ಮೌನ ಮುರಿದ ನವಾಜುದ್ದೀನ್ ಸಿದ್ದಿಕಿ – “ನಾನು ಮಾಜಿ ಪತ್ನಿಗೆ ಪ್ರತೀ ತಿಂಗಳು ರೂ.೧೦ ಲಕ್ಷ ನೀಡುತ್ತೇನೆ, ಅವಳು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ”

ನಟ ನವಾಜುದ್ದೀನ್ ಸಿದ್ದಿಕಿ ಅವರು ತಮ್ಮ ಮಾಜಿ ಪತ್ನಿ ಆಲಿಯಾ ಮಾಡುತ್ತಿರುವ ಆರೋಪದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನವಾಜ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹೀಗೆ ಬರೆದಿದ್ದಾರೆ–
’ನನ್ನ ಮೌನದಿಂದಾಗಿ, ನಾನು ಎಲ್ಲೆಡೆ ತಪ್ಪು ಮಾಡುತ್ತಿದ್ದೇನೆ ಎಂದೇ ಸಾಬೀತಾಗಿದೆ. ನನ್ನ ಮಕ್ಕಳು ಈ ಇಡೀ ನಾಟಕವನ್ನು ಎಲ್ಲಾದರೂ ಓದಿರಬೇಕು ಎಂಬ ಕಾರಣಕ್ಕೆ ನಾನು ಇಷ್ಟು ದಿನ ಸುಮ್ಮನಿದ್ದೆ. ಕಳೆದ ೪೫ ದಿನಗಳಿಂದ ಭಾರತದಲ್ಲಿ ನನ್ನ ಮಕ್ಕಳು ಒತ್ತೆಯಾಳುಗಳಾಗಿದ್ದಾರೆ ಮತ್ತು ಶಾಲೆಗೆ ಹೋಗುತ್ತಿಲ್ಲ ಎಂಬುದು ಯಾರಿಗಾದರೂ ತಿಳಿದಿದೆಯೇ?” ಎಂದು ನವಾಜ್ ಬರೆದಿದ್ದಾರೆ. “ಆ ಮಕ್ಕಳು ಬಹಳ ದಿನಗಳಿಂದ ಶಾಲೆಗೆ ಗೈರುಹಾಜರಾಗಿದ್ದಾರೆ ಎಂದು ನನಗೆ ಪ್ರತಿದಿನ ಶಾಲೆಯಿಂದ ಪತ್ರಗಳು ಬರುತ್ತಿವೆ”ಎಂದಿರುವ
ನವಾಜ್ ಅವರು ಸುದೀರ್ಘ ಪೋಸ್ಟ್ ನ್ನು ಹಾಕಿದ್ದಾರೆ. ಅದರಲ್ಲಿ ಅವರು ಮಾಜಿ ಪತ್ನಿ ಆಲಿಯಾ, ಮಕ್ಕಳು ಮತ್ತು ತಮ್ಮ ಮೇಲಿನ ಎಲ್ಲಾ ಆರೋಪಗಳ ವಿವರಗಳನ್ನು ನೀಡಿದ್ದಾರೆ.


“ಮೌನವು ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ”:
“ತಾನು ಮತ್ತು ಆಲಿಯಾ ಕಳೆದ ಹಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿಲ್ಲ ಮತ್ತು ಮಕ್ಕಳ ಕಾರಣದಿಂದಾಗಿ ಮಾತ್ರ ಸಂಪರ್ಕ ಹೊಂದಿದ್ದೇವೆ ಎಂದು ನವಾಜ್ ಬರೆದಿದ್ದಾರೆ.
ನವಾಜ್ ತಮ್ಮ ಪೋಸ್ಟ್‌ನಲ್ಲಿ, ’ನಾನು ಮತ್ತು ಆಲಿಯಾ ಕಳೆದ ಹಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿಲ್ಲ. ನಾವು ವಿಚ್ಛೇದನ ಹೊಂದಿದ್ದೇವೆ, ಆದರೆ ನಾವು ಮಕ್ಕಳ ಸಲುವಾಗಿ ಮಾತ್ರ ಸಂಪರ್ಕ ಹೊಂದಿದ್ದೇವೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು, ಪತ್ರಿಕಾ ವೇದಿಕೆಗಳು ಮತ್ತು ಕೆಲವು ಜನರ ಗುಂಪು ನನ್ನ ಪಾತ್ರದ ’ಹತ್ಯೆ’ಯನ್ನು ಏಕಪಕ್ಷೀಯ ಮತ್ತು ವೀಡಿಯೊಗಳ ಮೂಲಕ ಆನಂದಿಸುತ್ತಿವೆ.” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ನವಾಜ್ ಹೇಳಿದ್ದಾರೆ- ನಾನು ಮುಂಬೈನ ವರ್ಸೋವಾದಲ್ಲಿ ಮಕ್ಕಳಿಗಾಗಿ ಸಮುದ್ರಕ್ಕೆ ಎದುರಾಗಿರುವ ಅಪಾರ್ಟ್ಮೆಂಟ್ ನ್ನು ಸಹ ತೆಗೆದುಕೊಂಡಿದ್ದೇನೆ. ಇದಲ್ಲದೇ ಅವರಿಗಾಗಿ ದುಬೈನಲ್ಲಿ ಮನೆ ಕೂಡ ಖರೀದಿಸಲಾಗಿತ್ತು.
ಮಕ್ಕಳ ಉತ್ತಮ ಸಂಸ್ಕಾರಕ್ಕಾಗಿ ಕಳೆದ ೨ ವರ್ಷಗಳಿಂದ ಪ್ರತಿ ತಿಂಗಳು ೧೦ ಲಕ್ಷ ರೂಪಾಯಿ ನೀಡುತ್ತಿದ್ದೆ. ಅವಳು ನನ್ನ ಮಕ್ಕಳೊಂದಿಗೆ ದುಬೈಗೆ ಹೋದಾಗ, ನಾನು ಅವಳಿಗೆ ಶಾಲಾ ಶುಲ್ಕ, ವೈದ್ಯಕೀಯ ಮತ್ತು ಪ್ರಯಾಣದ ವೆಚ್ಚವನ್ನು ಹೊರತುಪಡಿಸಿ ಪ್ರತಿ ತಿಂಗಳು ೫-೭ ಲಕ್ಷ ರೂಪಾಯಿಗಳನ್ನು ಕಳುಹಿಸುತ್ತಿದ್ದೆ.” ಎಂದಿದ್ದಾರೆ.
ನವಾಜ್ ಅವರು, ’ನಾನು ಅವಳ ೩ ಫಿಲ್ಮ್ ಗಳಿಗೆ ಕೋಟಿಗಟ್ಟಲೆ ವೆಚ್ಚ ಮಾಡಿದ್ದೇನೆ. ಅವಳು ನನ್ನ ಮಕ್ಕಳ ತಾಯಿ ಎಂಬ ಕಾರಣಕ್ಕೆ ನಾನು ಇದನ್ನು ಮಾಡಿದ್ದೇನೆ. ಮಕ್ಕಳಿಗಾಗಿ ಐಷಾರಾಮಿ ಕಾರನ್ನು ಸಹ ನೀಡಲಾಯಿತು, ಆದರೆ ಆಲಿಯಾ ಅದನ್ನು ಮಾರಿ ಅದರಿಂದ ಬಂದ ಹಣವನ್ನು ತಾನೇ ಖರ್ಚು ಮಾಡಿದ್ದಾರೆ.
ಆಲಿಯಾಗೆ ಹೆಚ್ಚಿನ ಹಣ ಬೇಕಾಗಿತ್ತು, ಈ ಕಾರಣಕ್ಕಾಗಿ ಅವಳು ನನ್ನ ಮತ್ತು ನನ್ನ ತಾಯಿಯ ಮೇಲೆ ಆರೋಪ ಮಾಡಿ ಕೇಸ್ ಹಾಕಿದ್ದಳು. ಈ ಹಿಂದೆಯೂ ಈ ರೀತಿ ಮಾಡಿ ಹಣ ಪಡೆದು ಪ್ರಕರಣ ಹಿಂಪಡೆದಿದ್ದರೆಂದೂ ನೆನಪಿಸಿಕೊಂಡಿದ್ದಾರೆ.
