ಮೋದಿ ವಿರುದ್ಧ ಸಿಸೋಡಿಯಾ ವಾಗ್ದಾಳಿ

ನವದೆಹಲಿ, ಏ. ೭- ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಕೊರತೆ ಭಾರತಕ್ಕೆ ‘ಅಪಾಯಕಾರಿ’ ಎಂದು ಜೈಲಿನಲ್ಲಿರುವ ಅಮ್ ಆದ್ಮಿ ಪಕ್ಷದ ನಾಯಕ ಮಾಜಿ ಸಚಿವ ಮನೀಶ್ ಸಿಸೋಡಿಯಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಹಿತಿ ಹಕ್ಕು -ಆರ್‌ಟಿಐ ಮೂಲಕ ಪ್ರಧಾನಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿವರ ಕೇಳಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆ ಗುಜರಾತ್ ಹೈಕೋರ್ಟ್ ಇತ್ತೀಚೆಗೆ ರೂ ೨೫,೦೦೦ ದಂಡ ವಿಧಿಸಿದ ಹಿನ್ನೆಲೆಯಲ್ಲಿ ಮನೀಶ್ ಸಿಸೋಡಿಯಾ ಅವರು ಜೈಲಿನಿಂದಲೇ ಬರೆದಿರುವ ಪತ್ರದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿರುವ ಮನೀಶ್ ಸಿಸೋಡಿಯಾ ಅವರ ಕೈಬರಹದ ಪತ್ರದಲ್ಲಿ, “ಇಂದಿನ ಯುವಕರು ಮಹತ್ವಾಕಾಂಕ್ಷೆ ಹೊಂದಿದ್ದಾರೆ, ಅವರು ಏನನ್ನಾದರೂ ಸಾಧಿಸಲು ಬಯಸುತ್ತಾರೆ.ಹಾಗು ಅವಕಾಶಗಳನ್ನು ಹುಡುಕುತ್ತಿದ್ದಾರೆ. ಜಗತ್ತನ್ನು ಗೆಲ್ಲಲು ಬಯಸುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅದ್ಭುತಗಳನ್ನು ಮಾಡಲು ಬಯಸುತ್ತಾರೆ. ಇದು ಕಡಿಮೆ ವಿದ್ಯಾವಂತ ಪ್ರಧಾನಿಗೆ ಸಾಮರ್ಥ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ದಿನದಿಂದ ದಿನಕ್ಕೆ ಪ್ರಗತಿ ಹೊಂದುತ್ತಿದ್ದು, ಪ್ರಪಂಚ ಕೃತಕ ಬುದ್ಧಿಮತ್ತೆಯ ಬಗ್ಗೆ ಮಾತನಾಡುತ್ತಿದೆ ಎಂದು ಹೇಳಿದ್ದಾರೆ.
ಕೊಳಕು ಚರಂಡಿಯಲ್ಲಿ ಪೈಪ್ ಅಳವಡಿಸಿ ಕೊಳಕು ಅನಿಲದಿಂದ ಚಹಾ ಅಥವಾ ಆಹಾರವನ್ನು ತಯಾರಿಸಬಹುದು ಎಂದು ಪ್ರಧಾನಿ ಹೇಳುವುದನ್ನು ಕೇಳಿದಾಗ ಅವರ ಬಗ್ಗೆ ಕನಿಕರ ಮೂಡುತ್ತದೆ. ಚರಂಡಿಯ ಕೊಳಕು ಅನಿಲದಿಂದ ಆಹಾರವನ್ನು ಬೇಯಿಸಬಹುದೇ ಇದು ಅವರ ಮನಸ್ಥಿತಿ ಬಿಂಬಿಸಲಿದೆ ಎಂದಿದ್ದಾರೆ.
ವಿಮಾನವನ್ನು ರಾಡಾರ್ ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳುತ್ತಾರೆ, ಇದು ಅವರ ಬಗ್ಗೆ ಪ್ರಪಂಚದಲ್ಲಿ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ.ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಅವರನ್ನು ಅಣಕಿಸುತ್ತಾರೆ, ”ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಕಡಿಮೆ ಶಿಕ್ಷಣ ಪಡೆದಿದ್ದಾರೆ ಮತ್ತು ವಿಜ್ಞಾನದ ಮೂಲಭೂತ ಜ್ಞಾನ ಹೊಂದಿಲ್ಲ ಎಂದು ಇಡೀ ಜಗತ್ತಿಗೆ ತಿಳಿದಿದೆ ಎಂದು ಹೇಳಿರುವ ಅವರು ಪ್ರತಿ ಅಪ್ಪುಗೆಗೆ ಹೆಚ್ಚಿನ ವೆಚ್ಚವನ್ನು ಪಡೆಯುತ್ತಾರೆ. ಅವರು ಯಾವ ಪೇಪರ್‌ಗಳಿಗೆ ಸಹಿ ಹಾಕುತ್ತಾರೆ ಎಂಬುದು ತಿಳಿದಿಲ್ಲ, ಏಕೆಂದರೆ ಅವರು ಕಡಿಮೆ ಶಿಕ್ಷಣ ಪಡೆದಿರುವ ಕಾರಣ ಪ್ರಧಾನಿಗೆ ಅರ್ಥವಾಗುತ್ತಿಲ್ಲ ಎಂದು ದೂರಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ೬೦,೦೦೦ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಆರೋಪಿಸಿದ ಮನೀಶ್ ಸಿಸೋಡಿಯಾ, ಶಿಕ್ಷಣ ಸರ್ಕಾರದ ಆದ್ಯತೆಯಲ್ಲ ಎಂಬುದನ್ನು ಇದು ತೋರಿಸುತ್ತದೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡದಿದ್ದರೆ ದೇಶ ಪ್ರಗತಿ ಹೊಂದಲು ಎಂದಿಗೂ ಸಾದ್ಯವೇ ಅಲ್ಲ ಎಂದಿದ್ದಾರೆ.