ಮೈಸೂರು: ಜೂ.11:- ಸ್ಥಳೀಯ ನಾಯಕತ್ವವನ್ನು ಕಡೆಗಣಿಸಿ ಮೋದಿ ವರ್ಚಸ್ಸನಿಂದ ಚುನಾವಣೆ ಗೆಲ್ಲುತ್ತೇವೆ ಎಂಬ ಬಿಜೆಪಿ ಲೆಕ್ಕಾಚಾರವನ್ನು ಕರ್ನಾಟಕ ಚುನಾವಣೆ ಹುಸಿಗೊಳಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತಾರಣ ಕೇಂದ್ರ ವತಿಯಿಂದ ವಿಶ್ವಜ್ಞಾನಿ ಸಭಾಂಗಣದಲ್ಲಿ ಆಯೋಜಿಸಿದ್ದ 16 ನೇ ವಿಧಾನಸಭಾ ಚುನಾವಣೆ: ಪ್ರಭಾವ, ಪರಿಣಾಮ ಮತ್ತು ಭವಿಷ್ಯದ ರಾಜಕೀಯ ಆಯಾಮಗಳು ಎಂಬ ರಾಜ್ಯಮಟ್ಟದ ವಿಚಾರಣ ಸಂಕಿರಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ಥಳಿಯ ನಾಯಕರನ್ನು ದೂರವಿಟ್ಟು ಮೋದಿ ವರ್ಚಸ್ಸನಿಂದ ಚುನಾವಣೆ ಎದುರಿಸಿದ ಪರಿಣಾಮ ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿತು ಎಂಬುದನ್ನು ಆರ್ ಎಸ್ ಎಸ್ ಮುಖವಾಣಿ ಪತ್ರಿಕೆಯಾದ ಆರ್ಗನೈಜರ್ ಪತ್ರಿಕೆಯೇ ಒಪ್ಪಿಕೊಂಡಿದೆ.ಕೆಲವೇ ವ್ಯಕ್ತಿಗಳ ಕಪಿಮುಷ್ಠಿಯಿಂದ ಸಿಲುಕಿರುವ ಬಿಜೆಪಿ ಟಿಕೆಟ್ ಹಂಚಿಕೆ ವೇಳೆ ಸ್ಥಳೀಯ ನಾಯಕರ ಮಾತಿಗೆ ಬೆಲೆಕೊಡದೇ ರಾಜಕೀಯ ಅನಭವವಿಲ್ಲದವರ ಮಾತಿನಂತೆ ನಡೆದುಕೊಂಡಿದ್ದರಿಂದ ಇಷ್ಟೋಂದು ದೊಡ್ಡ ಮಟ್ಟದಲ್ಲಿ ಹಿನ್ನೆಡೆ ಎದುರಿಸಿತು.ಈಗಗಾಗಲೂ ಆ ಪಕ್ಷ ಕೆಲವರ ಕಪಿಮುಷ್ಠಿಯಿಂದ ಹೊರಬರುವಂತೆ ನನಗೆ ಕಾಣುತ್ತಿಲ್ಲ ಎಂದು ಹೇಳಿದರು.
ನನ್ನನು ಸೋಲಿಸಲು ಹೋಗಿ ಇಡೀ ಬಿಜೆಪಿಯೇ ದೂಳಿಪಟವಾಯಿತು.ಕರ್ನಾಟಕದಲ್ಲಿ ಬಿಜೆಪಿ ಇಷ್ಟು ಎತ್ತರಕ್ಕೆ ಬೆಳೆಯಲು ನಾವು ಶ್ರಮಹಾಕಿದೆವು. ಸ್ಥಳೀಯ ನಾಯಕರು ಮತ್ತು ಸ್ಥಳೀಯ ಸಮಸ್ಯೆ ಬಗ್ಗೆ ಗಮನಹರಿಸಲಿಲ್ಲ. ಕರ್ನಾಟಕ ಶ್ರೀಮಂತ ರಾಜ್ಯಗಳಲ್ಲಿ ಒಂದಾದರೂ ರಾಜ್ಯದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಮೂಲಭೂತ ಸೌಕರ್ಯಗಳ ಕೊರತೆಗಳನ್ನು ನಾನೇ ನೇರವಾಗಿ ಚುನಾವಣೆ ಸಮಯದಲ್ಲಿ ಜನರು ಪ್ರಶ್ನೆಗಳ ಮೂಲಕ ನೋಡಿದೆ. ಇತಹ ಹಲವಾರು ಸಮಸ್ಯೆಗಿಗೆ ಬಿಜೆಪಿ ಪರಿಹಾರ ನೀಡದ್ದು ಕಾಂಗ್ರೆಸ್ ಗೆಲುವಿಗೆ ಅನುಕೂಲಕರ ವಾತಾವರಣ ನಿರ್ಮಿಸಿತು ಎಂದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ.ಆದರೆ, ಶೇಡವಾರು ಮತದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಬಹಳ ದೊಡ್ಡ ವ್ಯಾತ್ಯಾಸವಾಗಿಲ್ಲ.ಸ್ವಲ್ಪ ಅಳಿ ತಪ್ಪಿದರೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಹೆಚ್ವಿದೆ.ಮುಂದಿನ ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದ ಚುನಾವಣೆ ಪೂರ್ವ ನೀಡಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕು. ಹತ್ತು ಕೆ.ಜಿ ಉಚಿತ ಅಕ್ಕಿ, 200 ಯೂನಿಟ್ ವಿದ್ಯುತ್, ನಿರುದ್ಯೋಗಿ ಭತ್ಯೆಯಂತಹ ಸವಲತ್ತುಗಳನ್ನು ಬಡ ಜನರಿಗೆ ತಲುಪಬೇಕು ಹೊರತು ಅನುಕೂಲ ಇರುವ ಶ್ರೀಮಂತರಿಗಲ್ಲ.ಹಾಗಾಗಿ ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಧಿಸುವುದು ಸರಿಯಾಗಿಯೇ ಇದೆ ಎಂದು ಸಮರ್ಥಿಸಿದರು.
