲಿದೆ. ಹಾರರ್  ಕಾಮಿಡಿ ಸಿನಿಮಾ. ಎಲ್ಲಾ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರ ನೋಡಿದ ಎಲ್ಲರೂ ಇಷ್ಟಪಡ್ತೀರಾ ಎನ್ನುವ ಭರವಸೆ ವ್ಯಕ್ತಪಡಿಸಿದರು‌ ನಿರ್ದೇಶಕ‌ ಮನೋಹರ್  ಕಾಂಪಲ್ಲಿ.

ಮುಟ್ಟಿದೆಲ್ಲಾ ಚಿನ್ನ

ದರ್ಶನ್ ಅಣ್ಣ ಇತ್ತೀಚೆಗೆ ಬಿಡುಗಡೆ ಮಾಡಿದ ಟ್ರೈಲರ್ ಗಳ ಎಲ್ಲಾ ಚಿತ್ರಗಳು ಯಶಸ್ಸು ಕಂಡಿವೆ.ಅದೇ ರೀತಿ‌‌ ಮ್ಯಾಟ್ನಿ ಚಿತ್ರಕ್ಕೆ ಯಶಸ್ಸು ಸಿಗಲಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. – ಡಾಲಿ ಧನಂಜಯ