ಮೋಹನ್,ಸಾಹೀರಾ ಬಾನು ಪಾತ್ರಕ್ಕೆ ರಾಘಣ್ಣ, ಶೃತಿ  ಜೀವ

* ಚಿ.ಗೋ ರಮೇಶ್

“ಹಿರಿಯ ನಟ ರಾಘವೇಂದ್ರ ರಾಜ್‍ಕುಮಾರ್  ಇತ್ತೀಚಿಗೆ ಒಂದರ ಹಿಂದೆ ಒಂದು ಚಿತ್ರಗಳಲ್ಲಿ  ಅದರಲ್ಲಿಯೂ ವಿಭಿನ್ನ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಇದೀಗ ” 13″  ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್   ಗುಜರಿ ಕೆಲಸ ಮಾಡುವ ವ್ತಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ 25 ವರ್ಷಗಳ ಬಳಿಕ ಹಿರಿಯ ನಟಿ ಶೃತಿ ಅವರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಕೆ. ನರೇಂದ್ರ ಬಾಬು, ರಾಘವೇಂದ್ರ ರಾಜ್ ಕುಮಾರ್

 ಹಾಗು ಶೃತಿ ಚಿತ್ರಕ್ಕೆ ಎರಡು ಕಣ್ಣುಗಳಿದ್ದಂತೆ’.. ಇವರಿಬ್ಬರೂ ಮೋಹನ್ ಹಾಗು ಸಾಹೀರಾ ಬಾನು ಪಾತ್ರಕ್ಕೆ ಜೀವ ತುಂಬಿದ್ದಾರೆ.  “13” ಚಿತ್ರ ಭಾವೈಕ್ಯತೆಯ ಸಾಮಾಜಿಕ ಸಂದೇಶ ಹೊಂದಿದೆ. ಮನರಂಜನೆಯ ಜೊತೆ ಸಸ್ಪೆನ್ಸ್, ಥ್ರಿಲ್ಲರ್ ಕಂಟೆಂಟ್ ಕೂಡ  ಚಿತ್ರದಲ್ಲಿದೆ ಎಂದರು.

ಕಥೆ ಬರೆದಾಗ ಮೋಹನ್ ಪಾತ್ರಕ್ಕೆ ರಾಘಣ್ಣ ಒಬ್ಬರೇ ಕಣ್ಣು ಮುಂದೆ ಬಂದರು. ಶೃತಿ ಮುಸ್ಲಿಂ ಮಹಿಳೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ, ಇಬ್ಬರೂ ನಮ್ಮ ಚಿತ್ರಕ್ಕೆ ಎರಡು ಕಣ್ಣಿನ ಥರ,ಅಡೆ ತಡೆ ದಾಟಿ ಬಂದಿದ್ದು ಮೊದಲ ಪ್ರತಿ ನೋಡಿದಾಗ ಎಲ್ಲಾ ಮರೆತು, ತುಂಬಾ ಖುಷಿಯಾಗಿದೆ ಎನ್ನುವ ವಿವರ ನೀಡಿದರು.

ನಟ ರಾಘವೇಂದ್ರ ರಾಜಕುಮಾರ್ ಮಾತನಾಡಿ ಸಸ್ಪೆನ್ಸ್ ಇದೆ. ಚಿತ್ರ ಒಳ್ಳೆಯ ಅನುಭವ ಕೊಟ್ಟಿತು. 25 ವರ್ಷ ಆದಮೇಲೆ ಶೃತಿ ಅವರ ಜೊತೆ ನಟಿಸಿದ್ದೇನೆ ಎಂದರೆ, ಶೃತಿ ಮಾತನಾಡಿ ಮೊದಲಬಾರಿಗೆ ಮುಸ್ಲಿಂ ಮಹಿಳೆಯ ಪಾತ್ರ ಮಾಡಿದ್ದೇನೆ ತುಂಬಾ ಚೆನ್ನಾಗಿದೆ ಎಂದರು. ಚಿತ್ರಕ್ಕೆ ಸಂಪತ್ ಕುಮಾರ್ ಮಂಜುನಾಥ್ ಗೌಡ, ಹೆಚ್. ಎಸ್. ಮಂಜುನಾಥ್ ಹಾಗೂ ಕೇಶವ ಮೂರ್ತಿ ಬಂಡವಾಳ ಹಾಕಿದ್ದಾರೆ.

ಸ್ಲೋಗನ್ ಬಾಬು ಸಂಗೀತದಲ್ಲಿ ಲಕ್ಷ್ಮಿ ದಿನೇಶ್ ಸಾಹಿತ್ಯವಿರುವ ‘ಸಿಂಗಲ್ ಸೇವಂತಿ’ ಎಂಬ ಐಟಂ ಹಾಡಿಗೆ ಇಂದೂ ನಾಗರಾಜ್ ದನಿಯಾಗಿದ್ದು ಬಾಂಬೆ ಮೂಲದ ಪ್ರೀತಿ ಗೋಸ್ವಾಮಿ ಹೆಜ್ಜೆ ಹಾಕಿರುವ ಹಾ ಇದೇ ವೇಳೆ ಬಿಡುಗಡೆಯಾಯಿತು. ಪ್ರತಿಯೊಬ್ಬರ ಮಾತಿನ ನಡುವೆಯೂ ನಿರ್ದೇಶಕ ನರೇಂದ್ರ ಬಾಬು ಮಾತು ತೂರಿಸಿದ್ದು ಚಿತ್ರತಂಡಕ್ಕೆ ತುಸು ಕಿರಿಕಿರಿ ಅನ್ನಿಸದೆ ಇರಲಾರದು.

ನಿರ್ದೇಶಕರು ಹೇಳಿದಂತೆ ನಟನೆ

ಇಷ್ಟು ವರ್ಷದ ವೃತ್ತಿ ಜೀವನಲ್ಲಿ ತಮ್ಮ ಪಾತ್ರವನ್ನು ಇದೇ ಮೊದಲ ಬಾರಿಗೆ ನಿರ್ದೇಶಕರು ಅಭಿನಯ ಮಾಡಿ ತೋರಿಸಿಕೊಟ್ಟರು. ಅವರು ಹೇಳಿದಂತೆ ನಟಿಸಿದ್ದೇ‌ನೆ. ಚಿತ್ರ ಚೆನ್ನಾಗಿ ಬಂದರೆ ಆ ಕ್ರೆಡಿಟ್ ಈ ಮುಂಚೆ ನನಗೆ ಬರುತ್ತಿತ್ತು. ಈ ಚಿತ್ರ ಚೆನ್ನಾಗಿ ಬಂದರೆ ಅದರ ಶ್ರೇಯ ನಿರ್ದೇಶಕರಿಗೆ ಸಲ್ಲುತ್ತದೆ. ಸರಿ ಇಲ್ಲ ಅಂದರೂ ಕೂಡ ಅವರಿಗೆ ಎಂದರು ಹಿರಿಯ ನಟಿ ಶೃತಿ. ನನ್ನ ಪಾತ್ರ ಮಾತ್ರವಲ್ಲ ಎಲ್ಲರ ಪಾತ್ರವನ್ನು ಚಿತ್ರದ ಎಲ್ಲಾ ಕೆಲಸ ಅವರೇ ಮಾಡಿದ್ಸಾರೆ ಎಂದರು.