ನವದೆಹಲಿ, ಸೆ. ೨೦- ತೆಲಂಗಾಣ ಹುತ್ಮಾತರು ಹಾಗೂ ಅವರು ತ್ಯಾಗದ ಬಗ್ಗೆ ಸಂಸತ್ತಿನಲ್ಲಿ ಅಗೌರವ ಹೇಳಿಕೆಗಳನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿ ನೀಡಿರುವ ಅವರು ಪ್ರಧಾನಿ ಹೇಳಿಕೆ ತೆಲಂಗಾಣ ರಾಜ್ಯಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತೆಲುಗು ಭಾಷೆಯಲ್ಲೇ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ ತೆಲಂಗಾಣಕ್ಕಾಗಿ ಹೋರಾಡಿದ ಹುತ್ಮಾತರು ಮತ್ತು ಅವರ ತ್ಯಾಗದ ಅಗೌರವದ ಹೇಳಿಕೆಗಳನ್ನು ನೀಡಿ, ತೆಲಂಗಾಣದ ಸ್ವಾಭಿಮಾನಕ್ಕೆ ಪ್ರಧಾನಿ ಅಪಮಾನ ಮಾಡಿದ್ದಾರೆ ಎಂದು ಟೀಕಿಸಿದರು.
ಆಂಧ್ರ ಮತ್ತು ತೆಲಂಗಾಣ ವಿಭಜನೆ ರಕ್ತಪಾತಕ್ಕೆ ಕಾರಣವಾಗಿತ್ತು ಎಂದು ತಮ್ಮ ಭಾಷಣದಲ್ಲಿ ಮೋದಿ ವಿಷಾದ ವ್ಯಕ್ತಪಡಿಸಿದರು.
ಸಂಸತ್ತಿನ ಅಧಿವೇಶನದ ವೇಳೆ ಮೋದಿ ಮಾತನಾಡಿದ ಸಂದರ್ಭದಲ್ಲಿ ಛತ್ತೀಸ್‌ಗಢ, ಜಾರ್ಖಂಡ್, ಉತ್ತರಾಖಂಡ ರಾಜ್ಯಗಳು ರಚನೆಯಾದಾಗ ಎಲ್ಲರೂ ಸಂಭ್ರಮಿಸಿದರು. ಆದರೆ ತೆಲಂಗಾಣ ರಾಜ್ಯ ರಚನೆ ವೇಳೆ ರಕ್ತಪಾತವಾಗಿತ್ತು ಎಂದು ನೀಡಿರುವ ಹೇಳಿಕೆ ತೆಲಂಗಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.