ಮ್ಕಾಕ್ಸ್ ವೆಲ್ ಅಬ್ಬರದ ಶತಕ: ಆಸೀಸ್ ಗೆ ರೋಚಕ ಜಯ, ಗಾಯಕ್ವಾಡ್ ಆಟ ವ್ಯರ್ಥ

ಗುವಾಹಟಿ, ನ.28-ಮ್ಯಾಕ್ಸ್ ವೆಲ್ ಅವರ ಭರ್ಜರಿ ಶತಕದ ನೆರವಿನಿಂದ ಭಾರತದ ವಿರುದ್ಧ ಟಿ.20 ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ
5 ವಿಕೆಟ್ ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಹೋರಾಟವನ್ನು ಆಸೀಸ್ ಜೀವಂತವಾಗಿರಿಸಿಕೊಂಡಿದೆ.
ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಕಾಯ್ದುಕೊಂಡಿತು. ಗಾಯಕ್ವಾಡ್ ಶತಕ ವ್ಯರ್ಥವಾಯಿತು.


ಕೊನೆ ಎಸೆತದವರೆಗೂ ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿಯುವಂತೆ ಮಾಡಿತ್ತು. ಅಂತಿಮವಾಗಿ ಮ್ಯಾಕ್ಸ್ ವೆಲ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಬೃಹತ್ ಮೊತ್ತದ ಸವಾಲಿಗೆ ಬ್ಯಾಟ್ ಬೀಸಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 225 ರನ್ ಗಳಿಸಿತು.
ಟ್ರಾವಿಸ್ ಹೆಡ್ 35, ಅರೋನ್ 16, ಜೋಶ್ ಲಿಂಗ್ಲಿಸ್ 10, ಟಿಮ್ ಡೇವಿಡ್ ಶೂನ್ಯಕ್ಕೆ ಹಾಗೂ ಮಾರ್ಕಸ್ 17 ರನ್ ಔಟಾದರು.
134 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು . ಭಾರತ ಜಯಗಳಿಸುವ ಸುಳಿವು ದೊರೆತಿತ್ತು. ಆದರೆ ಮ್ತಾಕ್ಸ್ ವೆಲ್ ಈ ಜಯವನ್ನು ಕಸಿದುಕೊಂಡರು.
ಮ್ಯಾಕ್ಸ್ ವೆಲ್ 48 ಎಸೆತಗಳಲ್ಲಿ 8 ಬೌಂಡರಿ ಮತ್ತು 8 ಸಿಕ್ಸರ್ ಬಾರಿಸಿ, ಅಜೇಯ 104 ರನ್ ಗಳಿಸಿದರು. ಈ ಮೂಲಕ ಟಿ.20ಯಲ್ಲಿ ನಾಲ್ಕನೆ ಶತಕ ಬಾರಿಸಿದರು.
ಮ್ಯಾಥ್ಯೂ 28 ರನ್ ಗಳಿಸಿ ಔಟಾಗದೆ ಉಳಿದರು.
ಪ್ರಸಿದ್ಧ್ ಕೃಷ್ಣ 4 ಓವರ್ ಗಳಲ್ಲಿ 68 ರನ್ ನೀಡಿ ಬಲು ದುಬಾರಿ ಎನಿಸಿದರು. ರವಿ 2, ಅರ್ಷ್ ದೀಪ್, ಅವೇಶ್ ಖಾನ್ ಮತ್ತು ಅಕ್ಸರ್ ಪಟೇಲ್ ತಲಾ ಒಂದು ವಿಕೆಟ್ ಗಳಿಸಿದರು.
ಟಾಸ್ ಸೋತು ಮೊದಲು ಭಾರತ ಮೊದಲು ಬ್ಯಾಟ್ ಮಾಡಿತು. ಋತುರಾಜ್ ಗಾಯಕ್ವಾಡ್ ಆವರ ಸಿಡಿಲಬ್ಬರದ ಅಜೇಯ ಶತಕದ ನೆರವಿನಿಂದ 20 ಓವರ್‌ಗಳಲ್ಲಿ ಕೇವಲ‌ ಮೂರು ವಿಕೆಟ್ ಕಳೆದುಕೊಂಡು 222 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಭಾರತ 24 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಇಶಾನ್ ಕಿಶನ್ ಶೂನ್ಯಕ್ಕೆ ಹಾಗೂ ಯಶಸ್ವಿ ಜೈಸ್ವಾಲ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಗಾಯಕ್ವಾಡ್ ಹಾಗೂ ನಾಯಕ ಸೂರ್ಯಕುಮಾರ್ ತಂಡದ ಮೊತ್ತವನ್ನು 81 ರನ್ ಗಳವರೆಗೆ‌ ಕೊಂಡೊಯ್ದರು. ಚೆನ್ನಾಗಿ ಆಡುತ್ತಿದ್ದ ಸೂರ್ಯಕುಮಾರ್ 29 ಎಸೆತಗಳಲ್ಲಿ 39 ರನ್ ಗಳಿಸಿ ನಿರ್ಗಮಿಸಿದರು.
ಈ ಹಂತದಲ್ಲಿ ತಿಲಕ್ ವರ್ಮ ಹಾಗೂ ಗಾಯಕ್ವಾಡ್ ಆಸೀಸ್ ಬೌಲಿಂಗ್ ದಾಳಿಯನ್ನು ದೂಳಿ ಪಟ ಮಾಡಿದರು.
ಒಂದೆಡೆ ಗಾಯಕ್ವಾಡ್ ಆಸೀಸ್ ಬೌಲರ್ ಗಳನ್ನು ಮನಬಂದಂತೆ ಥಳಿಸಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಬೌಂಡರಿ ಸಿಕ್ಸರ್ ಗಳನ್ನು ಬಾರಿಸಿ ಭರ್ಜರಿ ಶತಕ ಸಿಡಿಸಿದರು.
ಗಾಯಕ್ವಾಡ್ 57 ಎಸೆತಗಳಲ್ಲಿ 13 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಿಡಿಸಿ ಅಜೇಯ 127 ರನ್ ಚಚ್ಚಿದರು. ತಿಲಕ್ ವರ್ಮಾ ಗಾಯಕ್ವಾಡ್ ಸಾಥ್ ನೀಡಿ 24 ಎಸೆತಗಳಲ್ಲಿ 31 ರನ್ ಗಳಿಸಿ ಔಟಾಗದೆ ಉಳಿದರು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್ ಗೆ 141 ರನ್ ಸೇರಿಸಿತು.
ಆಸ್ಟ್ರೇಲಿಯಾ ಪರ ರಿಚರ್ಡ್‌ ಸನ್,ಬೆಹ್ರನ್ ಡ್ರೋಪ್ ಹಾಗೂ ನಾಥನ್ ತಲಾ ಒಂದು ವಿಕೆಟ್ ಪಡೆದರು.