ಮೌಲಿಕ ಶಿಕ್ಷಣ ಇಂದಿನ ಅಗತ್ಯ ಡಾ.ಗುಜ್ಜಲ್ ಹುಲುಗಪ್ಪ.


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ1: ಶಿಕ್ಷಣದ ಜೊತೆ ಮೌಲಿಕ ವಿಚಾರಧಾರೆ, ನೈತಿಕತೆಯನ್ಮು ರೂಪಿಸಬೇಕಾಗಿರುವುದು ಅಗತ್ಯವಾಗಿದೆ ಎಂದು  ಶ್ರೀ ಶಂಕರ ಆನಂದ್ ಸಿಂಗ್ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಗುಜ್ಜಲ ಹುಲುಗಪ್ಪ ಹೇಳಿದರು.
ಹೊಸಪೇಟೆ ನಗರದ ಪುಣ್ಯ ಮೂರ್ತಿ ರಾಘಪ್ಪ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ   ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.  ಮಕ್ಕಳಿಗೆ ಶಿಕ್ಷಣದ ಜೊತೆಗೆ ವ್ಯಕ್ತಿತ್ವ, ಶಿಸ್ತು  ಮತ್ತು ಸೈದ್ಧಾಂತಿಕ ನೆಲೆಗಳಲ್ಲಿ ತಿಳಿಸಬೇಕಾಗಿದೆ ಮಕ್ಕಳು ಸಹ ಅಂಕಗಳ ಹೊರತಾಗಿ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು 31 ನೇ ವಾರ್ಡಿನ ನಗರಸಭಾ ಸದಸ್ಯ ತಾರಿಹಳ್ಳಿ ಜಂಬುನಾಥ  ಮಾತನಾಡಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳನ್ನು ಮತ್ತು ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ಒದಗಿಸಲು ಸದಾ ಸಿದ್ಧನಿದ್ದೇನೆ ಎಂದು  ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷೆ  ರೇಖಾ ಶ್ರೀನಿವಾಸ್ ವಹಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.  ಶಾಲೆಯ ಮುಖ್ಯಗುರು ವರಪ್ರಸಾದ್ ವಿ. ಕಂಪ್ಲಿ  ಪ್ರಾಸ್ತವಿಕವಾಗಿ ಸರ್ಕಾರದ ಯೋಜನೆಗಳ ಬಗ್ಗೆ ಕುರಿತು ಮಾತನಾಡಿದರು.  ಕಾರ್ಯಕ್ರಮದಲ್ಲಿ ಸಿ. ಆರ್. ಪಿ.  ನೇಕಾರ್ ನಾಗರಾಜ್ ಸ್ವಾಗತ   ಮಂಜುಳಾ  ನಿರೂಪಣೆ  ಕೆ ಎಸ್ ಮಂಜುಳಾ ಮತ್ತು ಹಿರಿಯ  ಶಿಕ್ಷಕಿ  ಸರಸ್ವತಿ. ವಿ. ಮಂಜುನಾಥ. ವಿ. ಇತರರು ಪಾಲ್ಗೊಂಡಿದ್ದರು.