ಮೋದಿ ಸಂಪುಟದಲ್ಲಿ ವಕೀಲರು, ಎಂಬಿಎ ಪದವೀಧರರು

ನವದೆಹಲಿ,ಜೂ.೧೦- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೭೨ ಮಂದಿ ಮಂತ್ರಿ ಮಂಡಲದ ಹೊಸ ಸದಸ್ಯರ ಪೈಕಿಆರು ಮಂದಿ ವಕೀಲರು, ಮೂವರು ಎಂಬಿಎ ಪದವಿ ಪಡೆದವರು, ಹತ್ತು ಮಂದಿ ಸ್ನಾತಕೋತ್ತರ ಪದವೀಧರರು ಸಂಪುಟದಲ್ಲಿದ್ದಾರೆ.
ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜನಾಥ್ ಸಿಂಗ್ ಅವರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದು ಅಂಕಿ ಅಂಶಗಳು ಈ ಮಾಹಿತಿ ನೀಡಿವೆ.
೩೦ ಮಂದಿ ಸಂಪುಟ ದರ್ಜೆ ಸಚಿವರ ಪೈಕಿ ಆರು ವಕೀಲರು, ಮೂವರು ಎಂಬಿಎ ಪದವಿ ಪಡೆದವರು ಮತ್ತು ಹತ್ತು ಸ್ನಾತಕೋತ್ತರ ಪದವೀಧರರಿದ್ದಾರೆ, ಸಚಿವರಾದ ನಿತಿನ್ ಗಡ್ಕರಿ, ಜೆಪಿ ನಡ್ಡಾ, ಪಿಯೂಷ್ ಗೋಯಲ್, ಸರ್ಬಾನಂದ ಸೋನೋವಾಲ್, ಭೂಪೇಂದರ್ ಯಾದವ್ ಮತ್ತು ಕಿರಣ್ ರಿಜಿಜು. ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್, ಧರ್ಮೇಂದ್ರ ಪ್ರಧಾನ್, ಡಾ. ವೀರೇಂದ್ರ ಕುಮಾರ್, ಮನ್ಸುಖ್ ಮಾಂಡವೀಯಾ, ಹರ್ದೀಪ್ ಸಿಂಗ್ ಪುರಿ, ಅನ್ನಪೂರ್ಣ ದೇವಿ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ.
ಮನೋಹರ್ ಲಾಲ್, ಎಚ್. ಡಿ. ಕುಮಾರಸ್ವಾಮಿ, ಜಿತನ್ ರಾಮ್ ಮಾಂಝಿ, ರಾಜೀವ್ ರಂಜನ್ ಅಲಿಯಾಸ್ ಲಾಲನ್ ಸಿಂಗ್, ಪ್ರಲ್ಹಾದ್ ಜೋಶಿ ಮತ್ತು ಗಿರಿರಾಜ್ ಸಿಂಗ್ ಸೇರಿದಂತೆ ಆರು ಸಚಿವರು ಪದವೀಧರರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಹಿರಿಯರು ಮತ್ತು ಕಿರಿಯರ ಸಮ್ಮಿಶ್ರವೂ ಆಗಿದೆ.
ಮಾಜಿ ಮುಖ್ಯಮಂತ್ರಿಗಳಿಗೆ ಮಣೆ
ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಮೂರು ಮಂದಿ ಮಾಜಿ ಮುಖ್ಯಮಂತ್ರಿಗಳು ಸಂಪುಟ ದರ್ಜೆ ಸ್ಥಾನ ಮಾನ ಪಡೆದಿದ್ದಾರೆ.
ಅದರಲ್ಲಿ ಶಿವರಾಜ್ ಸಿಂಗ್ ಚೌಹಾಣ್ (ಮಧ್ಯಪ್ರದೇಶ), ಮನೋಹರ್ ಲಾಲ್ ಖಟ್ಟರ್ (ಹರಿಯಾಣ), ಮತ್ತು ಎಚ್ ಡಿ ಕುಮಾರಸ್ವಾಮಿ (ಕರ್ನಾಟಕ)ದಿಂದ ಸ್ಥಾನ ಪಡೆದಿದ್ದಾರೆ.
ಹೊಸ ಮುಖಗಳ ಪೈಕಿ ಕೇರಳದ ತ್ರಿಶೂರ್ ಸಂಸದ ಸುರೇಶ್ ಗೋಪಿ, ನಟ ಕಮ್ ರಾಜಕಾರಣಿಯಾಗಿದ್ದು, ಅವರು ಕೇರಳದಿಂದ ಬಿಜೆಪಿಯ ಮೊದಲ ಲೋಕಸಭಾ ಸಂಸದರಾಗಿದ್ದು ಕೇಂದ್ರದಲ್ಲಿ ಸಚಿವರಾಗಿದ್ದಾರೆ.