ಮೌನ ಅನುಷ್ಠಾನ ಮಂಗಲೋತ್ಸವ

ಬಾದಾಮಿ,ಆ1: 20 ವರ್ಷಗಳ ಹಿಂದೆ ಶಿವಯೋಗಮಂದಿರದಲ್ಲಿ ವಿದ್ಯಾರ್ಥಿಯಾಗಿದ್ದಾಗ ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರುಗಳು ಅಧ್ಯಕ್ಷರಾಗಿದ್ದರು. ಇಂದು ನಮ್ಮ ಸುದೈವ ಎನ್ನುವಂತೆ ಸಂಸ್ಥೆಯ ಅಧ್ಯಕ್ಷರಾಗಿರುವಾಗ ನಾನು ಉಪಾಧ್ಯಕ್ಷನಾಗಿ ಶಿವಯೋಗಮಂದಿರದ ಪರಿಸರದಲ್ಲಿ 21 ದಿನಗಳ ಮೌನ ಅನುಷ್ಠಾನವನ್ನು ಕೈಗೊಂಡಿರುವುದು ನನ್ನ ಪುಣ್ಯವೆಂದು ಭಾವಿಸುತ್ತೇನೆ ಎಂದು ಹಾವೇರಿ ಹುಕ್ಕೇರಿಮಠದ ಶ್ರೀಸದಾಶಿವ ಶ್ರೀಗಳು ಹೇಳಿದರು.
ಅವರು ಶುಕ್ರವಾರ ತಾಲೂಕಿನ ಸುಕ್ಷೇತ್ರ ಶಿವಯೋಗಮಂದಿರದ ಶ್ರೀಕುಮಾರೇಶ್ವರ ಕರ್ತೃ ಗದ್ದುಗೆಯ ಶಿಲಾ ಮಂಟಪದಲ್ಲಿ ಹಮ್ಮಿಕೊಂಡಿದ್ದ 21 ದಿನಗಳ ಮೌನ ಅನುಷ್ಟಾನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸದಾಶಿವ ಶ್ರೀಗಳನ್ನು ಸನ್ಮಾನಿಸಿ, ಆಶೀರ್ವಚನ ನೀಡಿದ ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷ ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀಗುರುಸಿದ್ದರಾಜಯೋಗೇಂದ್ರ ಮಹಾಸ್ವಾಮಿಗಳು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಯುವಮುಖಂಡ ಭೀಮಸೇನ ಚಿಮ್ಮನಕಟ್ಟಿ, ಹೊಳಬಸು ಶೆಟ್ಟರ, ಶರಣಗೌಡ ಪಾಟೀಲ, ಎಂ.ಡಿ.ಯಲಿಗಾರ, ಮುಕ್ಕಣ್ಣ ಜನಾಲಿ, ಗಂಗಯ್ಯ ಮುಚಖಂಡಿ, ಪಂಪಣ್ಣ ಕಾಚೆಟ್ಟಿ, ಇಷ್ಟಲಿಂಗ ಶಿರಶಿ ಹಾಗೂ ಹಾವೇರಿಯ ಹುಕ್ಕೇರಿಮಠದ ಆಡಳಿತ ಮಂಡಳಿಯ ಸದಸ್ಯರು ಮತ್ತು ಮಹಿಳೆಯರು ಉಪಸ್ಥಿತರಿದ್ದರು. ಶಿವಯೋಗಮಂದಿರದ ಧರ್ಮದರ್ಶಿ ಎಂ.ಬಿ.ಹಂಗರಗಿ ಸ್ವಾಗತಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿದರು. ಜಿ.ಜಿ.ಹಿರೇಮಠ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.