ಮೋಹನ ರೆಡ್ಡಿಯವರಿಗೆ ನುಡಿನಮನ


(ಸಂಜೆವಾಣಿ ಪ್ರತಿನಿಧಿಯಂದ)
ಬಳ್ಳಾರಿ, ಜು.10: ಸರ್ಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲರು ರಂಗಭೂಮಿ ಕಲಾವಿದರು ಸಂಘಟಕರು ಹಾಗು ಪ್ರಾಂಶುಪಾಲರ ಸಂಘ ಬಳ್ಳಾರಿ ಇದರ ಅಧ್ಯಕ್ಷರು ಆಗಿದ್ದ ಶ್ರೀಯುತ ಎಂ ಮೋಹನರೆಡ್ಡಿಯವರು ಕಳೆದ ತಿಂಗಳು ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಿಧನರಾದ ಪ್ರಯುಕ್ತ ಶೀಯತ ರಿಗೆ  ಶ್ರದ್ಧಾಂಜಲಿ ಹಾಗು ನುಡಿ ನಮನ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ವನ್ನು ರಂಗ ಜಂಗಮ ಸಂಸ್ಥೆ ಹಾಗು ರಂಗ ಕಲಾವಿದರ ಬಳಗದ ವತಿಯಿಂದ  ಭಾನುವಾರ ಸಂಜೆ ಡಿ ಆರ್ ಕೆ ರಂಗಸಿರಿಯ ಬೀಚಿ ಸಭಾಂಗಣ ಬಳ್ಳಾರಿ ಇಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಯುತರ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಿಸಿ,ಮೌನಾಚರಣೆ ಮಾಡುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.ನಂತರ  ಅಭಿನಯ ಕಲಾ ಕೇಂದ್ರದ ನಿರ್ದೇಶಕರು ಸಾಹಿತಿಗಳು ಆದ ಕೆ ಜಗದೀಶ್ ಅವರು  ರಂಗ ಗೀತೆಯ  ಮೂಲಕ ನುಡಿನಮನ ಕಾರ್ಯಕ್ರಮ ಪ್ರಾರಂಭಿಸಲಾಯಿತು.  ಈ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರು  ಮೋಹನರೆಡ್ಡಿಯವರ ಒಡನಾಡಿಗಳು ಸಿಬ್ಬಂಧಿ ವರ್ಗದವರು  ಪಾಲ್ಗೊಂಡು ನುಡಿನಮನ ಸಲ್ಲಿಸಿದರು
ಕುಮಾರಿ ಮೈತ್ರಿ ಗೌಡ. ಬಿ ಕಾಶಿಮ್ ಅಲಿ.ಉಪನ್ಯಾಸಕರು ರಾಘವೇಂದ್ರ ಗುಡದೂರ್. ವಿನಯ್ ಸಿಂದಿಗೇರಿ ಪ್ರೊ ಶಾಂತನಾಯಕ್ ಮುಖ್ಯಸ್ಥರು ಪ್ರದರ್ಶನ ಕಲಾ ವಿಭಾಗ ವಿ ಎಸ್ ಕೆ ವಿಶ್ವವಿದ್ಯಾಲಯ ಬಳ್ಳಾರಿ ಇವರು ರಂಗ ಗೀತೆಗಳನ್ನು ಪ್ರಸ್ತುತ ಪಡಿಸಿದರು.
 ಶ್ರೀ ಸಿದ್ದರಾಮ ಕಲ್ಮಠ  ನಿಕಟಪೂರ್ವ ಅದ್ಯಕ್ಷರು ಕ.ಸಾ.ಪ ಬಳ್ಳಾರಿ ,ಡಾ.ಗಾದಿಲಿಂಗನಗೌಡ. ತಿಪ್ಪೇರುದ್ರಪ್ಪ  ಪ್ರಾಣೇಶ್ ಉಪನ್ಯಾಸಕರು ಪ್ರೊ.ಹೇಮಣ್ಣ  ನಿವೃತ್ತ ಪ್ರಾಂಶುಪಾಲರು  ಕೆ ಜಗದೀಶ್  ಡಾ.ಅಣ್ಣಜಿ ಕೃಷ್ಣಾರೆಡ್ಡಿ ವಿಷ್ಣು ಹಡಪದ. ಹೊನ್ನೂರು ಸ್ವಾಮಿ ,ಚಾಂದ್ ಪಾಷಾ ಇವರು ನುಡಿನಮನ ಸಲ್ಲಿಸಿದರು
ಎ.ಎಂ.ಪಿ ವೀರೇಶಸ್ವಾಮಿ ಉಪನ್ಯಾಸಕರು ಇವರು ಮೋಹನರೆಡ್ಡಿ ಕುರಿತಾಗಿ ಕವನ ವಾಚಿಸಿ ನುಡಿನಮನ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ  ವೆಂಕೋಬಾಚಾರ್ . ನೇತಿ ರಘುರಾಮ್ ಬಿ ಗಂಗಣ್ಣ  ಜೆ.ಎಂ ಶಿವರುದ್ರಯ್ಯ  ನಾಗಭೂಷಣ್  ಅಮರಾಪುರದ ನಾಗರಾಜ ಬಲಗುಡ್ಡದ ವೀರನಗೌಡ ಮುದ್ದಟನೂರು ತಿಪ್ಪೇಸ್ವಾಮಿ ಶ್ರೀಮತಿ ಲತಾಶ್ರೀ ಹಾಗೂ ಪ್ರಾಂಶುಪಾಲ ಸಂಘದ ಪದಾಧಿಕಾರಿಗಳು ಉಪನ್ಯಾಕರು ವಿದ್ಯಾರ್ಥಿಗಳು ಮತ್ತು ಆಸಕ್ತ ಕಲಾ ಬಂಧುಗಳು ಭಾಗವಹಿಸಿದ್ದರು.