ಮೌಲ್ಯಾಧರಿತ ಶಿಕ್ಷಣಕ್ಕೆ ಒತ್ತು ಕೊಡಲು ಪಟ್ಟದ್ದೇವರು ಸಲಹೆ

ಭಾಲ್ಕಿ:ಮಾ.23: 2021ರ ಪಿಯು ವಾರ್ಷಿಕ ಪರೀಕ್ಷೆ ಗುಣಾತ್ಮಕವಾಗಿ ಮತ್ತು ಸಂಖ್ಯಾತ್ಮಕವಾಗಿ ಹೆಚ್ಚಳವಾಗಬೇಕಾದರೆ ಪಾಠ ಮಾಡುವ ಉಪನ್ಯಾಸಕರು ಮಕ್ಕಳಿಗೆ ತಿಳಿಯುವ ಹಾಗೆ ಬೋಧನೆ ಮಾಡಬೇಕು ಎಂದು ಬೀದರನ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್ ಅಭಿಪ್ರಾಯಪಟ್ಟರು.

್ಕಇಲ್ಲಿನ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಬೀದರ ಮತ್ತು ಜಿಲ್ಲಾ ಪ್ರಾಚಾರ್ಯರ ಸಂಘ ಹಾಗು ಉಪನ್ಯಾಸಕರ ಸಂಘ ಬೀದರ ಮತ್ತು ಸಂಗಮೇಶ್ವರ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ ಪಿಯು ಫಲಿತಾಂಶ ವೃದ್ಧಿಸುವ ಕುರಿತು ಆಯೋಜಿಸಿದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೋವಿಡ್-19ರ ಪರಿಣಾಮದಿಂದ ಸುಮಾರು 09 ತಿಂಗಳಿನಿಂದ ಮಕ್ಕಳು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.ಜನೆವರಿ-ಪೆಬ್ರವರಿಯಿಂದಲೇ ವರ್ಗಗಳು ಆರಂಭಗೊಂಡಿರುವುದರಿಂದ ಮೇ-ಜೂನನಲ್ಲಿ ನಡೆಯುವ ಪಿಯು ವಾರ್ಷಿಕ ಪರೀಕ್ಷೆಗಳಿಗೆ ಮಕ್ಕಳನ್ನು ಅಣಿಗೊಳಿಸಬೇಕಾಗಿದೆ. ವರ್ಗಗಳಿಗೆ ಹಾಜರಾಗುವಂತೆ ಮಕ್ಕಳ-ಪಾಲಕರ ಮನವೋಲಿಸುವುದು ಅಗತ್ಯವಾಗಿದೆ. ಸಾಂಘಿಕ ಪ್ರಯತ್ನದಿಂದ ಫಲಿತಾಂಶ ವೃದ್ಧಿಸಲು ಸಾಧ್ಯವಿದೆ.ಬೋಧಕ ವರ್ಗ ಕರ್ತವ್ಯದಲ್ಲಿ ಅಸಡ್ಡೆ ತೋರಿದರೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಸಿದರು.

ಸಾನಿಧ್ಯವಹಿಸಿ ಮಾತನಾಡಿದ ಹಿರೇಮಠದ ಪೀಠಾಧಿಪತಿ ಪೂಜ್ಯ ಗುರುಬಸವ ಪಟ್ಟದ್ದೇವರು,ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ.ಬೋಧಕ ವರ್ಗದವರು ಕೊರೊನಾ ಆತಂಕದ ಮಧ್ಯೆ ಶೃದ್ಧೆ,ಭಕ್ತಿ,ನಿಷ್ಠೆ ಮತ್ತು ಆಸಕ್ತಿಯಿಂದ ಮೌಲ್ಯಾಧಾರಿತ,ಸಂಸ್ಕಾರಭರಿತ ಶಿಕ್ಷಣಕ್ಕೆ ಪ್ರಥಮಾಧ್ಯತೆ ನೀಡಬೇಕು.ಪಿಯು ಫಲಿತಾಂಶ ಹೆಚ್ಚಿಸಲು ಉಪನಿರ್ದೇಶಕ ಶಾಹಾಬಾದಕರ ಅವರ ಕಳಕಳಿಯ ಮನವಿಗೆ ಜಿಲ್ಲೆಯ ಉಪನ್ಯಾಸಕರು ಹೃದಯಾಂತರಾಳದಿಂದ ಸ್ಪಂದಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಹಣಮಂತರಾವ ಮೈಲಾರಿ,ಜಿಲ್ಲಾ ಪ್ರಾಚಾರ್ಯರ ಸಂಘದ ಕಾರ್ಯದರ್ಶಿ ವಿಠಲದಾಸ ಪ್ಯಾಗೆ,ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಓಂಕಾರ ಸೂರ್ಯವಂಶಿ ಮಾತನಾಡಿ,ಪರೀಕ್ಷೆ ಕುರಿತು ಮಕ್ಕಳಲ್ಲಿನ ಭಯವನ್ನು ದೂರಮಾಡಬೇಕು.ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಪ್ರತ್ಯೇಕವಾಗಿ ಬೋಧನೆ ಮಾಡಬೇಕು.ಬಡ ಮಕ್ಕಳಿಗೆ ಕ್ಯಾಪ್ಸುಲ್‍ಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಗುರುಕುಲ ಕಾಲೇಜಿನ ಪ್ರಾಚಾರ್ಯ ಬಸವರಾಜ ಮೊಳಕೇರಿ,ದಾಖಲಾತಿಗೂ ಮತ್ತು ಹಾಜರಾತಿಗೂ ಹೆಚ್ಚಿನ ವ್ಯಾತ್ಯಾಸವಿದ್ದಲ್ಲಿ ಫಲಿತಾಂಶ ಸುಧಾರಿಸಲು ಕಷ್ಟವಾಗುತ್ತದೆ ಬಹು ಮಾರ್ಮಿಕವಾಗಿ ಪ್ರಾಸ್ತಾವಿಕ ಮಾತನಾಡಿದರು.

ರಾಜ್ಯ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಉಮೇಶ ಅಷ್ಟಗಿ,ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಸುಖದೇವ ಬಿರಾದಾರ,ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರ.ಕಾರ್ಯದರ್ಶಿ ರಾಜಶೇಖರ ಮಂಗಲಗಿ,ಬಸವರಾಜ ಏಣಕೆಮೊರೆ,ಆಂಜನಯಲು ಪಡೆ ಮತ್ತು ಡೈಮಂಡ ಕಾಲೇಜಿನ ಪ್ರಾಚಾರ್ಯ ಮಸ್ತಾನವಲಿ ಸೇರಿದಂತೆ ವಿವಿಧ ಕಾಲೇಜಿನ ಪ್ರಾಚಾರ್ಯರು ಮತ್ತು ಉಪನ್ಯಾಸಕ ವರ್ಗ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.