ಮೋದಿ ಹವಾ ನೋಡಿ ಹೆದರಿ ಕಾಂಗ್ರೆಸ್ ಸುಳ್ಳಿನ ನಾಟಕ:ಖೂಬಾ

ಬೀದರ:ಫೆ.8:ದೇಶದಾದ್ಯಂತ ಇರುವ ಮೋದಿ ಹವಾ ನೋಡಿ ಭಯದಿಂದ, ರಾಜ್ಯದಲ್ಲಿರುವ ಕಾಂಗ್ರೇಸ್ ಸರ್ಕಾರ ದಿನಕ್ಕೊಂದು ನಾಟಕ, ದಿನಕ್ಕೊಂದು ಸುಳ್ಳು ಹೇಳಿಕೊಂಡು, ಸುಳ್ಳನ್ನು ಸತ್ಯ ಮಾಡಲು ಹೊರಟಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಕೀಡಿ ಕಾರಿದ್ದಾರೆ,
ಸುಮಾರು 14 ಬಾರಿ ಬಜೇಟ್ ಮಂಡಿಸಿರುವ ಸಿದ್ದರಾಮಯ್ಯನವರಿಗೆ ತೆರಿಗೆ ನಿಯಮಗಳು, ಆರ್ಥಿಕ ಹಂಚಿಕೆ ಬಗ್ಗೆ ಜ್ಞಾನವಿಲ್ಲದೆ ಇರುವುದು ರಾಜ್ಯದ ಜನರ ದುರ್ದೈವ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಸ್ತವದ ಬಗ್ಗೆ ಅರಿವಿಲ್ಲದೆ, ಸುಳ್ಳು ಹೇಳಿ, ರಾಜ್ಯವನ್ನು ಆರ್ಥಿಕ ದಿವಾಳಿಗೆ ತಳ್ಳುವಂತಹ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಸರ್ಕಾರ ಮೊದಲ ದಿನದಿಂದ ರಾಜ್ಯದ ಜನರಿಗೆ ಮೊಸ ಮಾಡುತ್ತಿದೆ, 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯನವರು ಅದು ಸಾಧ್ಯವಾಗದೆ ಇದ್ದಾಗ ಮೋದಿಯವರ ಕಡೆ ಬೊಟ್ಟು ಮಾಡಿದ್ದರು, ಆಮೇಲೆ ಜನರಿಗೆ ಸಿದ್ದರಾಮಯ್ಯನವರ ಡ್ರಾಮಾ ಹೊರಬಿತ್ತು, ಅದಾದ ಮೇಲೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಭಿವೃದ್ದಿ ಕೆಲಸಗಳಿಗೆ ನಮ್ಮಲ್ಲಿ ಹಣವಿಲ್ಲ, ಈ ವರ್ಷ ಅಭಿವೃದ್ದಿ ಕೆಲಸಗಳು ಮಾಡಲು ಸಾಧ್ಯವಿಲ್ಲವೆಂದು ಪತ್ರಿಕೆಯಲ್ಲಿ ತಿಳಿಸಿದ್ದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಕೆಲ ದಿನಗಳ ಹಿಂದೆ ಈ ಐದು ಗ್ಯಾರಂಟಿಗಳು ಪೂರೈಸಲು ಸರ್ಕಾರದ ಬಳಿ ಹಣವಿಲ್ಲ, ಸುಮಾರು 60 ಸಾವಿರ ಕೋಟಿ ಹಣದ ಅವಶ್ಯಕತೆಯಿದೆ ಎಂದಿದ್ದರು, ಆದರೆ ವಾಸ್ತವದಲ್ಲಿ ಸರ್ಕಾರದ ಬಳಿ ಬಿಡಿಗಾಸು ಇಲ್ಲಾ, ಸದ್ಯ ಚುನಾವಣೆ ಇದೆ ಗ್ಯಾರಂಟಿಗಳು ಮುಂದುವರೆಸಲು ಕಷ್ಟವಾಗುತ್ತಿದೆ, ಆದ್ದರಿಂದ ಮತ್ತೆ ಇವಾಗ ಮೋದಿಯವರ ಕಡೆ ಸಿದ್ದರಾಮಯ್ಯನವರು ಬೊಟ್ಟು ಮಾಡಿ, ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ತೆರಿಗೆ ಹಂಚಿಕೆ, ಆರ್ಥಿಕ ಸಹಾಯದ ಹಂಚಿಕೆಯ ನಿರ್ಧಾರಗಳು, ನಿಯಮಗಳು ಇದ್ಯಾವುದು ಸರ್ಕಾರ ಮಾಡುವುದಿಲ್ಲ, ಸ್ವಾಯತ್ತ ಸಂವಿಧಾನಿಕ ಸಂಸ್ಥೆಯಾದ ಹಣಕಾಸು ಆಯೋಗ ನಿರ್ಧರಿಸುತ್ತದೆ, ಈ ಆಯೋಗ ಪ್ರತಿ ಗ್ರಾಮ ಪಂಚಾಯತನಿಂದ ಹಿಡಿದು, ರಾಜ್ಯ ಸರ್ಕಾರದವರೆಗೆ ಎಲ್ಲರಿಂದ ಸಲಹೆಗಳು ಪಡೆದು, ನಿತಿ ನಿಯಮಗಳೂ ರೂಪಿಸುತ್ತದೆ, ಇಲ್ಲಿ ಯಾವೂದೇ ತಾರತಮ್ಯವಿರುವುದಿಲ್ಲ, ಹಣಕಾಸು ಆಯೋಗ ಮಾಡುವ ಪ್ರತಿ ನಿಯಮಗಳು ಸಂಪೂರ್ಣ ದೇಶಕ್ಕೆ ಅನ್ವಯಿಸುತ್ತವೆ, ಆದರೆ ಸಿದ್ದರಾಮಯ್ಯನವರಿಗೆ ಎಲ್ಲಾ ಗೊತ್ತಿದ್ದರು ಮತ್ತೆ ಮತ್ತೆ ಸುಳ್ಳು ಹೇಳುತ್ತಿದ್ದಾರೆ.
2004 ರಿಂದ 2014ರವರೆಗೆ ತೆರಿಗೆ ಪಾಲು ರಾಜ್ಯಕ್ಕೆ ಬಂದಿದ್ದು ರೂ. 81795 ಕೋಟಿ, 2014 ರಿಂದ 2024ರವರೆಗೆ ಬಂದಿದ್ದು 2,85,00 ಕೋಟಿ (250%) ಹೆಚ್ಚು, ಆರ್ಥಿಕ ಪರಿಹಾರ 2004 ರಿಂದ 2014ರವರೆಗೆ ರಾಜ್ಯಕ್ಕೆ ಬಂದದ್ದು ರೂ. 60,779 ಕೋಟಿ, 2014 ರಿಂದ 2024ರವರೆಗೆ ಬಂದದ್ದು ರೂ. 2,08,832 ಕೋಟಿ (243%) ಹೆಚ್ಚಿನ ಆರ್ಥಿಕ ಪರಿಹಾರ ರಾಜ್ಯಕ್ಕೆ ಕೇಂದ್ರದಿಂದ ಬಂದಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಮೋದಿ ಸರ್ಕಾರದಿಂದ ಕಳೆದ ಹತ್ತು ವರ್ಷಗಳಲ್ಲಿ                           ಯಾವ ರಾಜ್ಯಕ್ಕೂ ತಾರತಮ್ಯವಾಗಿಲ್ಲಾ, ಆದರೆ ಮಾನ್ಯ ಸಿದ್ದರಾಮಯ್ಯನವರು ಈ ತರಹ ದಿನಕ್ಕೊಂದು