ಮೋದಿ ಮೆಚ್ಚಿದ ಗ್ರಾಮೀಣ ಪ್ರತಿಭೆ

ವಿಜಯಪುರ.ಮಾ೮:ಗ್ರಾಮೀಣ ಪ್ರತಿಭೆಗಳು ಪ್ರಧಾನಿ ಮೋದಿಯವರ ಗಮನ ಸೆಳೆಯಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ವಿಜಯಪುರ ಚನ್ನರಾಯಪಟ್ಟಣ ರಸ್ತೆಯಲ್ಲಿನ ಎಸ್.ಎಲ್.ವಿ ಇಂಟರ್ನ್ಯಾಷನಲ್ ಶಾಲಾ ವಿದ್ಯಾರ್ಥಿ ವಿಜ್ಞಾನ ದಿನದಂದು ಪ್ರದರ್ಶಿಸಿದ್ದನ್ನು ಮೋದಿಯಿಂದ ಪ್ರಶಂಸೆ ಪತ್ರ ಪಡೆದಿದ್ದಾರೆ.ಯಾವ ವಿಷಯಕ್ಕೆ ಮತ್ತು ಯಾವ ತರಗತಿ ವಿದ್ಯಾರ್ಥಿಗೆ ಪ್ರಶಂಸಾ ಪತ್ರ ಬಂದಿದೆ ಇದರ ಬಗ್ಗೆ ಕುತೂಹಲದಿಂದ ನೋಡೋದಾದ್ರೆ ಸೋಲಾರ್ ಪ್ಯಾನಲ್ ಬೀದಿ ದೀಪದ ಬಗ್ಗೆ ೪ ನೇ ತರಗತಿಯ ನಭನ್ಯೂ.ಎಸ್.ಗೌಡ ಅವನ ಜ್ಞಾನಕ್ಕೆ ಮೆಚ್ಚಿ ಪ್ರಧಾನ ಮಂತ್ರಿ ಕಚೇರಿಯಿಂದ ಪ್ರಶಂಸಾ ಪತ್ರವನ್ನು ನೀಡಿದ್ದಾರೆ.
ಪ್ರಧಾನ ಮಂತ್ರಿ ಯವರ ಪ್ರಶಂಸೆಗೆ ಭಾಜನರಾದ ವಿದ್ಯಾರ್ಥಿ ನಭನ್ಯೂ.ಎಸ್.ಗೌಡ ಮಾತನಾಡಿ ನಾನು ನಮ್ಮ ಪ್ರಧಾನ ಮಂತ್ರಿ ಮೋದಿಜಿ ಅವರಿಗೆ ಸೋಲಾರ್ ಸ್ಟ್ರೀಟ್ ಲೈಟ್ಸ್ ಅಳವಡಿಕೆ ಬಗ್ಗೆ ಪತ್ರ ಬರೆದಿದ್ದೇನೆ. ಇದು ಪರಿಸರ ಸ್ನೇಹಿ ಹಾಗೂ ಆರ್ಥಿಕ ವೆಚ್ಚ ಕಡಿಮೆ ಮಾಡುವಂತದ್ದು, ನಾವು ೩ ವರ್ಷಗಳಿಂದ ೨ ಸೋಲಾರ್ ಬೀದಿ ದೀಪ ಬಳಸುತ್ತಿದ್ದು ರಸ್ತೆ ಯಲ್ಲಿ ಬೆಳಕು ಇದ್ದು ಅಪಘಾತಗಳು ಹಾಗೂ ಅಪರಾಧಗಳು ಕಡಿಮೆ ಆಗಿದೆ. ಮೋದಿಜೀ ಪತ್ರಕ್ಕೆ ಉತ್ತರಿಸಿದ್ದು, ಸ್ಥಳೀಯ ಪುರಸಭೆ, ನಗರ ಸಭೆಗೆ ಸೋಲಾರ್ ದೀಪ ಅಳವಡಿಸಲು ಹಣ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.
ಎಸ್.ಎಲ್.ವಿ ಇಂಟರ್ನ್ಯಾಷನಲ್ ಶಾಲೆಯ ಖಜಾಂಚಿ ಪುನೀತ್ ಗೌಡ ಮಾತನಾಡಿ , ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚಿ ಪ್ರಧಾನ ಮಂತ್ರಿ ಪ್ರಶಂಸಾಪತ್ರ ಕಳಿಸಿದ್ದು ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ ವಿಜ್ಞಾನ ಮೇಳದಲ್ಲಿ ಭಾಗಿಯಾಗಿದ್ದ ಮಕ್ಕಳು ತಮ್ಮದೇ ಶೈಲಿಯಲ್ಲಿ ಅಯೋಧ್ಯೆಯ ರಾಮಮಂದಿರ , ತಾಜ್ ಮಹಲ್, ಇನ್ನು ಅನೇಕ ಕಟ್ಟಡಗಳ ಮಾದರಿಯನ್ನು ಮಾಡಿರುವುದು ಆಕಷಣೀಯವಾಗಿತ್ತು. ಇದೇ ರೀತಿ ಮಕ್ಕಳನ್ನು ರಾಜ್ಯ ಮತ್ತು ರಾಷ ಮಟ್ಟದಲ್ಲಿ ಗುರುತಿಸುವ ಕೆಲಸ ನಮ್ಮ ಆಡಳಿತ ಮಂಡಳಿ ಮಾಡುತ್ತಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯ ಉಪಾಧ್ಯಾಯನಿ ಅನುರಾಧ ಶಾಲೆಯಲ್ಲಿ ಶಿಕ್ಷಕರ ಮತ್ತು ಆಡಳಿತ ಮಂಡಳಿಯವರ ಸಹಕಾರದೊಂದಿಗೆ ಪೋಷಕರ ಸಹಕಾರ ಅತ್ಯಗತ್ಯವಾಗಿದೆ ಇದನ್ನು ಅರಿತುಕೊಂಡು ತಮ್ಮ ತಮ್ಮ ಜವಾಬ್ದಾರಿಯನ್ನು ಪೂರೈಸಬೇಕಿದೆ ಎಂದರು.