
ಮೈಸೂರು:ಮೇ.16:- ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮಾರ್ಗ ಅಪವಿತ್ರ ಆಗಿದೆ ಎಂದು ಆರೋಪಿಸಿ ನಮೋ ಸಾಗಿದ ದಾರಿ ಸಗಣಿ, ಗಂಜಲದಿಂದ ಸ್ವಚ್ಚಗೊಳಿಸುವ ಕೆಲಸ ಮಾಡಲಾಯಿತು.
ದಸರಾ ಮೆರವಣಿಗೆ ರಾಜ ಮಾರ್ಗಕ್ಕೆ ಕಳಂಕ ತಂದಿದ್ದಾರೆಂದು ಆರೋಪಿಸಿ, ಕೈ ಕಾರ್ಯಕರ್ತರಿಂದ ರಸ್ತೆ ಶುದ್ಧಿ ಮಾಡಲಾಯಿತು. ಗಂಜಲ, ಸಗಣಿ ನೀರಿನಿಂದ ರಾಜ ಮಾರ್ಗವನ್ನು ಕಾರ್ಯಕರ್ತರು ಶುಚಿಗೊಳಿಸಿದರು.
ಮೈಸೂರಿನ ಕೆ.ಆರ್ ವೃತ್ತ, ಸಯ್ಯಾಜೀರಾವ್ ರಸ್ತೆಯನ್ನ ಶುದ್ಧಿ ಮಾಡಿದರು. ಮೇ 7 ರಂದು ನಗರದ ಗನ್‍ಹೌಸ್ ವೃತ್ತದಿಂದ ಹೈವ್ ವೃತ್ತದ ವರೆಗೆ ರೋಡ್ ಶೋ ಮಾಡಿದ್ದರು.
ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿದ್ದರು. ಮೋದಿ ಸಾಗಿದ ಮಾರ್ಗವನ್ನ ಶುಚಿಗೊಳಿಸುವ ಮೂಲಕ ಕೈ ಕಾರ್ಯಕರ್ತರ ವ್ಯಂಗ್ಯವಾಡಿದರು.
ಚಾಮುಂಡೇಶ್ವರಿ ಶಾಪದಿಂದ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಿದೆ. ಮಲೀನವಾದ ರಸ್ತೆಯನ್ನ ಪವಿತ್ರ ಮಾಡುತ್ತಿರುವುದಾಗಿ ಹೇಳಿದರು.