ಮೋರಟಗಿ-ದೇವಣಗಾಂವ್ ಚೆಕ್ ಪೋಸ್ಟ್‍ಗಳಿಗೆ ಜಿಲ್ಲಾಧಿಕಾರಿಗಳ ಅನಿರೀಕ್ಷಿತ ಭೇಟಿಃ ಪರಿಶೀಲನೆ

ವಿಜಯಪುರ, ಮೇ.27-ಸಿಂದಗಿ ತಾಲ್ಲೂಕಿನ ಮೋರಟಗಿ ಚೆಕ್ ಪೋಸ್ಟ್‍ಗೆ ಅನೀರಿಕ್ಷೀತವಾಗಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹಾಗೂ ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಅವರು ಇಂದು ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲದೇ ಚೆಕ್ ಪೆÇೀಸ್ಟ್ ದಲ್ಲಿನ ಸಿ.ಸಿ.ಟಿ ವಿ ದೃಶ್ಯಾವಳಿಗಳನ್ನು ವೀಕ್ಷಿಸಿ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಅಕ್ರಮವಾಗಿ ಮರಳು ತುಂಬಿದ ವಾಹನಗಳು ಚೆಕ್ ಪೆÇೀಸ್ಟ್ ಮೂಲಕ ದಾಟಿ ಹೋಗದಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ನಂತರ ಬಗಲೂರ ಗ್ರಾಮದ ಮೂಲಕ ಘತ್ತರಗಿ ಸೇತುವೆಯನ್ನು ವೀಕ್ಷಣೆ ಮಾಡಿದ ಅವರು ನಂತರ ದೇವಣಗಾಂವ ಗ್ರಾಮದ ಚೆಕ್ ಪೆÇೀಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದೇವಣಗಾಂವ ಗ್ರಾಮದ ಭೀಮಾ ನದಿ ದಂಡೆಯಲ್ಲಿ ಈಗಾಗಲೇ ವಶಪಡಿಸಿಕೊಂಡ ಅಕ್ರಮ ಮರಳನ್ನು ವೀಕ್ಷಿಸಿದರು. ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿಗಳು ಈ ವಶಪಡಿಸಿಕೊಂಡ ಮರಳು ಅಂದಾಜು ಐದು ಲಕ್ಷ ರೂಪಾಯಿ ಮೌಲ್ಯದಾಗಿದ್ದು, ಇದಲ್ಲದೇ ಇಂಡಿ ತಾಲ್ಲೂಕಿನಲ್ಲಿ ಈವರೆಗೆ ಸುಮಾರು ಹದಿನೇಳು ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದು, ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಅಕ್ರಮ ಮರಳು ಗಣಿಗಾರಿಕೆ ನಡೆಯದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.
