ಮೌಢ್ಯತೆಗಳಿಂದಾಗಿ ದೇಶದಲ್ಲಿ ಜನಸಂಖ್ಯೆ ಹೆಚ್ಚಳ

ಚಿತ್ರದುರ್ಗ, ಜು. 17 : ಅನಕ್ಷರತೆ, ಬಡತನ, ಬಾಲ್ಯವಿವಾಹ, ಸಾಮಾಜಿಕ ಹಾಗೂ ಮೌಢ್ಯತೆಗಳಿಂದಾಗಿ ದೇಶದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಚಿತ್ರದುರ್ಗ ಆರೋಗ್ಯ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಜಿ.ಆರ್. ಗೌರಮ್ಮ ಅಭಿಪ್ರಾಯಪಟ್ಟರು.ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಮಾಜಶಾಸ್ತç ವಿಭಾಗದಿಂದ ನಡೆದ ವಿಶ್ವ ಜನಸಂಖ್ಯಾದಿನ ಆಚರಣೆ ಬೇಕೆ? ಬೇಡವೆ ವಿಷಯ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚೀನಾ ಇಂದು ಪ್ರಪಂಚದಲ್ಲೆ ಅತಿಹೆಚ್ಚು ಜನಸಂಖ್ಯೆ ಹೊಂದಿದೆ. ಎರಡನೇ ಸ್ಥಾನದಲ್ಲಿ ಭಾರತ ಇದೆ. ದೇಶದಲ್ಲಿ ಶೇ. 75ರಷ್ಟು ಅಕ್ಷರಸ್ಥರು ಹಾಗೂ ಶೇ. 25ರಷ್ಟು ಅನಕ್ಷರಸ್ಥರಿದ್ದಾರೆ. ಜನಸಂಖ್ಯೆ ಹೆಚ್ಚಳದಿಂದಾಗಿ ಆಹಾರ ಸಮಸ್ಯೆ, ಜಲಮಾಲಿನ್ಯ, ವಾಯುಮಾಲಿನ್ಯ ಕೊಳಚೆಪ್ರದೇಶಗಳ ಉಲ್ಬಣ, ಸಾಂಕ್ರಾಮಿಕ ರೋಗಗಳು, ಅಲ್ಲದೆ ನಿರುದ್ಯೋಗ ಸಮಸ್ಯೆಯನ್ನು ದೇಶ ಎದುರಿಸುತ್ತಿದೆ. ದೇಶದಲ್ಲಿ ಒಂದು ನಿಮಿಷಕ್ಕೆ 160 ಮಕ್ಕಳು ಜನಿಸುತ್ತಾರೆ. ಕುಟುಂಬ ಯೋಜನೆಗಳ ಅಧ್ಯಯನ ಮಾಡಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಕರ‍್ಯ ಆಗಬೇಕಿದೆ ಎಂದರು.ಪ್ರಾಚಾರ್ಯರಾದ ಡಾ. ಎಲ್. ಈಶ್ವರಪ್ಪ ಮಾತನಾಡಿ, ಕುಟುಂಬ ಯೋಜನೆ ಕರ‍್ಯಕ್ರಮವನ್ನು ಪ್ರಪಂಚದಲ್ಲೆ ಮೊದಲ ಬಾರಿಗೆ ಭಾರತ ಅನುಸರಿಸಿತು. ಜನಸಂಖ್ಯೆ ನಿಯಂತ್ರಣಕ್ಕೆ ಚೀನಾ ಕೈಗೊಂಡ ಕ್ರಮವನ್ನೆ ಭಾರತವೂ ಅನುಸರಿಸಬೇಕು. ಜನಸಂಖ್ಯೆ ಹೆಚ್ಚಳದಿಂದ ಅಸಮತೋಲನ ಉಂಟಾಗುತ್ತದೆ. ಜನನ ಪ್ರಮಾಣ ಏರುತ್ತಿದ್ದರೆ, ಮರಣ ಪ್ರಮಾಣ ತಗ್ಗುತ್ತಿದೆ. ಇದರಿಂದ ಜನಸಂಖ್ಯೆ ಹೆಚ್ಚಳ ಆಗುತ್ತಿದೆ ಎಂದು ಹೇಳಿದರು.ಟಿ.ಎಸ್. ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂಜಿತ ಅತಿಥಿಗಳ ಪರಿಚಯ ಮಾಡಿಕೊಟ್ಟರು.ಅಂತಿಮ ವರ್ಷದ ವಿದ್ಯಾರ್ಥಿನಿಯರು ಸಂಶೋಧನಾ ವಿಧಾನದ ಬಗ್ಗೆ ಸಂಶೋಧನೆ ಮಾಡಿ ವರದಿ ನೀಡಿ ಪ್ರಬಂಧ ಮಂಡನೆ ಮಾಡಿ ಸಲ್ಲಿಸಿದ್ದ ಉತ್ತಮ ಮೂರು ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಆಸ್ಕಾಬಾನು, ಶಬಾನುಬಾನು ಇವರ ತಂಡಕ್ಕೆ ಪ್ರಥಮ, ವೇದಶ್ರೀ ಜೆ. ದ್ವಿತೀಯ ಬಹುಮಾನ ಹಾಗು ಪಂಕಜ, ಜಯಶ್ರೀ, ಭೂಮಿಕಾ ಮೊದಲಾದವರು ತೃತೀಯ ಬಹುಮಾನ ಪಡೆದರು.ಸೈಯದಾ ನೂರೈನ್ ಸಭಾ ಸ್ವಾಗತಿಸಿದರು. ನುರೈನ್ ಪಾತಿಮಾ ನಿರೂಪಿಸಿದರು. ಅಮೃತ ಸಿರಿ ಸಂಗಡಿಗರು ಪ್ರಾರ್ಥಿಸಿದರು.