ಮೋದಿ ವಿರೋಧಿಸುವ ಬರದಲ್ಲಿ ಪ್ಯಾರಿಸ್‍ಪರ ನಿಂತಿದ್ದು ಏಷ್ಟು ಸರಿ?

ಇಂಡಿಯಾ ಮೈತ್ರಿಕೂಟದ ನಡೆ ಸ್ಪಷ್ಟಪಡಿಸಲಿ:ಕೂಚಬಾಳ
ತಾಳಿಕೋಟೆ:ಅ.20: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಉಗ್ರವಾದದ ವಿರೂದ ನಿಲುವು ತೆಗೆದುಕೊಳ್ಳುವದರೊಂದಿಗೆ ಇಸ್ರೇಲ್ ದೇಶದ ಪರವಾಗಿ ನಿಲ್ಲುತ್ತೇವೆಂದು ಹೇಳಿದ್ದರೆ ದೇಶವನ್ನು 60 ವರ್ಷಗಳ ಕಾಲ ಆಳ್ವಿಕೆ ಮಾಡಿರುವ ಇಂಡಿಯಾ ಅರ್ಥಾರ್ಥ ಯುಪಿಎ ಮೈತ್ರಿಕೂಟವು ಮೋದಿಜಿ ನಿಲುವು ವಿರೋಧಿಸುವ ಬರದಲ್ಲಿ ಪ್ಯಾರಿಸ್‍ಪರ ನಾವು ನಿಲ್ಲುತ್ತೇವೆಂದು ಹೇಳಿರುವದು ಎಷ್ಟು ಸರಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಪ್ರಶ್ನೀಸಿದರು.
ಗುರುವಾರರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಇಸ್ರೇಲ್ ದೇಶದ ಮೇಲೆ ಪ್ಯಾರಿಸ್ ಯುದ್ದ ಸಾರಿದ್ದರಿಂದ ಇಸ್ರೇಲ್ ದೇಶವು ಉಗ್ರವಾದದಿಂದ ತತ್ತರಿಸುತ್ತಾ ಸಾಗಿದೆ ಈ ಹಿಂದೆ ಭಾರತ ದೇಶವು ಕೂಡಾ ಉಗ್ರವಾದವನ್ನು ಎದುರಿಸಲಿಕ್ಕೆ ಸಾವಿರಾರು ಸಾವು ನೋವುಗಳನ್ನು ಕಂಡಿದೆ ಹೀಗಾಗಿ ಉಗ್ರವಾದವನ್ನು ಯಾವಾಗಲೂ ನಮ್ಮ ದೇಶವು ವಿರೋದಿಸುತ್ತಾ ಬಂದಿದೆ ಇಂತಹ ಸಂದರ್ಬದಲ್ಲಿ 60, 70 ವರ್ಷಗಳಿಂದ ಆಳ್ವಿಕೆ ಮಾಡುತ್ತಾ ಬಂದಿರುವ ಕಾಂಗ್ರೇಸ್‍ನವರು ಉಗ್ರವಾದವನ್ನು ನಾವು ಸಹಿಸುವದಿಲ್ಲಾವೆಂದು ಖಂಡಿಸುತ್ತೇವೆ ಎಂದು ನಾವು ಸಹಿಸುವದಿಲ್ಲಾ ಸಹಿಸುವದಿಲ್ಲಾವೆಂದು ಹೇಳುತ್ತಾನೆ ಎಲ್ಲವನ್ನು ಸಹಿಸಿಕೊಳ್ಳುತ್ತಾ ಬಂದಿದ್ದು ಜನರ ಕಣ್ಣಮುಂದೆ ಇದೆ ಆದರೆ ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿಜಿ ಅವರು ಭಾರತ ವಿರೋಧಿ ಶಕ್ತಿಗಳು ಕೃತ್ಯದೊಳಗೆ ತೊಡಗಿದ್ದರು ಅವರಿಗೆ ತಕ್ಕ ಪಾಠವನ್ನು ಕಲಿಸುವಂತಹ ಕೆಲಸ ಮಾಡಿದ್ದರ ಪರಿಣಾಮ ಭಾರತ ದೇಶವು ಸುಭದ್ರವಾಗಿರಲು ಕಾರಣವಾಗಿದೆ ಎಂದರು. ಇವತ್ತು ಭಯೋತ್ಪಾದನೆ ಶೇ. 