ನವಾಜ್ ಅವರು ಇಂದು ತಾನು ಏನು ಸಂಪಾದಿಸುತ್ತಿದ್ದರೂ ಅದು ಅವರ ಮಕ್ಕಳಿಗಾಗಿ ಎಂದು ಬರೆದಿದ್ದಾರೆ.
ನವಾಜ್ ಅವರು, ’ನನ್ನ ಮಕ್ಕಳು ರಜೆಯ ಮೇಲೆ ಭಾರತಕ್ಕೆ ಬಂದಾಗಲೆಲ್ಲಾ ಅವರು ಯಾವಾಗಲೂ ತಮ್ಮ ಅಜ್ಜಿಯೊಂದಿಗೆ ಇರುತ್ತಾರೆ. ಅವರನ್ನು ಮನೆಯಿಂದ ಹೊರತರುವುದು ಹೇಗೆ? ಆ ಸಮಯದಲ್ಲಿ ನಾನು ನನ್ನ ಮನೆಯಲ್ಲಿ ಇರಲಿಲ್ಲ. ಇದೇ ವೇಳೆ ಆಲಿಯಾ ಮನೆಯಿಂದ ಹೊರ ಹಾಕುವಾಗ ಯಾಕೆ ವೀಡಿಯೋ ಮಾಡಲಿಲ್ಲ.? ಅವಳು ಪ್ರತಿ ಬಾರಿಯೂ ದು:ಖದ, ನೋಡುಗರಿಗೆ ಮನಕರಗುವ ದೃಶ್ಯಗಳದ್ದೇ ವೀಡಿಯೊಗಳನ್ನು ಏಕೆ ಹೊರತರುತ್ತಿದ್ದಾಳೆ.? ಮಕ್ಕಳನ್ನೂ ತನ್ನ ನಾಟಕದತ್ತ ಸೆಳೆದಿದ್ದಾಳೆ. ಇಷ್ಟೆಲ್ಲಾ ಮಾಡುವ ಮೂಲಕ ಆಕೆ ನನ್ನನ್ನು ಬ್ಲಾಕ್ ಮೇಲ್ ಮಾಡಲು ಯತ್ನಿಸುತ್ತಿದ್ದಾಳೆ. ಅವಳು ಜನರಲ್ಲಿ ನನ್ನ ಇಮೇಜ್ ನ್ನು ಹಾಳು ಮಾಡಲು ಬಯಸುತ್ತಾಳೆ ಎಂದು ನೋವಿನಿಂದ ಬರೆದುಕೊಂಡಿದ್ದಾರೆ.
ಕೊನೆಯಲ್ಲಿ ಬರೆಯಲಾಗಿದೆ – ನಾನು ಶೋರಾ ಮತ್ತು ಯಾನಿಯನ್ನು ಪ್ರೀತಿಸುತ್ತೇನೆ.
ನವಾಜ್ ಅವರು ಟಿಪ್ಪಣಿಯ ಕೊನೆಯಲ್ಲಿ ಬರೆದಿದ್ದಾರೆ, ’ಯಾವುದೇ ಪೋಷಕರು ತಮ್ಮ ಮಕ್ಕಳು ತಮ್ಮ ಅಧ್ಯಯನವನ್ನು ಕಳೆದುಕೊಳ್ಳುವುದನ್ನು ಅಥವಾ ಅವರ ಶಿಕ್ಷಣದ ಮೇಲೆ ಪರಿಣಾಮ ಬೀರುವುದನ್ನು ಬಯಸುವುದಿಲ್ಲ. ಅವರು ಯಾವಾಗಲೂ ತಮ್ಮ ಮಕ್ಕಳಿಗೆ ಪ್ರಪಂಚದ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸುತ್ತಾರೆ.
