ಆಲಮೇಲ:ಎ.10:ಪಟ್ಟಣದಲ್ಲಿ ಕಳೆದ 15 ದಿನಗಳ ಹಿಂದೆ ಇರರ್ಫಾನ್ ತಂ/ನಬಿಸಾಬ ಜಮಾದಾರ ಎಂಬ ವ್ಯಕ್ತಿಯ ಮೊಬೈಲ್ ಪೋನ್ ಕಳುವಾದ ಕುರಿತು ಆಲಮೇಲ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ನಿಡಿದರು. ಇದರಿಂದ ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವತರಾಗಿ ಕೇಂದ್ರ ಸರ್ಕಾರದ (ಸಿ ಇ ಐ ಆರ್) ವೆಬ್ ಬಳಸಿ ಕಳುವಾದ ಮೊಬೈಲ್ ಫೋನ ಪತ್ತೆ ಮಾಡಿ ಫಿರ್ಯಾದಿದಾರನಿಗೆ ಒಪ್ಪಿಸಲಾಗಿದೆ.ಅದಕ್ಕಾಗಿ ಸಾರ್ವಜನಿಕರು ಕೂಡಲೇ ಕೇಂದ್ರ ಸರ್ಕಾರದ ಆಪ್ ತಮ್ಮ ಮೊಬೈಲ್ ಗಳಲ್ಲಿ ಬಳಸಿಕೊಳ್ಳುವುದರಿಂದ ಸೈಬರ್ ಹಾಗೂ ನಾರ್ಕೋಟಿಕ್ಸ್ ಅಪರಾಧಗಳನ್ನು ತಡೆಗಟ್ಟಬಹುದು ಎಂದು ಪಿಎಸ್ ಐ ಕುಮಾರ ಹಾಡಕಾರ ಸಲಹೆ ನಿಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ರವಿವಾರ ವರದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರದೂರ ಸಂಪರ್ಕ ಇಲಾಖೆಯಿಂದ ಕಾಣೆ, ಸುಲಿಗೆ ಅಥವಾ ಕಳುವಾದ ಬೊಬೈಲ್ ಫೋನಗಳನ್ನು ಬ್ಲಾಕ್ ಮಾಡಲು CEIR (Central Equipment Identity Register ) ವೆಬ್ ಪೋರ್ಟಲ್ ಅನಾವರಣ ಮಾಡಿರುವ ಕುರಿತು ಮಾಹಿತಿ ನಿಡಿದ ಅವರು
ಇತ್ತೀಚಿನ ದಿನಗಳಲ್ಲಿ ಕಾಣೆ ಹಾಗೂ ಸುಲಿಗೆಯಾದ ಮೊಬೈಲ್ ಫೋನ್ ಗಳನ್ನು ಸೈಬರ್‍ಹಾಗೂ ನಾರ್ಕೋಟಿಕ್ಸ್ ಅಪರಾಧ ಸೇರಿದಂತೆ ಗಂಭೀರ ಅಪರಾಧಗಳಲ್ಲಿ ಬಳಕೆಯಾಗುತ್ತಿರುವುದು ಗಣನೀಯವಾಗಿ ಕಂಡು ಬಂದಿರುವ ಕಾರಣ ಇಂತಹ ಮೊಬೈಲ್ ಫೋನ್ ಗಳ ದುರ್ಬಳಿಕೆ ತಡೆಗಟ್ಟಲು ಕೇಂದ್ರ ಸರ್ಕಾರವು ದೂರ ಸಂಪರ್ಕ ಇಲಾಖೆಯಿಂದ ಕಾಣೆ, ಸುಲಿಗೆ ಅಥವಾ ಕಳುವಾದ ಬೊಬೈಲ್ ಫೋನಗಳನ್ನು ಬ್ಲಾಕ್ ಮಾಡಲು CEIR (Central Equipment Identity Register ) ವೆಬ್ ಪೋರ್ಟಲ್ ಅನಾವರಣ ಮಾಡಿರುವುದರಿಂದ ಪೊಲೀಸ್ ಇಲಾಖೆಯಲ್ಲಿಯೂ ಕೂಡಾ ಈ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಈ ಕುರಿತು ಸಾರ್ವಜನಿಕರು ಸ್ಥಳೀಯ ಪೊಲೀಸ ಠಾಣೆಗೆ ಭೇಟಿ ನಿಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಡಿ.ಎಮ್.ತರಫದಾರ,ಸಲೀಮ ಸವದಿ,ಸಿದ್ರಾಮ ಪಾಟೀಲ,ಎಸ್.ಎಸ್.ಬಾಪಗೊಂಡ ಇದ್ದರು.