ಮೋದಿ ವಿರುದ್ಧ ಪ್ರಿಯಾಂಕ್ ಕಿಡಿ

ರಾಯ್‌ಬರೇಲಿ,ಮೇ. ೯- ಚುನಾವಣಾ ಪ್ರಚಾರದಲ್ಲಿ ಉದ್ಯಮಿಗಳಾದ ‘ಅಂಬಾನಿ-ಅದಾನಿ’ ಹೆಸರು ಉಲ್ಲೇಖಿಸದಿರುವುದಕ್ಕೆ ಟೆಂಪೋದಲ್ಲಿ ರಾಹುಲ್ ಗಾಂಧಿ ಹಣ ಪಡೆದಿರಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಸುಮ್ಮನೆ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಅವರು ಈ ಇಬ್ಬರು ಉದ್ಯಮಿಗಳ ಅವರ ಹೆಸರನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಬದಲಾಗಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲಿ ಅದಾನಿ ,ಅಂಬಾನಿ ವಿರುದ್ದ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಯ್ ಬರೇಲಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಬಿಜೆಪಿ “೪೦೦ ಸ್ಥಾನಗಳು ಬರುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ. ಅದು ಕನಸಿನ ಮಾತು ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ, ಬಾಬರಿ ಮಸೀದಿ ಪ್ರಕರಣಕ್ಕೆ ಮುರುಜೀವ ಕೊಡಲು ಕಾಂಗ್ರೆಸ್ ಮುಂದಾಗಿದೆ ಎನ್ನುವ ಆರೋಪಕ್ಕೆ ಉತ್ತರಿಸಿದ ಅವರು “ಇದು ಹಸಿ ಸುಳ್ಳು, ಕಾಂಗ್ರೆಸ್ ಮತ್ತೆ ಮತ್ತೆ ಹೇಳುತ್ತಿದೆ. ಪ್ರತಿಯೊಬ್ಬರೂ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಗೌರವಿಸುತ್ತೇವೆ ಮತ್ತು ಅದನ್ನೇ ನಾವು ಮಾಡಿದ್ದೇವೆ ಮತ್ತು ಮಾಡುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
೫ ಕೆಜಿ ಪಡಿತರ ನೀಡುವುದರಿಂದ ‘ಆತ್ಮನಿರ್ಭರ್’ ಮಾಡಲು ಸಾಧ್ಯವಿಲ್ಲ ಜೊತೆಗೆ ಪೂರಕ ಕಾರ್ಯಕ್ರಮ ಜಾರಿ ಮಾಡಬೇಕು ೫ ಕೆಜಿ ಪಡಿತರ, ಅಥವಾ ಉದ್ಯೋಗದ ವಿಷಯದಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಲು ಉದ್ಯೋಗ ಅವಲಿಂಬಿಸಿತ್ತೇವೆ. ಪ್ರಧಾನಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ ಎಂದು ದೂರಿದ್ದಾರೆ.
ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ (ಇಎಸಿ-ಪಿಎಂ) ಅಧ್ಯಯನ ೧೯೫೦ ಮತ್ತು ೨೦೧೫ ರ ನಡುವೆ ಹಿಂದೂಗಳ ಜನಸಂಖ್ಯೆಯ ಪಾಲು ಶೇಕಡಾ ೭.೮೧ ರಷ್ಟು ಕುಸಿದಿದೆ ಮತ್ತು ಅಲ್ಪಸಂಖ್ಯಾತರ ಪಾಲು ಹೆಚ್ಚಾಗಿದೆ ಎಂದು ಬಹಿರಂಗಪಡಿಸುತ್ತದೆ ಎಂದು ಹೇಳುವ ಮೂಲಕ ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ನಾನು ನಿಮಗೆ ಮತ್ತೆ ಮತ್ತೆ ಹೇಳುತ್ತಿದ್ದೇನೆ. ಅಸಾದುದ್ದೀನ್ ಓವೈಸಿ ನೇರವಾಗಿ ಬಿಜೆಪಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇತರ ಪಕ್ಷಗಳನ್ನು ಹಿಮ್ಮೆಟ್ಟಿಸಲು ಬಿಜೆಪಿಗೆ ಯಾರನ್ನಾದರೂ ನಿಲ್ಲಿಸಲು ಅವರು ಎಲ್ಲಿ ಬೇಕಾದರೂ ಮಾಡುತ್ತಿದ್ದಾರೆ, ಇದು. ತೆಲಂಗಾಣ ಚುನಾವಣೆಯಲ್ಲಿ ಇದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.