ನಾನು ಇಂದು ಏನನ್ನು ಸಂಪಾದಿಸುತ್ತಿದ್ದೇನೆ, ಅದು ನನ್ನ ಇಬ್ಬರು ಮಕ್ಕಳಿಗೆ ಸೇರಿದೆ ಮತ್ತು ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಶೋರಾ ಮತ್ತು ಯಾನಿಯನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಅವರ ಸುರಕ್ಷತೆಗಾಗಿ ಭವಿಷ್ಯದಲ್ಲಿ ನಾನು ಯಾವುದೇ ಹಂತಕ್ಕೆ ಹೋಗಬಹುದು “ಎಂದು ಬರೆದಿರುವರು.
ಆಲಿಯಾ ಆರೋಪ:
ನವಾಜ್‌ರ ತಾಯಿಯ ಮೇಲೆ ಹಲ್ಲೆ ಆರೋಪ ಮಾಡಿದಾಗ ನವಾಜುದ್ದೀನ್ ಸಿದ್ದಿಕಿ ಮತ್ತು ಆಲಿಯಾ ಅವರ ಜಗಳ ಪ್ರಾರಂಭವಾಯಿತು. ನವಾಜ್ ಅವರ ಕುಟುಂಬ ಸದಸ್ಯರು ತನ್ನನ್ನು ಶೋಷಿಸುತ್ತಿದ್ದಾರೆ ಮತ್ತು ತಮ್ಮ ಆಸ್ತಿಯಿಂದ ಹೊರಹಾಕುತ್ತಿದ್ದಾರೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ.
ಆಲಿಯಾ ಇತ್ತೀಚೆಗೆ ನವಾಜ್ ಮೇಲಿನ ಕೋಪವನ್ನು ಹೊರಹಾಕುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನವಾಜ್‌ರಿಂದ ವಿಚ್ಛೇದನದ ನಂತರವೂ ನಾವಿಬ್ಬರೂ ಸಂಬಂಧ ಹೊಂದಿದ್ದೇವೆ ಮತ್ತು ವಿಚ್ಛೇದನದ ನಂತರವೇ ಎರಡನೇ ಮಗು ಜನಿಸಿತು, ಆದರೆ ನವಾಜ್ ಅವರನ್ನು ಎಂದಿಗೂ ಗೌರವಿಸಲಿಲ್ಲ ಎಂದು ಹೇಳಿದ್ದರು. ಮತ್ತೊಂದೆಡೆ, ನವಾಜ್ ತಾಯಿ ಆಲಿಯಾ ವಿರುದ್ಧ ಆರೋಪ ಮಾಡಿದ್ದು, ಎರಡನೇ ಮಗು ನವಾಜ್ ಅವರದ್ದಲ್ಲ, ಬೇರೆಯವರದು ಎಂದು ಹೇಳಿದ್ದಾರೆ.
ನವಾಜ್ ವಿರುದ್ಧ ಆಲಿಯಾ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು:
ನವಾಜುದ್ದೀನ್ ಸಿದ್ದಿಕಿ ಮೇಲೆ ಮಾಜಿ ಪತ್ನಿ ಆಲಿಯಾ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆಲಿಯಾ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ, ’ನವಾಜ್ ಅವರ ಹೃದಯಹೀನ ತಾಯಿ ನನ್ನ ಮುಗ್ಧ ಮಗುವನ್ನು ಅಕ್ರಮ ಎಂದು ಕರೆಯುತ್ತಾರೆ ಮತ್ತು ಈ ಬಡ ವ್ಯಕ್ತಿ ಮೌನವಾಗಿದ್ದಾರೆ ಎಂದೂ ಹೇಳಿದ್ದರು.
ವರ್ಸೋವಾ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಅತ್ಯಾಚಾರದ ದೂರು (ಪುರಾವೆ ಸಹಿತ) ದಾಖಲಿಸಿದ್ದಾರೆ. ಏನೇ ಆಗಲಿ, ಆದರೆ ನನ್ನ ಮುಗ್ಧ ಮಕ್ಕಳನ್ನು ಈ ಹೃದಯಹೀನನ ಕೈಯಲ್ಲಿ ನಾನು ಬಿಡುವುದಿಲ್ಲ ಎನ್ನುತ್ತಾ ಆಲಿಯಾ ನವಾಜ್ ರ ಡಾರ್ಕ್ ಸೈಡ್ ನ್ನು ಸಹ ನೋಡಲು ಹೇಳಿದ್ದಾರೆ.
