(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.01: ಕ್ಷೇತ್ರದ ಜನತೆ ಹಲವು ತಿಂಗಳಿಂದ ಎಲ್ಲಿದ್ದಾರೆಂದು ಹುಡುಕುತ್ತಿದ್ದ ಲೋಕಸಭಾ ಸದಸ್ಯ ದೇವೇಂದ್ರಪ್ಪ ಇಂದು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರತ್ಯಕ್ಷರಾಗಿ ಪ್ರಧಾನಿ ನರೇಂದ್ರ ಮೋದಿ ಅವರ 9 ವರ್ಷ ಆಡಳಿತದ ಅಭಿವೃದ್ಧಿಯ ಸಾಧನೆಗಳನ್ನು ಹೇಳಿದರು.
ಕೊಪ್ಪಳದ ಚಿಕ್ಕ ರೈಲ್ವೇ ನಿಲ್ದಾಣದಲ್ಲಿ ಈಗಾಗಲೇ ಲಿಪ್ಟ್, ಎಕ್ಸಾವೇಟರ್ ಆಗಿದೆ. ಬಳ್ಳಾರಿಯಲ್ಲಿ ಇನ್ನೂ ಆಗುತ್ತಿದೆ. ತಾಲೂಕಿನ ಬಸರಕೋಡು ಗ್ರಾಮದ ಬಳಿ ಗುಳ್ಯಂಗೆ ತೆರಳಲು ವೇದಾವತಿ ನದಿಗೆ ಸೇತುವೆ ನಿರ್ಮಿಸುವುದು ಈ ವರಗೆ ಆಗಿಲ್ಲ.
ಜಿಲ್ಲೆಯಲ್ಲಿ ಹೊಸಪೇಟೆಯಿಂದ ಆಂದ್ರಪ್ರದೇಶದ ಗಡಿ ಭಾಗದವರೆಗಿನ ರಾಷ್ಟ್ರೀಯ ಹೆದ್ದಾರಿ ಹಲವು ವರ್ಷಗಳಿಂದ ಕಾಮಗಾರಿ ನಡೆದು. ಅರ್ಧಕ್ಕೆ ನಿಂತಿದ್ದು ಅದನ್ನು ಮುಗಿಸಲಾಗದೇ ಇರುವ ಇವರ ಕಾರ್ಯವೈಖರಿ ಬಗ್ಗೆ ಜಿಲ್ಲೆಯ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ.
ಈ ರಸ್ತೆ ಈ ವರೆಗೆ 54% ಕಾಮಗಾರಿ ಆಗಿದೆ ಎಂದಷ್ಟೇ ಹೇಳಿದರೆ. ಈ ವರಗೆ ಸರ್ಕಾರ ಎಷ್ಟು ಹಣ ಬಿಡುಗಡೆ ಆಗಿದೆ ಎಂಬ ಪ್ರಶ್ನೆಗೆ ಅವರ ಬಳ ಉತ್ತರ ಇಲ್ಲ. ಜಿಲ್ಲೆಗೆ ಒಂದು ನವೋದಯ ಶಾಲೆ ತರದ ಇವರ ಕಾರ್ಯ ವೈಖರಿ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏನು ಕೇಳಿದರೆ ಮನವಿ ಸಲ್ಲಿಸಿರುವೆ ಎನ್ನುತ್ತಾರೆ.
ಮುದ್ರಿಸಿಕೊಂಡು ಬಂದಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಓದಿದರು.
ಗ್ಯಾರೆಂಟಿ ಯೋಜನೆಗಳೇ ಕಾಂಗ್ರೆಸ್ ಗೆಲುವಿಗೆ ಕಾರಣ ಎಂದ ಅವರು ಇದರಿಂದ ಜನರಿಂದ ಸೋಮಾರಿಗಳನ್ನಾಗಿ ಮಾಡಲಿದ್ದಾರೆಂದರು.
ಸುದ್ದಿಗೋಷ್ಟಿಯಲ್ಲಿ ನಗರ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಸಿರುಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಅನಿಲ್ ನಾಯ್ಡು, ಮುಖಂಡರುಗಳಾದ ಡಾ.ಬಿ.ಕೆ.ಸುಂದರ್, ಡಾ.ಅರುಣಾ ಕಾಮೇನೇನಿ ಮೊದಲಾದವರು ಇದ್ದರು.
One attachment • Scanned by Gmail