ಮೌಲಾನಾ ಆಜಾದ್ ಮಾದರಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳವಿದ್ಯಾಭ್ಯಾಸಕ್ಕೆ ನೆರವಾಗುವುದೆ ಸರ್ಕಾರ?

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಜು. 5: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪ ಬಡಾವಣೆಯಲ್ಲಿಕಾರ್ಯಾರಂಭಗೊಂಡಿರುವ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಮಾದರಿಸರ್ಕಾರಿ ಶಾಲೆ ವಿದ್ಯಾರ್ಥಿಗಳು ಅಗತ್ಯ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ.ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ. ಇತ್ತೀಚೆಗೆ ವರ್ಗಾವಣೆಗೊಂಡವರ ಸ್ಥಾನಗಳಿಗೆ ಬೋಧಕರನೇಮಕವಾಗಿಲ್ಲ. ಇದರಿಂದ ವಿದ್ಯಾರ್ಥಿಗಳ ಪಾಠ-ಪ್ರವಚನಗಳ ಮೇಲೆ ಪರಿಣಾಮ ಬೀರುವಂತಾಗಿದೆ.ಶಾಲೆಯಲ್ಲಿ ಬಿಸಿಯೂಟ ವ್ಯವಸ್ಥೆ ಆರಂಭಗೊಂಡಿಲ್ಲ. ಇದರಿಂದ ದೂರದ ಪ್ರದೇಶಗಳಿಂದ ಆಗಮಿಸುವ ವಿದ್ಯಾರ್ಥಿಗಳು ಸಂಕಷ್ಟ ಪಡುವಂತಾಗಿದೆ. ಹಾಗೆಯೇ ಪ್ರಸಕ್ತ ಶೈಕ್ಷಣಿಕಸಾಲಿನ ಸಮವಸ್ತ್ರ, ಶೂ, ಬ್ಯಾಗ್ ವಿತರಣೆಯಾಗಿಲ್ಲ.ಶಾಲೆಗೆ ಸಂಬಂಧಿಸಿದಂತೆ ಆಟದ ಮೈದಾನವಿಲ್ಲವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಆಟೋಟಚಟುವಟಿಕೆಗಳೇ ಇಲ್ಲದಂತಾಗಿದೆ. ಶಾಲೆಯಲ್ಲಿ ಅಭ್ಯಾಸ ನಡೆಸುತ್ತಿರುವ ಬಹುತೇಕ ವಿದ್ಯಾರ್ಥಿಗಳುಬಡ, ಮಧ್ಯಮ, ಕೂಲಿಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದಾರೆ. ವಿದ್ಯಾರ್ಥಿಗಳಸರ್ವಾಂಗೀಣ ಶೈಕ್ಷಣಿಕ ಚಟುವಟಿಕೆಗೆ ಅಗತ್ಯ ಕ್ರಮವಾಗಬೇಕಾಗಿದೆ.ಈ ನಿಟ್ಟಿನಲ್ಲಿ ಕಂಪ್ಯೂಟರ್ ಕಲಿಕೆ, ಲೈಬ್ರರಿ, ವಿಜ್ಞಾನ ಲ್ಯಾಬೋರೇಟರಿ, ಸ್ಪೋಕನ್ಇಂಗ್ಲೀಷ್, ವ್ಯಕ್ತಿತ್ವ ವಿಕಸನ ತರಬೇತಿ ಸೇರಿದಂತೆ ಶೈಕ್ಷಣಿಕ ಚಟುವಟಿಕೆಗೆ ಪೂರಕ ಕ್ರಮಕೈಗೊಳ್ಳಬೇಕಾಗಿದೆ.ರಚನೆಯಾಗದ ಸಮಿತಿ: ಸರ್ಕಾರಿ ಶಾಲೆಗಳ ಅಭಿವೃದ್ದಿಯಲ್ಲಿ ಸಮುದಾಯದ ಸಹಭಾಗಿತ್ವ ಅತ್ಯಂತಪ್ರಮುಖವಾದುದಾಗಿದೆ. ಈ ಕಾರಣದಿಂದ ಶಾಲಾಭಿವೃದ್ದಿ ಸಮಿತಿಗಳನ್ನು ರಚಿಸಲಾಗುತ್ತದೆ.ಆದರೆ ಸದರಿ ಶಾಲೆಯಲ್ಲಿ ಶಾಲಾಭಿವೃದ್ದಿ ಸಮಿತಿ ರಚನೆಯಾಗಿಲ್ಲ. ತಕ್ಷಣವೇ ಸಮಿತಿ ರಚನೆಮಾಡಬೇಕು ಎಂದು ಕೆಲ ಪೋಷಕರು ಸಲಹೆ ನೀಡುತ್ತಾರೆ.ತಕ್ಷಣವೇ ಮೌಲಾನಾ ಆಜಾದ್ ಮಾದರಿ ಸರ್ಕಾರಿ ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ಸರ್ಕಾರಗಮನಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ಅಲ್ಪಸಂಖ್ಯಾತ ಕಲ್ಯಾಣಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಆದ್ಯ ಗಮನಹರಿಸಬೇಕಾಗಿದೆ ಎಂದು ಪೋಷಕರು ಮನವಿಮಾಡುತ್ತಾರೆ.