ಅದರಂತೆ ದಿ.20-5-2021 ರಂದು ಜಿಲ್ಲೆಯ ಬಬಲೇಶ್ವರ ತಾಲೂಕು ಮಮದಾಪುರ ಹೋಬಳಿಯ ವ್ಯಾಪ್ತಿಯ ಚಿಕ್ಕ ಗಲಗಲಿಯ ಗ್ರಾಮದ ಕಡೆಯಿಂದ ಬಬಲೇಶ್ವರ್ ಕಡೆಗೆ ಬರುತ್ತಿದ್ದ 3 ಕಳ್ಳತನದಿಂದ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಟಾಟಾ ಕಂಪನಿಯ ಟಿಪ್ಪರ್ ನಂ: ಕೆ.ಎ : 23 ಎ -3755, 1 ಬ್ರಾಸ್ ಮರಳು (2.83 ಕ್ಯೂಬಿಕ್ ಮೀಟರ್), ಭಾರತ್ ಬೆನ್ಸ್ ಕಂಪನಿಯ ಟಿಪ್ಪರ್ ವಾಹನ ಸಂಖ್ಯೆ ಲಭ್ಯವಾಗಿರುವುದಿಲ್ಲ ಚಸ್ಸಿ ನಂ: ಎಂಇಸಿ 241 ಬಿ.ಎಚ್.ಎಚ್.ಪಿ 045937 ಇದರಲ್ಲಿನ 2 ಬ್ರಾಸ್ ಮರಳು (4,66 ಕ್ಯೂಬಿಕ್ ಮೀಟರ್), ಎಎಂಡಬ್ಲ್ಯೂ ಟಿಪ್ಪರ್ ವಾಹನ ಸಂಖ್ಯೆ: ಕೆ.ಎ- 28 ಸಿ -0554, 2 ಬ್ರಾಸ್ ಮರಳು (4,66 ಕ್ಯೂಬಿಕ್ ಮೀಟರ್)
ಇವುಗಳಲ್ಲಿ ಒಟ್ಟು 5 ಬ್ರಾಸ್ (14 ಕ್ಯೂಬಿಕ್ ಮೀಟರ್ ಇವುಗಳನ್ನು ಜಪ್ತಿ ಮಾಡಿ ವಾಹನಗಳನ್ನು ಮತ್ತು ಅದರಲ್ಲಿನ ಮರಳನ್ನು ಆರಕ್ಷಕ ಇಲಾಖೆಯ ಆರಕ್ಷಕ ಠಾಣೆ ಬಬ್ಲೆಶ್ವರ್ ಇವರಿಗೆ ವಶಕ್ಕೆ ನೀಡಿ ಪಿರ್ಯಾದಿಯನ್ನು ಎಸ್‍ಆರ್ ನಂ : 61/2021 ದಿನಾಂಕ:20-5-2021 ರಂದು ದೂರನ್ನು ದಾಖಲಿಸಿ ಪ್ರಥಮ ವರ್ತಮಾನ ವರದಿ ಹಾಗೂ ದಾಖಲೆಗಳೊಂದಿಗೆ ಮಾಹಿತಿಯನ್ನು ಗೌರವಾನ್ವಿತ 2ನೇ ಜೆಎಂಎಫಸಿ ನ್ಯಾಯಾಲಯ ವಿಜಯಪುರ ಅವರಿಗೆ ಸಲ್ಲಿಸಲಾಗಿದೆ ಎಂದು ಈ ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಅದರಂತೆ ಇಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕಳೆದ 2 ತಿಂಗಳಲ್ಲಿ ಒಟ್ಟು 8 ಪ್ರಕರಣಗಳನ್ನು ದಾಖಲಿಸಿದ್ದು, ಫೆಬ್ರವರಿ ಮಾಹೆಯಲ್ಲಿ 3 ಹಾಗೂ ಮೇ ಮಾಹೆಯಲ್ಲಿ 5 ಪ್ರಕರಣಗಳನ್ನು ದಾಖಲಿಸಿದೆ. 5 ವಾಹನಗಳನ್ನು ಸೀಜ್ ಮಾಡಲಾಗಿದ್ದು, 3344 ಟನ್ ಅಕ್ರಮ ಮರಳು ವಶಪಡಿಸಿಕೊಂಡಿದೆ ಎಂದು ಉಪವಿಭಾಗಾಧಿಕಾರಿಗಳು ತಿಳಿಸಿದರು.
ಸ್ಥಳದಲ್ಲಿ ತಹಶೀಲ್ದಾರ್ ಸಂಜೀವ ಕುಮಾರ್ ದಾಸರ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಾದ ಚಿದಂಬರ, ಸಿಂದಗಿ ಪಿ.ಎಸ್.ಆಯ್. ಸಂಗಮೇಶ ಹೊಸಮನಿ ಹಾಗೂ ಆಲಮೇಲ ಪಿ.ಎಸ್.ಆಯ್ ಸುರೇಶ್ ಗಡ್ಡಿ ಉಪಸ್ಥಿತರಿದ್ದರು.