ಮೋದಿ ವಿರುದ್ಧ ವಿಪಕ್ಷಗಳ ಅವಿಶ್ವಾಸ

ನವದೆಹಲಿ,ಜು,೨೬- ಪ್ರಧಾನಿ ನರೇಂದ್ರಮೋದಿ ಸರ್ಕಾರದ ವಿರುದ್ಧ ಸಮರ ಸಾರಿರುವ ಇಂಡಿಯಾ ಮೈತ್ರಿಕೂಟ ಲೋಕಸಭೆಯಲ್ಲಿಂದು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದೆ. ದೇಶಾದ್ಯಂತ ಭಾರಿ ಕೋಲಾಹಲಕ್ಕೆ ಕಾರಣವಾಗಿರುವ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರ ಕುರಿತಂತೆ ಪ್ರಧಾನಿಯವರು ಮೌನಕ್ಕೆ ಶರಣಾಗಿದ್ದು, ಈ ಕುರಿತು ಲೋಕಸಭೆಯಲ್ಲಿ ಹೇಳಿಕೆ ನೀಡುವಂತೆ ಬಿಗಿಪಟ್ಟು ಹಿಡಿದಿರುವ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿವೆ.
ದೇಶಾದ್ಯಂತ ಕೋಲಾಹಲಕ್ಕೆ ಕಾರಣವಾಗಿರುವ ಮಣಿಪುರ ಹಿಂಸಾಚಾರ ಪ್ರಕರಣದ ವಿರುದ್ಧ ಇಂಡಿಯಾ ಮೈತ್ರಿಕೂಟ ಸಮರ ಸಾರಿದ್ದು, ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ಹೆಣೆದಿದೆ. ಅದರಂತೆಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಮೈತ್ರಿಕೂಟ “ಇಂಡಿಯಾ” ಪ್ರಧಾನಿ ನರೇಂದ್ರ ಮೋದಿ ವಿರುದ್ದ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿವೆ.ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ ನಂತರ ಎರಡನೇ ಅವಧಿಯಲ್ಲಿ ಮತ್ತೊಮ್ಮೆ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿದೆ. ಈ ಮೂಲಕ ಎನ್‌ಡಿಎ ಸರ್ಕಾರದ ವಿರುದ್ಧ ವಿಪಕ್ಷಗಳು ಸಮರ ಸಾರಿವೆ.
ವಿರೋಧ ಪಕ್ಷಗಳ ೫೦ ಕ್ಕಿಂತ ಹೆಚ್ಚು ಲೋಕಸಭೆಯ ಸದಸ್ಯರು ಪ್ರಧಾನಿ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆಗೆ ಸಹಿ ಹಾಕಿದ್ದು ಲೋಕಸಭಾಧ್ಯಕ್ಷರಿಗೆ ಅವಿಶ್ವಾಸ ಮಂಡನೆಯ ನೋಟೀಸ್ ನೀಡಿ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಕೋರಲಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕ ಗೌರವ್ ಗೋಗಿ ತಿಳಿಸಿದ್ದಾರೆ.
ಚರ್ಚೆಗೆ ಸಮಯ ನಿಗದಿ ಸ್ಪೀಕರ್ ಭರವಸೆಅವಿಶ್ವಾಸ ನಿರ್ಣಯ ಸಂಬಂಧ ಲೋಕಸಭೆಯಲ್ಲಿ ಗದ್ದಲ ಉಂಟಾಗಿ ಸದನವನ್ನುಒಂದು ಬಾರಿ ಮುಂದೂಡಲಾಗಿತ್ತು. ನಂತರ ಸದನ ಸಮಾವೇಶಗೊಂಡಾಗ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ವಿಪಕ್ಷಗಳ ಒಕ್ಕೂಟ ಇಂಡಿಯಾ ಸಲ್ಲಿಸಿರುವ ಅವಿಶ್ವಾಸ ಪ್ರಸ್ತಾವನೆ ಕುರಿತು ಮಾತನಾಡಿ ಚರ್ಚೆಗೆ ಸಮಯವನ್ನು ನಿಗದಿ ಮಾಡುವುದಾಗಿ ಹೇಳಿದರು.