ಆಲಿಯಾ ಅವರು ನವಾಜುದ್ದೀನ್ ರನ್ನು ದುರಹಂಕಾರಿ ಎಂದು ಕರೆದಿದ್ದಾರೆ. ಅವರು ಮತ್ತಷ್ಟು ಹೇಳಿದರು, ’ಈ ವ್ಯಕ್ತಿಗೆ ಅಧಿಕಾರ ಮತ್ತು ಖ್ಯಾತಿಯ ಹುಚ್ಚಿದೆ ಎಂದು ನಾನು ಭಾವಿಸುತ್ತೇನೆ. ಇವತ್ತಿಗೂ ಮಕ್ಕಳು ನನ್ನನ್ನು ಅಂಟಿಕೊಂಡು ಮಲಗುತ್ತಾರೆ, ಅವನು ಅವರನ್ನು ಅಪ್ಪಿಕೊಂಡೇ ಇರಲಿಲ್ಲ. ನ್ಯಾಯಾಲಯದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ, ಹೀಗಾಗಿ ನನ್ನ ಪರವಾಗಿ ತೀರ್ಪು ಬರುವುದು ಖಚಿತ. ನೀವೆಲ್ಲರೂ ಈ ಮನುಷ್ಯನ ಕರಾಳ ಮುಖವನ್ನು ಸಹ ನೋಡಬೇಕೆಂದು ವಿನಂತಿಸುತ್ತೇನೆ..
ಆಲಿಯಾ ಸಿದ್ದಿಕಿ ನವಾಜುದ್ದೀನ್ ಅವರ ವೀಡಿಯೊವನ್ನು ರಹಸ್ಯವಾಗಿ ಮಾಡಿದ್ದಾರೆ: ಗಂಭೀರ ಆರೋಪಗಳನ್ನು ಮಾಡಿದ್ದಾರೆ, ಕ್ಷಮಿಸಿ ನಾನು ಅಂತಹ ವ್ಯಕ್ತಿಗೆ ೧೮ ವರ್ಷಗಳನ್ನು ನೀಡಿದ್ದೇನೆ ಎಂದೂ ಹೇಳಿದ್ದಾರೆ.
ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಪತ್ನಿ ಆಲಿಯಾ ಸಿದ್ದಿಕಿ ನಡುವೆ ಶುರುವಾದ ವಿವಾದ ಹೆಚ್ಚಾಗುತ್ತಿದೆ. ಫೆಬ್ರವರಿ ೧೦ ರಂದು ಆಲಿಯಾ ಇನ್ಸ್ಟಾಗ್ರಾಮ್ನಲ್ಲಿ ನವಾಜ್ ಅವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮನೆಯೊಳಗೆ ಕಾಣಿಸಿಕೊಂಡಿದ್ದಾರೆ, ನವಾಜ್ ಮನೆಯ ಹೊರಗೆ ಅವರೊಂದಿಗೆ ಮಾತನಾಡುತ್ತಿದ್ದಾನೆ. ವೀಡಿಯೊದಲ್ಲಿ, ಆಲಿಯಾ ನವಾಜ್ ಮೇಲೆ ಕೋಪವನ್ನು ಹೊರಹಾಕುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನವಾಜುದ್ದೀನ್ ಸಿದ್ದಿಕಿಯ ಅದೃಷ್ಟ ಅವನತಿಯತ್ತ ಸಾಗುತ್ತಿದೆಯೇ?. ಮಾಜಿ ಪತ್ನಿ ಆಲಿಯಾ ನಂತರ ಇದೀಗ ಸಹೋದರ ಶಮಸ್ ನವಾಬ್ ಸಿದ್ದಿಕಿ ಕೂಡ ತೀವ್ರವಾಗಿ ಟಾರ್ಗೆಟ್ ಮಾಡಿದ್ದಾರೆ.