
ಕಲಬುರಗಿ,ಮೇ 3: ನಗರದಲ್ಲಿ ಪ್ರಧಾನಮಂತ್ರಿ ನಡೆಸಿದ ರೋಡ್ ಶೋ ದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಇದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಹೇಳಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿರುವಂತಹ ಎಷ್ಟೋ ರೋಗಿಗಳು ಅನೇಕ ಮುಖ್ಯ ರಸ್ತೆಗಳ ಸಂಚಾರ ಸ್ಥಗಿತಗೊಳಿಸಿದ್ದರಿಂದ ತುಂಬಾ ಸಂಕಷ್ಟಕ್ಕಿಡಾಗಿದ್ದಾರೆ. ನಗರಕ್ಕೆಬೇರೆ ಊರಿನಿಂದ ಬಂದು ಹೊಗುವ ಅನೇಕ ಜನರು ತಮ್ಮಮಕ್ಕಳನ್ನು ಕರೆದುಕೊಂಡು ಹೋಗುವಾಗ
ಹೇಳತೀರದಷ್ಟು ತೊಂದರೆಗೊಳಪಟ್ಟಿದ್ದಾರೆ. ಇದು ಮೋದಿಯವರ ಪ್ರಚಾರಕ್ಕಾಗಿ ಜನರಿಗೆ ಕೊಟ್ಟ ತೊಂದರೆಯಾಗಿದೆ.
ಆದರೆ ಈ ಹಿಂದೆ ಕಲಬುರಗಿ ನಗರಕ್ಕೆ ಅನೇಕ ಜನ
ರಾಷ್ಟ್ರಪತಿಯವರು, ಪ್ರಧಾನಿಯವರು ಬಂದು ಹೊಗಿದ್ದಾರೆ.
ಆದರೆ ಈ ತರಹ ರಸ್ತೆ ಸಂಪರ್ಕ ಬಂದು ಮಾಡಿ ಸಾರ್ವಜನಿಕರಿಗೆ
ತೊಂದರೆ ನೀಡಿಲ್ಲ. ಪ್ರಧಾನಿ ಮೋದಿಯವರ ಆಗಮನದಿಂದ ಕಲಬುರಗಿ ಜನರು ಸಂತೋಷದಲ್ಲಿರದೇ ದು:ಖದಲ್ಲಿದ್ದು ಜನರು ತಮ್ಮ
ಮನೆಗೆ ಹೊಗಲು ಇಡೀ ದಿವಸ ಪರದಾಡುವಂತಾಗಿದೆ. ಪ್ರಧಾನಿ
ಮೋದಿಯವರಿಂದ ಆದ ತೊಂದರೆ ಖಂಡಿಸುತ್ತೇನೆ ಎಂದು ಜಗದೇವ ಗುತ್ತೇದಾರ ತಿಳಿಸಿದ್ದಾರೆ.