ಎಲ್ಲ ಪಕ್ಷಗಳೊಂದಿಗೆ ಚರ್ಚಿಸಿ ಅವಿಶ್ವಾಸ ನಿರ್ಣಯದ ಚರ್ಚೆಯ ದಿನಾಂಕ ಮತ್ತು ಸಮಯವನ್ನು ನಿಗದಿಮಾಡುವುದಾಗಿಯೂ ಸ್ಪೀಕರ್ ಓಂಬಿರ್ಲಾ ಹೇಳಿದರು.
ಕಾಂಗ್ರೆಸ್ ಮುಖ್ಯಸಚೇತಕ ಮಾಣಿಕಂ ಟ್ಯಾಗೋರ್ ಅವರು ಅವಿಶ್ವಾಸ ನಿರ್ಣಯವನ್ನು ಮಂಡಿಸುವ ವಿಧಾನ ಟ್ವೀಟ್ ಮಾಡಿ, ಪಕ್ಷದ ಸದಸ್ಯರಿಗೆ ಪಕ್ಷ ಮೂರು ಸಾಲಿನ ವಿಪ್ ಕೂಡ ಜಾರಿ ಮಾಡಿದೆ. ಮಣಿಪುರದ ಬಗ್ಗೆ ಮಾತನಾಡಲು ಪ್ರಧಾನಿಯನ್ನು ಒತ್ತಾಯಿಸುವುದು ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಹಿಂದಿನ ಆಲೋಚನೆಯಾಗಿದೆ.
ಅವಿಶ್ವಾಸ ನಿರ್ಯಣದ ನೋಟೀಸ್ ನೀಡಿದ ಸಂಸದರ ಎಣಿಕೆಯ ನಂತರ ಲೋಕಸಭಾದ್ಯಕ್ಷರು, ನಿಯಮ ೧೯೮ ರ ಅಡಿಯಲ್ಲಿ ಚರ್ಚೆಗೆ ನೋಟಿಸ್ ಸಲ್ಲಿಸಿದ ೧೦ ದಿನಗಳಲ್ಲಿ ದಿನಾಂಕ ನಿರ್ಧರಿಸಬೇಕಾಗಿದೆ. ಸಭಾಧ್ಯಕ್ಷರು ನಿರ್ಧರಿಸಿದ ದಿನ ಸರ್ಕಾರವು ತನ್ನನ್ನು ತಾನು ಸಮರ್ಥಿಸಿಕೊಳ್ಳಬೇಕಾಗುತ್ತದೆ.
ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಎರಡನೇ ಅವಧಿಗೆ ಮೊದಲ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ೨೦೧೮ರ ಜುಲೈ ೨೦ ರಂದು ತನ್ನ ಮೊದಲ ಅವಧಿಯಲ್ಲಿ ಆಡಳಿತದಲ್ಲಿ ಅವಿಶ್ವಾಸ ಮಂಡಿಸಿದ್ದರು.
ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಪರ ಸಂಖ್ಯಾಬಲ ಹೆಚ್ಚಿರುವುದರಿಂದ ಲೋಕಸಭೆಯಲ್ಲಿ ಮೇಲೆ ಅವಿಶ್ವಾಸ ನಿರ್ಣಯ ಸೋಲಿಸಲು ಸಾಧ್ಯವಾಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕರಿಗೆ ತಿಳಿದಿದ್ದರೂ, ಅದನ್ನು ತಳ್ಳುವ ಹಿಂದಿನ ಆಲೋಚನೆ ಇದ್ದರೂ ಮಣೀಪುರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ನೀಡುವಂತೆ ಆಗ್ರಹಿಸುವುದು ಅವರ ಉದ್ದೇಶವಾಗಿದೆ.
ಲೋಕಸಭೆಯು ಪ್ರಸ್ತುತ ೫೪೩ ಸ್ಥಾನಗಳನ್ನು ಹೊಂದಿದ್ದು, ಅದರಲ್ಲಿ ಐದು ಸ್ಥಾನಗಳು ಖಾಲಿ ಇವೆ. ಎನ್‌ಡಿಎ ೩೩೦ ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ, ಇಂಡಿಯಾ ಗುಂಪಿನ ಸದಸ್ಯರು ೧೪೦ ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದಾರೆ, ಆದರೆ ೬೦ ಕ್ಕೂ ಹೆಚ್ಚು ಸದಸ್ಯರು ಎರಡು ಬಣಗಳಲ್ಲಿ ಯಾವುದೇ ಪಕ್ಷಗಳಲ್ಲಿ ಗುರುತಿಸಿಕೊಂಡಿಲ್ಲ.