ಮಾದ್ಯಮಗಳಿಗೆ ಸಮಾಜದಲ್ಲಿ ಬದಲಾವಣೆ ತರುವ ಸಾಮರ್ಥವಿದೆ. ಆದರೆ, ಇಂದು ಮಾದ್ಯಮಗಳು ಜಾಹೀರಾತಿನ ಪ್ಯಾಕೇಜ್ ಗಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎರಡನ್ನೂ ಒಲೈಕೆ ಮಾಡುವುದು ಹೆಚ್ಚುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ನಡೆಯಬೇಕಿದೆ. ಚುನಾವಣೆ ಆಯೋಗಗಳಿಂದ ಕರಪತ್ರ ಹಂಚಿಕೆ ತಡೆಯುವುದಷ್ಟೇ ಸಾಧ್ಯವಾಗಿದೆ ಹೊರತು ಹಣ ಹಂಚುವುದನ್ನು ತಡೆಯಲು ಇಂದಿಗೂ ಸಾಧ್ಯವಾಗಲಿಲ್ಲ. ಇದರಿಂದ ಪ್ರಾಮಾಣಿಕ ಜನ ನಾಯಕರು ವಿಧಾನಸಭೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಬಸವಣ್ಣ ಅವರ ಅನುಭವ ಮಂಟಪದ ತತ್ವ ಹಾಗೂ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳ ಆಧಾರದ ಮೇಲೆ ಸರ್ಕಾರಗಳು ಆಡಳಿತ ಮಾಡಬೇಕು.ಅಂಬೇಡ್ಕರ್ ರಚಿಸಿರುವ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠವಾದದ್ದು.
ಪ್ರಗತಿಪರ ಚಿಂತಕ ಪೆÇ್ರ. ಪುರುಷೋತ್ತಮ ಬಿಳಿಮಲೆ ಮಾತನಾಡಿ ,ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವನ್ನು ಶಿಕ್ಷಣ ತಜ್ಞರು ತುರ್ತಾಗಿ ಮಾಡಬೇಕಿದೆ.ಚುನಾವಣೆಯಲ್ಲಿ 200 ಕೊಟ್ಟು ಮತಪಡೆಯುವವನು ನಂತರ ಸಾವಿರಾರು ಕೋಟಿ ಹಣ ಮಾಡುತ್ತಾನೆ.ಜನರಿಗೆ ರಾಜಕೀಯ ಪ್ರಜ್ಞೆ ಮೂಡಿಸಲು ಯಾರೂ ಹಿಂಜರಿಯ ಬಾರದು ಎಂದರು.
2024 ಲೋಕ ಚುನಾವಣೆಯಿದ್ದು ಈ ಸಮಯದಲ್ಲಿ ನಾವು ಹೆಚ್ಚು ಮಾತನಾಡದಿದ್ದರೆ, ಈ ದೇಶ ಮತ್ತೆ ಕೋಮುವಾದ, ಭ್ರಷ್ಟಾಚಾರಕ್ಕೆ ಸಿಲುಕಿಕೊಳ್ಳುತಗತದೆ. ಬಡ ಮುಸ್ಲಿಂ4% ಮೀಸಲಾತಿ ಕಿತ್ತು ಬೇರೆ ಸಮುದಾಗಳಿಗೆ ಹಚ್ಚುವುದು ನಾಚಿಗೇ ಸಂಗತಿ. ಬಡ ಮುಸ್ಲಿಂರು ಜಾತ್ರೆಯಲ್ಲಿ ಅಂಗಡಿ ತರೆದರೆ ಧರ್ಮ ಮುಂದಿಟ್ಟು ಅವರನ್ನು ಬೆದರಿಸುತ್ತಾರೆ.ಇಂತವರನ್ನು ಹಿಮ್ಮೆಟ್ಟಿಸಲು ಬಡವರ ನಿಟ್ಟಿಸುರು ಸಾಕು ಎಂದು ವಾದ್ದಾಳಿ ನಡೆಸಿದರು.
ಪೆÇ್ರ.ಆರ್ ಇಂದಿರಾ, ಪೆÇ್ರ.ಜೆ.ಸೋಮಶೇಖರ್, ವಿಭಾಗದ ಮುಖ್ಯಸ್ಥ ಪೆÇ್ರ.ಎಸ್.ನರೇಂದ್ರ ಕುಮಾರ್ ಇದ್ದರು.