90 ರಷ್ಟು ನಿಯಂತ್ರಣಕ್ಕೆ ಬಂದಿದೆ ಯಾರೂ ಭಾರತದ ವಿರೂದ್ದ ಮಾತಾಡಬಾರದು ಎಂಬ ಸ್ಥಿತಿಯೊಳಗ ನರೇಂದ್ರ ಮೋದಿಜಿ ಅವರ ನೇತೃತ್ವದ ಸರ್ಕಾರ ಆಡಳಿತವನ್ನು ಮಾಡುತ್ತಿದೆ ಎಂದರು. ಇವತ್ತು ಇಸ್ರೇಲ್ ದೇಶವು ಹಾಮಾಸ್ ಉಗ್ರರ ದಾಳಿಯಿಂದ ನಲುಗಿದೆ ಉಗ್ರರು ಪೈಶ್ಯಾಚಿಕ ಕೃತ್ಯಗಳು ಎಸಗುತ್ತಿದ್ದಾರೆ ಸಾವಿರಾರು ಮಕ್ಕಳ ಸೀರಛೇದನ ಮಾಡುತ್ತಿದ್ದಾರೆ ಇಂತಹ ಹಾಮಾಸ್ ಉಗ್ರರ ದಾಳಿಯನ್ನು ಖಂಡಿಸುವಂತಹ ಕೆಲಸ ಇಂಡಿಯಾ ಮೈತ್ರಿಕೂಟದವರು ಮಾಡಲಿಲ್ಲಾ ಆದರೆ ಪ್ಯಾರಿಸ್ ಪರವಾಗಿ ನಿಲ್ಲುತ್ತೇವೆಂಬ ಮಾತನ್ನು ಹೇಳಿದ್ದಾರೆಂದರು. ನಾಳೆಯ ದಿನಗಳಲ್ಲಿ ಪ್ಯಾರಿಸ್‍ನವರು ಭಾರತ ಮೇಲೆ ದಾಳಿ ಮಾಡಲಿಕ್ಕೆ ಬಂದರೆ ಇಂಡಿಯಾ ಮೈತ್ರಿಕೂಟದ ನಿಲುವು ಭಾರತದ ಪರವಾಗಿ ಇರುತ್ತದೆಯೋ ಅಥವಾ ಪ್ಯಾರಿಸ್ ಪರವಾಗಿ ಇರುತ್ತದೆಯೋ ಹಾಮಾಸ್ ಉಗ್ರರ ಪರವಾಗಿರುತ್ತದೆಯೋ ಎಂಬುದು ದೇಶದ ಜನರಿಗೆ ಮೈತ್ರಿಕೂಟದ ನಾಯಕರುಗಳು ಸ್ಪಷ್ಟಪಡಿಸಬೇಕಿದೆ ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರು ನಿಲಿವು ತೆಗೆದುಕೊಳ್ಳುವ ವಿರೂದ್ದವಾಗಿ ಹೇಳಿಕೆ ಕೊಡುವ ವಿಚಾರ ಹೊಂದಿರುವ ಮೈತ್ರಿಕೂಟದ ನಾಯಕರುಗಳು ದೇಶದ ಹಿತ, ರಕ್ಷಣೆ, ಬದ್ದತೆಗೋಸ್ಕರ ನಿಲುವನ್ನು ಹೊಂದಿದ್ದಾರೋ ಇಲ್ಲಾವೋ ಎಂಬುದನ್ನು ದೇಶದ ಜನರಿಗೆ ಸ್ಪಷ್ಠಿಕರಣ ಕೊಡುಬೇಕೆಂದು ಕಾಂಗ್ರೇಸ್‍ನ ನಾಯಕರಲ್ಲಿ ಆಗ್ರಹಮಾಡುತ್ತೇನೆಂದರು. ಎಐಸಿಸಿ ಅಧ್ಯಕ್ಷರು ನಮ್ಮ ರಾಜ್ಯದವರೇ ಆಗಿದ್ದಾರೆ ದೇಶದ ಆಂತರಿಕ ವಿಷಯಗಳಲ್ಲಿ ದೇಶದ ಹಿತಕಾಯುವಂತಹ ಕೆಲಸ ಮಾಡಬೇಕು ಇವತ್ತು ಹಾಮಾಸ್ ಉಗ್ರರು, ಪ್ಯಾರಿಸ್‍ನವರಿಗೆ ಬೆಂಬಲಕೊಟ್ಟರೆ ಪರಿಣಾಮ ಏನು ಆಗುತ್ತದೆ ಹಿಂದೆ ನಾವು ಏನು ಅನುಭವಿಸಿದ್ದೇವೆ ಎಂಬ ದೂರದೃಷ್ಠಿ ಇಟ್ಟುಕೊಂಡು ಆಲೋಚನೆ ಮಾಡಿ ಹೇಳಿಕೆಗಳನ್ನು ನೀಡಬೇಕು ಆದರೆ ಕಾಂಗ್ರೇಸ್ ನಾಯಕರುಗಳ ನಡೆ ಏನು ಇದೆ ಎಂಬುದನ್ನು ದೇಶದ ಜನರಿಗೆ ಸ್ಪಷ್ಠಿಕರಣ ಕೊಡಬೇಕೆಂದು ಒತ್ತಾಯಿಸಿದರು. ಕಾಂಗ್ರೇಸ್‍ನವರ ಸಿದ್ದಾಂತ ಬರೇ ಬ್ರಷ್ಟಾಚಾರ ದುರಾಡಳಿತ ದೇಶದ ಆಂತರಿಕ ವಿಷಯಗಳಲ್ಲಿ ರಾಜಿ ಮಾಡುತ್ತಾ ಬಂದ ಪರಿಣಾಮ ದೇಶವನ್ನು ದುಸ್ಥಿತಿಗೆ ತೆಗೆದುಕೊಂಡು ಬಂದು ನಿಲ್ಲಿಸಿದ್ದರು. ಇದರ ಭಾಗವಾಗಿ ಕರ್ನಾಟಕದಲ್ಲಿ ನೋಡುತ್ತಿದ್ದೇವೆ ಜನರಿಗೆ ಆಸೆ ಆಮೀಷಗಳನ್ನು ಒಡ್ಡಿ ವಿವಿಧ ಗ್ಯಾರೆಂಟಿಗಳನ್ನು ಕೊಡುತ್ತೇವೆಂದು ಬರವಸೆ ನೀಡಿ ಬರವಸೆಗಳನ್ನು ಬರವಸೆಗಳನ್ನಾಗಿ ಉಳಿಸಲಾಗಿದೆ ಈ ಗ್ಯಾರೆಂಟಿಗಳ ಪರಿಣಾಮ ಇವತ್ತು 200 ಯುನಿಟ್ ವಿದ್ಯುತ್ ಪ್ರೀ ಎಂದು ಹೇಳಿದರು ಆದರೆ ಇವತ್ತು ವಿದ್ಯುತ್ ಕಣ್ಣುಮುಚ್ಚಾಲೆ ನೋಡಲು ಆಗುತ್ತಿಲ್ಲಾ ರೈತರಿಗೆ 7 ತಾಸು ವಿದ್ಯುತ್ ಕೊಡಬೇಕು 5 ತಾಸು ಕೊಡುತ್ತೇವೆಂದು ಹೇಳಿದರಿ ಆದರೆ ಸರಿಯಾಗಿ 1 ತಾಸು ರೈತರಿಗೆ ವಿದ್ಯುತ್ ಸಿಗುತ್ತಿಲ್ಲಾವೆಂದರು. ರಾಜ್ಯದ ತುಂಬಾ ಬರಗಾಲ ಆವರಿಸಿದೆ ಬರಗಾಲ ಯಾವ ರೀತಿ ಎದುರಿಸಬೇಕೆಂಬ ಆಲೋಚನೆ ಸರ್ಕಾರಕ್ಕೆ ಇಲ್ಲಾವೆಂದರು. ಬ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಬರೇ ಕಮಿಷನ್ ದಂದೆಯಲ್ಲಿದ್ದಾರೆ ಬೆಂಗಳೂರಿನ ಕಾಂಗ್ರೇಸ್‍ನವರ ಒಬ್ಬಬ್ಬರ ಮನೆಯಲ್ಲಿ ನೂರಾರು ಕೋಟಿ ರೂ. ಸಿಗುತ್ತಿದೆ ಎಂದರು.
