
ಭಾಲ್ಕಿ:ಮಾ.14: ಪಟ್ಟಣದಲ್ಲಿ ಜಗದ್ಗುರು ಮೌನೇಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ವೈಭವದಿಂದ ಮೆರವಣಿಗೆ ನಡೆಯಿತು. ಹಳೇ ಪಟ್ಟಣದ ಕಾಳಿಕಾದೇವಿ ಮಂದಿರ ಆವರಣದಲ್ಲಿ ಸುಲೇಪೆಟ್‍ನ ದೊಡ್ಡೇಂದ್ರ ಸ್ವಾಮೀಜಿ ಅವರು ಮೌನೇಶ್ವರರ ಭಾವಚಿತ್ರ ಮತ್ತು ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿದರು.
ಅಲಂಕೃತ ವಾಹನದಲ್ಲಿ ಮೌನದೇಶ್ವರ ದೇವರ ಮೆರವಣಿಗೆ ಶ್ರದ್ಧೆ, ಭಕ್ತಿಯಿಂದ ನಡೆಯಿತು. ತಿನ್‍ದುಕಾನ್, ಬೊಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತದ ಮೂಲಕ ಉಪನ್ಯಾಸಕರ ಬಡಾವಣೆಯ ಮೌನೇಶ್ವರ ಮಂದಿರದಲ್ಲಿ ಮೆರವಣಿಗೆ ಸಮಾವೇಶಗೊಂಡಿತು. ಮೆರವಣಿಗೆಯಲ್ಲಿ ಪುರವಂತರ ಕುಣಿತ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಏಕನಾಥರಾವ ಪಂಚಾಳ, ಮೌನೇಶ್ವರ ಮಂದಿರದ ಅಧ್ಯಕ್ಷ ಧನರಾಜ ಪಂಚಾಳ, ಉಪಾಧ್ಯಕ್ಷ ಗೋಪಾಲ ಪಂಚಾಳ, ಕಾರ್ಯದರ್ಶಿ ಅಶೋಕರಾವ ಪಂಚಾಳ, ಪ್ರಮುಖರಾದ ಏಕನಾಥರಾವ ಪಂಚಾಳ, ವಿಠಲರಾವ ಪಂಚಾಳ, ಗಣಪತರಾವ ಪಂಚಾಳ, ರಾಜಕುಮಾರ ಪಂಚಾಳ ಕೋನಮೇಳಕುಂದಾ, ಸಂಜೀಕುವಮಾರ ಪಂಚಾಳ, ಮೌನಪ್ಪ ಪಂಚಾಳ, ಭಾಲ್ಕೇಶ್ವರ ಪಂಚಾಳ, ರಣಧೀರ ಪಂಚಾಳ, ಕಿರಣ ಪಂಚಾಳ, ಚಂದ್ರಕಾಂತ ಪಂಚಾಳ, ಕುಪೇಂದ್ರ ಪಂಚಾಳ, ಸತೀಶ ಪಂಚಾಳ, ಸಂಗಮೇಶ ಪಂಚಾಳ, ಅಂಬಾದಾಸ ಕಪಲಾಪೂರೆ, ಧನರಾಜ ಪಂಚಾಳ ಹಾಲಹಳ್ಳಿ, ರವಿ ಪಂಚಾಳ, ನಾಮದೇವ ಪಂಚಾಳ, ದಿಲೀಪ ಪಂಚಾಳ, ಬಸಪ್ಪ, ಆಕಾಶ ಪಂಚಾಳ, ಅಭಿಷೇಕ ಪಂಚಾಳ, ಶರಣು ಪಂಚಾಳ, ರಾಹುಲ ಪಂಚಾಳ, ಬಸವರಾಜ ಪಂಚಾಳ ಕಪಲಾಪೂರ, ರಾಜು ಪಂಚಾಳ ಭಾಲ್ಕಿ ಸೇರಿದಂತೆ ಹಲವರು ಇದ್ದರು.