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಲೋಕಸಭೆಯಲ್ಲಿ ಮಣಿಪುರದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಒತ್ತಾಯಿಸಿ ನೋಟಿಸ್ ನೀಡಿದ್ದಾರೆ. ಮತ್ತೊಂದೆಡೆ ರಾಜ್ಯಸಭೆಯಲ್ಲಿ ಡಿಎಂಕೆ ಸದಸ್ಯ ತಿರುಚಿ ಶಿವ, ಆರ್‍ಜೆಡಿ ಸಂಸದ ಮನೋಜ್ ಕುಮಾರ್ ಝಾ, ಕಾಂಗ್ರೆಸ್ ಸದಸ್ಯರಾದ ರಾಜೀವ್ ಶುಕ್ಲಾ ಮತ್ತು ರಂಜೀತ್ ರಂಜನ್ ಮತ್ತು ಎಎಪಿ ಸದಸ್ಯ ರಾಘ ಚಡ್ಡಾ ಅವರು ರಾಜ್ಯಸಭೆಯಲ್ಲಿ ನಿಯಮ ೨೬೭ ರ ಅಡಿಯಲ್ಲಿ ವ್ಯವಹಾರ ನೋಟಿಸ್ ಅಮಾನತುಗೊಳಿಮಣಿಪುರ ಪರಿಸ್ಥಿತಿಯ ಕುರಿತು ಚರ್ಚೆಗೆ ಒತ್ತಾಯಿಸಿದ್ದಾರೆ.

ಜನರಿಗೆ ವಿಶ್ವಾಸ: ಜೋಶಿ
ದೇಶದ”ಜನರಿಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಮೇಲೆ ವಿಶ್ವಾಸವಿದೆ. ಅವರು ಕಳೆದ ಅವಧಿಯಲ್ಲೂ ಅವಿಶ್ವಾಸ ನಿರ್ಣಯವನ್ನು ತಂದರು. ಅವರಿಗೆ ಈ ದೇಶದ ಜನರು ತಕ್ಕ ಪಾಠ ಕಲಿಸಿದ್ದಾರೆ” ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಹೇಳಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರಲು ಕಾರಣರಾಗಿದ್ದಾರೆ. ಈಗಲೂ ಮಂಡಿಸಿದರೆ ಮುಂದಿನ ಬಾರಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾತನಾಡಿ ಅವಿಶ್ವಾಸ ಗೊತ್ತುವಳಿ ಬರಲಿ, ಯಾವುದೇ ಪರಿಸ್ಥಿತಿಗೆ ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಸಂಸತ್ತಿಗೆ ಬರಲು ಸಹಕಾರಿ
ಅವಿಶ್ವಾಸ ನಿರ್ಣಯ ರಾಜಕೀಯ ಉದ್ದೇಶದೊಂದಿಗೆ ತರುವ ರಾಜಕೀಯ ನಡೆ.ಅವಿಶ್ವಾಸ ನಿರ್ಣಯ ಮಂಡನೆಯಿಂದ ಪ್ರದಾನಿ ಅವರನ್ನು ಅವರನ್ನು ಸಂಸತ್ತಿಗೆ ಬರುವಂತೆ ಒತ್ತಾಯಿಸುತ್ತದೆ ಎಂದು ಸಿಪಿಐ ಸಂಸದ ಬಿನೋಯ್ ವಿಶ್ವಂ ಹೇಳಿದ್ದಾರೆ.
ಸಂಸತ್ತಿನ ಒಳಗೆ ದೇಶದ ಸಮಸ್ಯೆಗಳ ಬಗ್ಗೆ ವಿಶೇಷವಾಗಿ ಮಣಿಪುರದ ಬಗ್ಗೆ ಚರ್ಚೆ ನಡೆಸಲು ಸಹಕಾರಿಯಾಗಲಿದೆ ಎಂದಿದ್ದಾರೆ.