ಮೋದಿ ಮಾತಿನ ಮೋಡಿಗೆ ಮರುಳಾಗಬೇಡಿ

ಮಾಲೂರು.ಏ೩೦:ಮಾವು ಬೆಳೆ ಕುಸಿತವಾದಾಗ, ನೀರಾವರಿ ಸಮಸ್ಯೆ ,ಮಳೆ ಹಾನಿ ಆದಾಗ ಪ್ರದಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದಿಲ್ಲ. ಹೆಚ್ಚಿನ ಪರಿಹಾರ ಬಿಡುಗಡೆ ಮಾಡಿಲ್ಲ ಚುನಾವಣೆ ಪ್ರಚಾರಕ್ಕೆ ಕೋಲಾರ ಜಿಲ್ಲೆಗೆ ಭಾನುವಾರ ಬರುತ್ತಾರೆ ಭಾಷಣ ಮಾಡಿ ಟಾಟಾ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಹೇಳಿ ಹೋಗ್ತಾರೆ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾತಿಗೆ ಜನತೆ ಮರುಳಾಗಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ವೈಟ್ ಗಾರ್ಡನ್ ಬಡಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಜಿ.ಇ.ರಾಮೇಗೌಡ ಅವರ ಪರವಾಗಿ ಮತಯಾಚನೆ ಮಾಡಲು ತಾಲೂಕು ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ನಿಮ್ಮಿಂದ ಮತ ಪಡೆಯೋಕೆ ಕೋಲಾರ ಡಿಸಿಸಿ ಬ್ಯಾಂಕ್‌ನ ಕಾಂಗ್ರೆಸ್ ಬಳಸಿಕೊಂಡಿದೆ. ಸ್ತ್ರೀಶಕ್ತಿ ಸ್ವಸಹಾಯ ಸಾಲಮನ್ನಾ ಮಾಡಲು ಘೋಷಣೆ ಮಾಡಿದ್ದೇನೆ. ಕೋಲಾರ ಜಿಲ್ಲೆಯ ರೈತರು ಅತ್ಯಂತ ಕಷ್ಟಪಟ್ಟು ಜೀವನ ಮಾಡ್ತಿದ್ದಾರೆ. ಮಾವು, ರಾಗಿ, ಟೊಮೊಟೊ, ತರಕಾರಿ ಬೆಳೆಗೆ ನ್ಯಾಯಯುವ ಬೆಲೆ ತಂದುಕೊಡುವ ಕೆಲಸ ಮಾಡ್ತೇವೆ. ಮೊದಲು ಸಿಎಂ ಇದ್ದಾಗ ಟೊಮೊಟೊ ಬೆಲೆ ಕುಸಿತವಾಗಿತ್ತು. ರಸ್ತೆಯಲ್ಲಿ ಟೊಮೊಟೊ ಸುರಿದ ದೃಶ್ಯ ಕಂಡು ಬೆಂಬಲ ಬೆಲೆ ಘೋಷಣೆ ೨೦೦೬ ರಲ್ಲಿ ಮಾಡಿದ್ದೇನೆ. ೨೦೧೮ರಲ್ಲಿ ಸಿಎಂ ಆಗಿದ್ದಾಗ, ಬೆಳೆ ಮಾರಾಟ ಮಾಡಲು ಆಗದೆ ಪರದಾಟ ಪಟ್ಟರು .ನೀರು ಕೊಡುತ್ತೇವೆ ಎಂದು ಹೇಳಿ ಬೆಂಗಳೂರಿನಿಂದ ವ್ಯರ್ಥವಾಗಿ ಹರಿಯುವ ಕೊಳಚೆ ನೀರು, ವಿಷಯುಕ್ತ ನೀರು ಕೊಟ್ಟಿದ್ದಾರೆ.