ಡ್ರಾಮಾ ಮಾಡಿ, ದೇಶದ ಮುಂದೆ ಕನ್ನಡಿಗರ ಮಾನ ಹರಾಜು ಹಾಕುತ್ತಿರುವುದು ಶೋಚನಿಯ ಸಂಗತಿ ಎಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ರಾಜ್ಯದಲ್ಲಿ ಹಾಗು ನಮ್ಮ ಜಿಲ್ಲೆಯಲ್ಲಿ ಒಂದೆ ಒಂದು ಅಭಿವೃದ್ದಿ ಕೆಲಸಗಳು ಪ್ರಾರಂಭವಾಗಿಲ್ಲಾ, ಬೀದರ ಜಿಲ್ಲೆಯ ನೀರಾವರಿ ಯೋಜನೆಗಳಿಗೆ, ಅನುಭವ ಮಂಟಪದ ಕಾಮಗಾರಿಗೆ, ರೈಲ್ವೆ ಯೋಜನೆಗೆ, ಸಿಪೇಟ್ ಕಾಲೇಜಿನ  ಅಭಿವೃದ್ದಿ ಕೆಲಸಗಳಿಗೆ ಅನುದಾನ ನೀಡುವಂತೆ ಹತ್ತಾರು ಬಾರಿ ಮನವಿ ಮಾಡಿಕೊಂಡರು ಇಲ್ಲಿಯವರೆಗೆ ರಾಜ್ಯ ಸರ್ಕಾರ ಅನುದಾನ ನೀಡಿಲ್ಲಾ, ಇಲ್ಲಿಯ ಉಸ್ತುವಾರಿ ಸಚಿವರಂತು ಇನ್ನು ನಿದ್ದೆಯಿಂದ ಹೊರಬಂದಿಲ್ಲಾ, ಇನ್ನು ಮಂತ್ರಿಗಿರಿಯ ಹನಿಮೂನ್ ಮೂಡದಿಂದ ಹೊರಬಂದಿಲ್ಲಾ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಬೇಸರ ವ್ಯಕ್ತಪಡಿಸಿದ್ದಾರೆ. 
ಬೀದರ ರೈಲ್ವೆ ನಿಲ್ದಾಣ ಕಾಮಗಾರಿ, ನೌಬಾದ ಹತ್ತಿರ ಆರ್.ಯು.ಬಿ. ಸಿ.ಎನ್.ಜಿ. ಯು.ಜಿ.ಡಿ. ಕೌಠಾ ಬ್ರಿಡ್ಜ್ ಕಂ ಬ್ಯಾರೇಜ್ ಮುಂತಾದ ಕಾಮಗಾರಿಗಳು ನಮ್ಮ ಕೇಂದ್ರ ಸರ್ಕಾರದಿಂದ ನಡೆಯುತ್ತಿವೆ, ನನ್ನ ಕಾರ್ಯವೈಖರಿ ನೋಡಿ ಕಾಂಗ್ರೇಸ್‍ನವರು ಕೆಲಸ ಮಾಡುವುದು ಕಲಿತುಕೊಳ್ಳಲಿ ಎಂದಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಕೊಡಬೇಕಾದ ಎಲ್ಲಾ ಪಾಲನ್ನು ಮೋದಿ ಸರ್ಕಾರದಿಂದ ಕೊಡಲಾಗಿದೆ, ಯಾವೂದೇ ಅನುದಾನ ಉಳಿಸಿಕೊಂಡಿಲ್ಲಾ, ಕಾಂಗ್ರೇಸ್‍ನವರ ಡ್ರಾಮಾ ರಾಜ್ಯದ ಜನರು ಗಮನಿಸುತ್ತಿದ್ದಾರೆ, ಇದರಿಂದ ಇವರಿಗೆ ಯಾವೂದೇ ಲಾಭವಿಲ್ಲಾ, ಸುಳ್ಳು ಗ್ಯಾರಂಟಿಗಳು ನೀಡಿರುವ ಕಾರಣ ಎಲ್ಲಾ ಕಾಂಗ್ರೇಸ್ಸಿಗರು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.