ಮ್ಯಾಕ್‌ಡೊನಾಲ್ಡ್‌ರಾಯಭಾರಿ ರಶ್ಮಿಕಾ ಮಂದಣ್ಣ

ಮುಂಬೈ/ಬೆಂಗಳೂರು.ಏ.೧೭:ಮ್ಯಾಕ್‌ಡೊನಾಲ್ಡ್ಸ್ ಇಂಡಿಯಾ(ಪಶ್ಚಿಮ ಮತ್ತು ದಕ್ಷಿಣ), ತನ್ನ ಪ್ರಮುಖ ಜಾಹೀರಾತು ಪ್ರಚಾರಗಳಿಗೆ ಸುಪ್ರಸಿದ್ಧ ಚಲನಚಿತ್ರ ತಾರೆ ರಶ್ಮಿಕಾ ಮಂದಣ್ಣ ಅವರನ್ನು ತನ್ನ ಬ್ರ್ಯಾಂಡ್ ರಾಯಭಾರಿಯನ್ನಾಗಿಸಿದೆ.
ತನ್ನ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಬ್ರ್ಯಾಂಡ್ ಮುಂದಾಳತ್ವವನ್ನು ವರ್ಧಿಸಿಕೊಳ್ಳುವ ಪ್ರಯತ್ನದಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌ಗೆ ಈ ಸಹಯೋಗವು ಮಹತ್ತರ ಹೆಜ್ಜೆಯಾಗಿದೆ. ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿರುವ ಮ್ಯಾಕ್‌ಡೊನಾಲ್ಡ್ಸ್ ರೆಸ್ಟಾರೆಂಟ್‌ಗಳನ್ನು ವೆಸ್ಟ್‌ಲೈಫ್ ಡೆವಲಪ್ಮೆಂಟ್ ಲಿ.,( Wಆಐ),ತನ್ನ ಸಂಪೂರ್ಣ ಮಾಲೀಕತ್ವದ ಅಧೀನ ಸಂಸ್ಥೆಯ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ.
ಈ ಸಹಯೋಗದ ಘೋಷಣೆಯ ಬಗ್ಗೆ ಮಾತನಾಡುತ್ತಾ, ಮ್ಯಾಕ್‌ಡೊನಾಲ್ಡ್ಸ್ ಇಂಡಿಯಾ(ಪಶ್ಚಿಮ ಮತ್ತು ದಕ್ಷಿಣ)ದ ಮಾರುಕಟ್ಟೆ ಹಾಗು ಸಂವಹನ ವಿಭಾಗದ ನಿರ್ದೇಶಕ ಅರವಿಂದ್ ಆರ್‌ಪಿ, “Wರಶ್ಮಿಕಾ ಅವರನ್ನು ತರಲು ನಮಗೆ ಬಹಳ ಸಂತೋಷವಾಗುತ್ತಿದೆ. ಆಕೆ ಸಹಸ್ರಮಾನಿಗಳೊಂದಿಗೆ ಪ್ರಬಲವಾಗಿ ಸಂಪರ್ಕಗೊಳ್ಳುವ ವ್ಯಕ್ತಿಯಾಗಿದ್ದು ಯುವಜನತೆಯ ಕಣ್ಮಣಿಯೂ ಆಗಿದ್ದಾರೆ. ಎಂದರು.
‘ದೇಶೀಯ ಕ್ರಶ್” ಎಂದೇ ಸುಪ್ರಸಿದ್ಧರಾಗಿರುವ ರಶ್ಮಿಕಾ ತಮ್ಮ ಸಮೂಹ ಮಾಧ್ಯಮ ಹ್ಯಾಂಡ್ಲ್‌ಗಳ ಮೂಲಕ ಹಲವಾರು ಸಂದರ್ಭಗಳಲ್ಲಿ, ತಾನೊಬ್ಬ ಆಹಾರ ಪ್ರೇಮಿ ಎಂಬುದನ್ನು ವ್ಯಕ್ತಪಡಿಸಿಕೊಂಡಿದ್ದಾರೆ. ರಶ್ಮಿಕಾ ಅವರು ಪ್ರಮುಖ ಬ್ರ್ಯಾಂಡ್ ಜಾಹೀರಾತುಪ್ರಚಾರಗಳ ಭಾಗವಾಗಲಿದ್ದು, ಪ್ರಮುಖ ಮಾರುಕಟ್ಟೆಗಳಾದ್ಯಂತ ಮ್ಯಾಕ್‌ಡೊನಾಲ್ಡ್ಸ್‌ಗಾಗಿ ಬ್ರ್ಯಾಂಡ್ ಪ್ರೀತಿಯನ್ನು ವರ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಬ್ರ್ಯಾಂಡ್ ರಾಯಭಾರಿ ಆಗುವುದರ ಬಗ್ಗೆ ಮಾತನಾಡುತ್ತಾ, ನಟಿ ರಶ್ಮಿಕಾ ಅವರು “ನಾನು ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೂ ಮ್ಯಾಕ್ಕ್‌ಡೊನಾಲ್ಡ್ ನನ್ನ ನೆಚ್ಚಿನ ಬ್ರ್ಯಾಂಡುಗಳ ಪೈಕಿ ಒಂದಾಗಿದೆ. ಈಗ್ಗೆ ೨೫ ವರ್ಷಗಳಿಂದ ಮ್ಯಾಕ್‌ಡೊನಾಲ್ಡ್ಸ್ ಭಾರತೀಯ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದು ಈಗಲೂ ಅದು ನಿಶ್ಚಯವಾಗಿ ಎಲ್ಲಾ ವಯೋಮಾನ ಗುಂಪುಗಳಾದ್ಯಂತ ಅತ್ಯಂತ ನೆಚ್ಚಿನ ಆಯ್ಕೆಯಾಗಿದೆ. ಇಂತಹ ಅದ್ಭುತ ಹಾಗು ವಿಶ್ವಸನೀಯ ಬ್ರ್ಯಾಂಡ್‌ನೊಂದಿಗೆ ಸಹಯೋಗ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ನನಗೆ ನಿಜವಾಗಲೂ ಕಾತರವಾಗಿದೆ.” ಎಂದರು.