ಕೆ.ಸಿ.ವ್ಯಾಲಿ ನೀರು ಮುಂದಿನ ದಿನಗಳಲ್ಲಿ ಈ ಜಿಲ್ಲೆಯ ಜನರ ಪ್ರಾಣಕ್ಕೆ ಆಪತ್ತು. ತರಲಿದೆ ವಿಷಯುಕ್ತ ನೀರು ಬಿಡಬೇಡಿ ಎಂದು ಚರ್ಚೆ ಮಾಡಿದ್ದೇನೆ. ತನ್ನ ಅಧಿಕಾರ ಅವಧಿಯಲ್ಲಿ ನಿರ್ಮಾಣಗೊಂಡ ಎರಗೋಳು ಯೋಜನೆಯ ಜಲಾಶಯ ತುಂಬಿದ ಮಳೆ ನೀರು ಉಪಯೋಗ ಮಾಡಿಕೊಳ್ಳದೆ ಇರುವ ಬಿಜೆಪಿ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ ರಾಜ್ಯದ ಜನರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಜನತೆ ಮತ್ತೊಮ್ಮೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು
ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ೨ ಲಕ್ಷ ಕೊಡ್ತಿವಿ. ಗ್ಯಾಸ್ ಬೆಲೆ ಏರಿಕೆಯಾಗಿದೆ, ವರ್ಷಕ್ಕೆ ೫ ಗ್ಯಾಸ್ ಸಿಲಿಂಡರ್ ನಾವು ಉಚಿತವಾಗಿ ಕೊಡ್ತೀವಿ ಕಾಂಗ್ರೆಸ್ ಪಕ್ಷದ .೨ ಸಾವಿರ ರೂಪಾಯಿ ಗ್ಯಾರಂಟಿ ಕಾರ್ಡ್‌ಗೆ ಮರುಳಾಗಬೇಡಿ. ಅದು ಗ್ಯಾರಂಟಿ ಕಾರ್ಡ್ ಅಲ್ಲ, ಡ್ಯೂಪ್ಲಿಕೇಟ್ ಕಾರ್ಡ್. ಪಂಚರತ್ನ ಕಾರ್ಯಕ್ರಮ ಮೂಲಕ ನಿಮ್ಮ ಕತ್ತಲೆಯ ಬದುಕಿಗೆ ಬೆಳಕು ತಂದು ಕೊಡ್ತೇವೆ.
ಇಲ್ಲಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿ ನನಗೆ ಪರಿಚಿತರೆ ಆದರೆ ಜಿ.ಇ.ರಾಮೇಗೌಡರಿಗೆ ಇರುವ ಸರಳತೆ ಯಾವ ಅಭ್ಯರ್ಥಿಗೂ ಇಲ್ಲ ತಾಲೂಕಿನಲ್ಲಿ ಕಳೆದ ಹತ್ತಾರು ವರ್ಷಗಳಿಂದ ಆರೋಗ್ಯ ಶಿಕ್ಷಣ ಸಾಮಾಜಿಕವಾಗಿ ಬಡ ಜನರ ಸೇವೆಯನ್ನು ಮಾಡುತ್ತಿರುವ ಜಿ.ಇ.ರಾಮೇಗೌಡ ಅವರು ಮೇ ೧೦ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಇಲ್ಲಿನ ಮತದಾರರು ತಾಲೂಕಿನ ಅಭಿವೃದ್ಧಿ ಹಾಗೂ ಜನರ ಕಷ್ಟ ಸುಖಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಸೇವೆ ಮಾಡಲು ಜಿ.ಇ.ರಾಮೇಗೌಡ ಅವರನ್ನು ಬೆಂಬಲಿಸಿ ಆಶೀರ್ವಾದ ಮಾಡಿದರೆ ಪಂಚರತ್ನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಹಕಾರವಾಗುತ್ತದೆ ಎಂದರು
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಸದಸ್ಯ ಚೌಡರೆಡ್ಡಿ, ರಾಜ್ಯ ಜೆಡಿಎಸ್ ಪಕ್ಷದ ಉಪಾಧ್ಯಕ್ಷ ಜಮೀರ್ ಅಹಮದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬೂರು ಶಂಕರಗೌಡ, ಕಾರ್ಯದರ್ಶಿ ಎಚ್.ವಿ.ಚಂದ್ರಶೇಖರ್ ಗೌಡ, ರಶ್ಮಿರಾಮೇಗೌಡ, ವಕ್ಕಲೇರಿ ರಾಮು, ಅಲ್ಪಸಂಖ್ಯಾತ ಮುಖಂಡ ಅಲಿಂ ಉಲ್ಲಾಖಾನ್, ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಬಲ್ಲಳ್ಳಿ ನಾರಾಯಣಸ್ವಾಮಿ, ನಗರಾಧ್ಯಕ್ಷ ಎಂ.ಕೆ.ಆನಂದ್, ತಾಪಂ ಮಾಜಿ ಅಧ್ಯಕ್ಷ ತ್ರಿವರ್ಣ ರವಿ, ಜಿ.ಪಂ ಮಾಜಿ ಸದಸ್ಯ ಎಚ್.ವಿ.ಶ್ರೀನಿವಾಸ್, ಎನ್.ವೆಂಕಟರಾಮ್, ವೆಂಕಟೇಶಪ್ಪ, ರಾಘವೇಂದ್ರ, ಶ್ರೀನಾಥ್, ಡಿ.ಕೆ.ನಾರಾಯಣಸ್ವಾಮಿ, ಜಯಣ್ಣ, ನಿಖಿಲ್ ಗೌಡ, ದಯಾನಂದ್, ಚಂದ್ರಶೇಖರ್, ಸಂಪತ್, ಅನೇಪುರ ದೇವರಾಜ್, ಇನ್ನಿತರರು ಹಾಜರಿದ್ದರು.