ಕಲಬುರಗಿ,ಸೆ.26: ರಾಷ್ಟ್ರೀಯ ಮೋದಿ ವಿಚಾರ ಮಂಚನ ಕರ್ನಾಟಕ ರಾಜ್ಯ ದ ನೂತನ ಅಧ್ಯಕ್ಷರಾಗಿ ಹಾಗೂ ಕೇಂದ್ರ ಸರಕಾರದ ಪ್ರಾಂತ ಗ್ರಾಹಕ ಸಂರಕ್ಷಣ ಪರಿಷತ್ತು ಇದರ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ಆಯ್ಕೆ ಹೊಂದಿದೆ ಹಿರಿಯ ಉದ್ಯಮಿಗಳು ಮತ್ತು ದಕ್ಷಿಣ ಕನ್ನಡ ಸಂಘದ ಹಿರಿಯ ಸದಸ್ಯರಾದ ಶಿವರಾಜ್ ಜೆ ಕೋಟ್ಯಾನ್ ಅವರಿಗೆ ದಕ್ಷಿಣ ಕನ್ನಡ ಸಂಘದಿಂದ ಗೌರವ ಅಭಿನಂದನೆ ನೀಡಲಾಯಿತು.
ಕಲ್ಬುರ್ಗಿಯ ಶ್ರೀ ಯಾತ್ರಿ ನಿವಾಸ ಹೋಟೆಲ್ ನಲ್ಲಿ ಸೆಪ್ಟಂಬರ್ 26ರಂದು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ದ .ಕ..ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಮತ್ತು ಸಂಘದ ಹಿರಿಯ ಸದಸ್ಯರು ಶಾಲು ಸ್ಮರಣಿಕೆ ಹಾಗೂ ಹೂಗುಚ್ಛ ನೀಡಿ ಸತ್ಕರಿಸಿದರು. ರಾಷ್ಟ್ರೀಯ ಮಟ್ಟದ ಎರಡು ಪ್ರಮುಖ ಸಂಘಟನೆಗಳಲ್ಲಿ ಸೇವೆ ಮಾಡಲು.ಸದವಕಾಶ ಲಭಿಸಿದ್ದು ನಾಡಿಗೆ ಉತ್ತಮ ಸೇವೆ ಮಾಡಿ ಕೀರ್ತಿ ತನ್ನಿ ಎಂದು ಡಾ. ಸದಾನಂದ ಪೆರ್ಲ ಶುಭ ಹಾರೈಸಿದರು. ಸನ್ಮಾನಕ್ಕೆ ಪ್ರತ್ಯುತ್ತರಿಸಿದ ಶಿವರಾಜ್ ಜೆ ಕೋಟ್ಯಾನ್ ಅವರು ಮಾತನಾಡಿ ರಾಷ್ಟ್ರೀಯ ಮೋದಿ ವಿಚಾರ ಮಂಚ್ ಒಂದು ಸ್ವಯಂಸೇವಾ ಸಂಸ್ಥೆಯಾಗಿದ್ದು ಜನಪರವಾಗಿ ಕೆಲಸ ಮಾಡುವ ಸಾಮಾಜಿಕ ಸಂಘಟನೆ ಮತ್ತು ಕೇಂದ್ರದ ವಿವಿಧ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಹಾಗೂ ರಾಷ್ಟ್ರೀಯ ವಿಚಾರಧಾರೆಯನ್ನು ಪಸರಿಸುವ ಕಾರ್ಯ ಮಾಡುತ್ತಿದೆ ಹಾಗೂ ಪ್ರಾಂತ ಗ್ರಾಹಕ ಸಂರಕ್ಷಣ ಸಂಸ್ಥೆಯು ಗ್ರಾಹಕರ ಕುಂದುಕೊರತೆಗಳಿಗೆ ಸ್ಪಂದಿಸುವ ಮತ್ತು ನ್ಯಾಯ ಒದಗಿಸುವ ಸಂಸ್ಥೆಯಾಗಿದೆ.ಈ ಎರಡು ಸಂಸ್ಥೆಗಳ ಮೂಲಕ ಜನರ ಸೇವೆ ಸಲ್ಲಿಸಲು ಒಂದು ಉತ್ತಮ ಅವಕಾಶವಾಗಿದ್ದು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ.ಅಕ್ಟೋಬರ್ 12 ರಂದು ಕಲಬುರ್ಗಿಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಮೋದಿ ವಿಚಾರ ಮಂಚ್ ನ ರಾಷ್ಟ್ರೀಯ ಅಧ್ಯಕ್ಷರಾದ ರವಿ ಚಾಣಕ್ಯ ಅವರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ ಮತ್ತು ಕಲಬುರ್ಗಿಯಲ್ಲಿ ಕೂಡ ಜನಪರವಾದ ಸೇವಾ ಕಾರ್ಯಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಕಲ್ಬುರ್ಗಿ ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯರಾದ ನರಸಿಂಹ ಮೆಂಡನ್ ಮಾತನಾಡಿ ಶಿವರಾಜ್ ಕೋಟ್ಯಾನ್ ಅವರು ಎರಡು ಸಂಸ್ಥೆಗಳಲ್ಲಿ ದುಡಿದು ಈ ಭಾಗಕ್ಕೆ ನೆರವಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ದತ್ತ ಆರ್ ಚಂದನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸುನಿಲ್ ಶೆಟ್ಟಿ ಶಂಕರ್ ಆರ್ ಚಂದನ್ ಸತ್ಯನಾಥ ಮೂಡಬಿದ್ರೆ ಮತ್ತೆ ತರರು ಭಾಗವಹಿಸಿದ್ದರು ಸಂಘದ ಪ್ರಧಾನ ಕಾರ್ಯದರ್ಶಿ ಪುರಂದರ ಭಟ್ ಧನ್ಯವಾದ ಸಲ್ಲಿಸಿದರು.