ಮೋದಿ, ಹೇಡಿ, ದುರಂಹಕಾರಿ

ನವದೆಹಲಿ,ಮಾ.೨೬; ಪ್ರಧಾನಿ ನರೇಂದ್ರಮೋದಿ ಅವರು ಹೇಡಿ ಮತ್ತು ದುರಂಹಕಾರಿ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ನ ರಾಹುಲ್‌ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ನಡೆಸಿರುವ ಸಂಕಲ್ಪ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಬೆಳೆಸಲು ತಮ್ಮ ಕುಟುಂಬ ಎಲ್ಲವನ್ನೂ ತ್ಯಾಗ ಮಾಡಿದೆ. ತಮ್ಮ ಕುಟುಂಬದ ರಕ್ತದಿಂದ ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸಿ ಬೆಳೆಸಲಾಗಿದೆ ಎಂದು ಹೇಳಿದರು.
ಇಡೀ ಸರ್ಕಾರಿ ಯಂತ್ರವೂ ಅದಾನಿಯಂತಹ ಒಬ್ಬ ವ್ಯಕ್ತಿಯನ್ನು ಉಳಿಸಲು ಪ್ರಯತ್ನಿಸುತ್ತಿದೆ ಎಂದು ಹರಿಹಾಯ್ದ ಅವರು, ಈ ದೇಶದ ಪ್ರಧಾನಿ ಮೋದಿ ಹೇಡಿ ಹಾಗೂ ದುರಂಹಕಾರಿ ಈ ಮಾತಿಗೆ ನನ್ನ ಮೇಲೆ ಬೇಕಾದರೆ ಮೊಕದ್ದಮೆ ಹೂಡಲಿ ಎಂದು ಸವಾಲು ಹಾಕಿದರು. ಪ್ರಿಯಾಂಕಗಾಂಧಿ ಅವರು ಮೋದಿ ಅವರನ್ನು ಗುರಿಯಾಗಿಸಿ ಟೀಕಾ ಪ್ರಹಾರ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿ ಅದಾನಿಯ ರಕ್ಷಣೆಗೆ ಕೇಂದ್ರ ನಿಂತಿದೆ ಎಂದು ಹರಿಹಾಯ್ದರು.