ಮ್ಯಾಜಿಕ್ ವಾಹನ ಪಲ್ಟಿ: 5 ಮಂದಿ ಗಾಯ

ಹನೂರು: ಜ:11: ಚಾಲಕನ ನಿಯಂತ್ರಣತಪ್ಪಿದ ಪರಿಣಾಮಟಾಟಾ ಮ್ಯಾಜಿಕ್ ವಾಹನ ಪಲ್ಟಿ ಹೊಡೆದು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಐವರುಗಾಯಗೊಂಡಿರುವಘಟನೆ ಮಲ್ಲಯ್ಯನಪುರಗ್ರಾಮದ ಬಳಿ ನಡೆದಿದೆ.
ನರಸೀಪುರ ತಾಲೂಕಿನ ಬಾಣಹಳ್ಳಿ ಗ್ರಾಮದ ಅಶ್ವಿನಿ, ಮಹದೇವಯ್ಯ, ಆಧಾರ್, ದೀಪಕ್ ಹಾಗೂ ಚಾಲಕ ಭಾಸ್ಕರ್ ಎಂಬವರೇಗಾಯಗೊಂಡವರು. ಬಾಣಹಳ್ಳಿ ಗ್ರಾಮದ ಮಹದೇವಯ್ಯಕುಟುಂಬದ 12 ಜನರುಗ್ರಾಮದಿಂದಟಾಟಾ ಮ್ಯಾಜಿಕ್ ವಾಹನದಲ್ಲಿ ಮಲೆ ಮಹದೇಶ್ವರಕ್ಕೆ ತೆರಳುತ್ತಿದ್ದರು.ಈ ವೇಳೆ ಮಲ್ಲಯ್ಯನಪುರಗ್ರಾಮದತಿರುವಿನಲ್ಲಿ ಚಾಲಕ ನಿಯಂತ್ರಣತಪ್ಪಿದ್ದರಿಂದ ವಾಹನ ಮಗುಚಿ ಬಿದ್ದಿದೆ.ಪರಿಣಾಮ ಚಾಲಕ ಹಾಗೂ ಒಂದೇಕುಟುಂಬದ ನಾಲ್ವರುಗಾಯಗೊಂಡರು.ಈ ಸಂದರ್ಭದಲ್ಲಿ ಸಾರ್ವಜನಿಕರು ಗಾಯಾಳುಗಳನ್ನು 108 ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ತೀವ್ರಗಾಯಗೊಂಡ ಅಶ್ವಿನಿ ಎಂಬವರನ್ನು ಹೆಚ್ಚಿನಚಿಕಿತ್ಸೆಗೆ ಮೈಸೂರಿಗೆ ಕಳುಹಿಸಲಾಗಿದೆ. ಈ ಸಂಬಂಧ ರಾಮಾಪುರ ಪೆÇಲೀಸ್‍ಠಾಣೆಯಲ್ಲಿ ಪ್ರಕರಣದಾಖಲಾಗಿದೆ.