ಮೌಲಾನಾ ಅಜಾದ ಜೀವನ ಮಾದರಿ; ಹಿಂಡಸಗೇರಿ

ಹುಬ್ಬಳ್ಳಿ,ನ12- ರಾಷ್ಟ್ರೀಯ ಏಕ್ಯತೆ, ಸಮಗ್ರತೆಗೆ ಶ್ರಮಿಸಿದ, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಆದರ್ಶ ಜೀವನವು ಯುವ ಜನಾಂಗಕ್ಕೆ ಮಾದರಿಯಾಗಿದೆ ಎಂದು ಮಾಜಿ ಸಚಿವರು ಹಾಗೂ ಸಮಾಜದ ಹಿರಿಯ ಮುಖಂಡರಾದ ಎ.ಎಂ ಹಿಂಡಸಗೇರಿ ಇಂದಿಲ್ಲಿ ಹೇಳಿದರು.

  ಅವರು ಕರ್ನಾಟಕ ಮುಸ್ಲಿಂ ರೈಟ್ಸ ಪೌಂಡೇಶನ ಹಾಗೂ ಕರ್ನಾಟಕ ಮುಸ್ಲಿಂ ಎಂಪ್ಲಾಯಿಜ್ ಕಲ್ಚರಲ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿಯ ಹಿಂಡಿಸಗೇರಿಯವರ ನಿವಾಸದ ಅವರಣದಲ್ಲಿ ಜರುಗಿದ ಮೌಲಾನಾ ಅಬುಲ ಕಲಾಂ ಅಜಾದ  ಜನ್ಮದಿನಾಚರಣೆ ಮತ್ತು ಹುಬ್ಬಳ್ಳಿಯ ಅಜಾದ ಅರ್ಬನ್ ಕೂ-ಆಫ್ ಭಾಂಕ್ ಆಡಳಿತ ಮಂಡಳಿಗೆ ಹಿಂಡಸಗೇರಿಯವರ ನೇತೃತ್ವದಲ್ಲಿ ಗೆಲವು ಸಾದಿಸಿದ್ದರಿಂದ ಎ.ಎಂ ಹಿಂಡಸಗೇರಿ ಅವರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಸನ್ಮಾನ್ ಸ್ವೀಕರಿಸಿ  ಮಾತನಾಡಿದರು. ಇದೆ ಸಂದರ್ಭದಲ್ಲಿ ನಾಜೀಮ ಹಿಂಡಸಗೇರಿ. ಮುಸ್ತಾಕ ಸುಂಡಕೆ. ಮೌಲಾನ ಮಹ್ಮದಅಲಿ ಖಾಜಿ. ಮತ್ತಿತರರನ್ನು ಸನ್ಮಾನಿಸಲಾಯಿತು.

 ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿÀ ಅದ್ಯಕ್ಷರಾದ ಅನ್ವರ ಮುಧೋಳ ಮಾತನಾಡುತ್ತ, ಮೌಲಾನಾ ಅಬುಲ ಕಲಾಂ ಅಜಾದ ಅವರು ಒಬ್ಬ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು, ಉರ್ದು ವಿದ್ವಾಂಶರಾಗಿದ್ದರು. ಅನೇಕ ಲೇಖನಗಳನ್ನು ಬರೆದಿದ್ದಾರೆ. ದೇಶದ ಏಕತೆ ಹಾಗೂ ಸಮಗ್ರತೆಗೆ ಹೋರಾಟ ಮಾಡಿದ ದೇಶಪ್ರೇಮಿಗಳು, ಇವರೂಬ್ಬ ಶ್ರೇಷ್ಠ ರಾಷ್ಟ್ರೀಯವಾದಿಗಳಾಗಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡಗೆಯನ್ನು ಗಮನಿಸಿ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. ಎಂದು ಹೇಳಿದರು   

 ಕರ್ನಾಟಕ ಮುಸ್ಲಿಂ ಎಂಪ್ಲಾಯಿಜ್ ಕಲ್ಚರಲ್ ಅಸೋಸಯೇಷನ್ ಜಿಲ್ಲಾ ಅದ್ಯಕ್ಷರಾದ  ನಜೀರಅಹ್ಮದ ಕೋಲಕಾರ ನೇತೃತ್ವದಲ್ಲಿ ಕಾರ್ಯಕ್ರಮ ಸಂಘಟಿಸಿಲಾಗಿತ್ತು. ರಾಜ್ಯ ಕಾರ್ಮಿಕ ಮುಖಂಡ ಬಾಬಾಜಾನ ಮುಧೋಳ. ಎಂ ಎಂ ಬುಡನಖಾನ. ಶೆಫೀ ಮುದ್ದೇಬಿಹಾಳ. ಆಶೀಫ ಪಾಚಾಪುರಿ. ಪಾರೋಕ ಅಬ್ಬುನವರ. ಅಬ್ದುಲ್ ಅಜೀಜ ದೇಶಾಯಿ. ಇಕ್ಬಾಲ ಚಿತ್ತೆವಾಲೆ. ರಪೀಕ ಬಂಕಾಪುರ. ಮುಜಿಮಿಲ್ ಮಕಾನದಾರ. ಬಸೀರ ಮುಧೋಳ. ಅಪ್ತಾಬ ತಿಮ್ಮನಕಟ್ಟಿ ಮುಂತಾದವರು ಪಾಲ್ಗೂಂಡಿದ್ದರು.