ಡಿಕೆಸಿಗೆ ಹಣವೆಲ್ಲವೂ ಖಾಗದವಾಗಿ ಕಾಣುತ್ತಿದೆ
ಹೈದ್ರಾಬಾದ್‍ನಲ್ಲಿ ರಾಜ್ಯದ ಸಚೀವರಾದ ಶಿವಾನಂದ ಪಾಟೀಲ ಅವರು ಖಾಸಗಿ ಕಾರ್ಯಕ್ರಮದಲ್ಲಿ ತೊಡಗಿದ್ದಾಗ ಸಚೀವರು ಇದ್ದಾಗ ಸಮಯದಲ್ಲಿ ಹಣವನ್ನು ತೂರಾಡಲಾಗಿದೆ ಇದನ್ನು ನೋಡಿದ ಸಚೀವರು ಖಂಡಿಸುವ ಬದಲು ಮೌನವಹಿಸಿ ನೋಡುತ್ತಲೇ ಕುಳಿತುಕೊಂಡಿದ್ದಾರೆ ಆದರೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಸಚಿವರ ಎದುರು ತೂರಾಡಿರುವದು ಹಣವಲ್ಲಾ ಅದು ಖಾಗದ ಎಂದು ಹೇಳಿಕೆ ನೀಡಿದ್ದಾರೆ ಡಿಕೆಸಿ ಅವರಿಗೆ ಕೋಟಿಗಟ್ಟಲೇ ಹಣ ತೂರಿರುವದು ಬೆಂಗಳೂರಿನಲ್ಲಿ ಸಿಕ್ಕಿರುವ ಹಣ ಖಾಗದವೆಂದು ಹೇಳಿರುವದು ಏಷ್ಟು ಸರಿ ಇವರು ಹಣವನ್ನು ಅಕ್ರಮದಿಂದ ಸಂಗ್ರಹಸಿದ ಪರಿಣಾಮ ಹಿಂದೊಮ್ಮೆ ಜೇಲು ಅನುಭವಿಸಿ ಬಂದಿದ್ದಾರೆ ಸದ್ಯ ಸಿಬಿಐ ತನಿಖೆ ಚುರುಕುಗೊಳಿಸಿ 3 ತಿಂಗಳೊಳಗೆ ಚಾರಸೀಟ್ ಸಲ್ಲಿಸಬೇಕೆಂದು ಹೇಳಿದೆ ನೀವು ಮಾಡಿರುವ ಬ್ರಷ್ಟಾಚಾರ ನಿಮ್ಮನ್ನು ತಿನ್ನುತ್ತಿದೆ ಎಂದರು.
ಈ ಸಮಯದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಬಿಜೆಪಿ ಜಿಲ್ಲಾ ರೈತ ಮೂರ್ಚಾದ ಸಿದ್ದು ಬುಳ್ಳಾ, ಉಪಾಧ್ಯಕ್ಷ ನ್ಯಾಯವಾದಿ ಎಂ.ಡಿ.ಕುಂಭಾರ, ಅವರು ಉಪಸ್ಥಿತರಿದ್ದರು.