ಮೌಂಟ್ ವೇವ್ ಶಿಕ್ಷಣ ಸಂಸ್ಥೆಯಲ್ಲಿ ಗುರು ಪೂರ್ಣಿಮಾ ದಿನಾಚರಣೆ

ಅಫಜಲಪುರ:ಜು.18: ತಾಲೂಕಿನ ಮಾತೋಳಿ ಗ್ರಾಮದ ಮೌಂಟ್ ವೇವ್ ಶಿಕ್ಷಣ ಸಂಸ್ಥೆಯಲ್ಲಿ ಗುರು ಪೂರ್ಣಿಮಾ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.

ಶಾಲೆ ಪ್ರಾಚಾರ್ಯರಾದ ನಾಗರಾಜ ಮಠಪತಿ ಅವರು ಗುರು ದತ್ತಾತ್ರೇಯ ಮಹಾರಾಜರ ಹಾಗೂ ಸರಸ್ವತಿ ದೇವಿಗೆ ವಿಶೇಷ ಪೂಜೆ ಸಲ್ಲಸಿ ಗುರು ವಂದನೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು ಈ ದಿನ ಅತ್ಯಂತ ಪವಿತ್ರವಾದ ದಿನವಾಗಿದೆ ಗುರುಗಳನ್ನು ಪೂಜಿಸಿ ಗೌರವಿಸುವ ಸಂಪ್ರದಾಯವಿದೆ. ಶಾಸ್ತ್ರಗಳಲ್ಲಿಯೂ ಗುರುವಿಗೆ ದೇವರಿಗಿಂತ ಹೆಚ್ಚಿನ ಸ್ಥಾನಮಾನ ನೀಡಲಾಗಿದೆ ಎಂದರು.

ಗುರು’ ಎಂಬ ಪದವು ಸಂಸ್ಕøತ ಭಾಷೆಯಿಂದ ಬಂದಿದೆ. ‘ಗು’ ಎಂದರೆ ಕತ್ತಲೆ ಮತ್ತು ‘ರು’ ಎಂದರೆ ದೂರ ಮಾಡು ಎಂದರ್ಥ. ಅಂದರೆ ಕತ್ತಲೆಯನ್ನು ತೊರೆದು ಜೀವನದುದ್ದಕ್ಕೂ ಸಂತೋಷವೇ ಬೆಳಗಲಿ ಎಂದರ್ಥ ಎಂದು ತಿಳಿಸಿದ ಅವರು ಪ್ರತಿಯೊಬ್ಬರು ಗುರುವಿನ ಮಾರ್ಗದರ್ಶನದಲ್ಲಿ ಸಾಗಿದರೆ ನಮ್ಮ ಜೀವನ ಸುಂದರವಾಗಲಿದೆ ಎಂದು ಅಭಿಮತ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸೈನಾ , ಭಾಗ್ಯಶ್ರೀ, ಬಾಯಕ್ಕ, ಸಿದ್ದು ಶಿವಣಗಿ, ವೆಂಕಟೇಶ, ರವಿ ಬಡಗೇರ ಮತ್ತು ಶಿಕ್ಷಕರಾದ ರಫೀಕ್, ರವಿ, ಜ್ಯೋತಿ, ಅಶ್ವಿನಿ, ಸಂಗೀತಾ ಗುಣಾರಿ, ಚೈತ್ರಾ, ಲಡೋಣಿ, ಅಥೋಯ, ಸುಯಿಸುಯಿ, ಮೇನ್ ಫಾಂಗ್, ದೈಹಿಕ ಶಿಕ್ಷಕ ಮಹೇಶ ಮೇಳಕುಂದಿ ಸೇರಿದಂತೆ ಶಾಲಾ ಆಡಳಿತ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.