ಮೋದಿ ಮಾತಿಗೆ ಮರುಳಾಗಬೇಡಿಆಪ್ ಅಭ್ಯರ್ಥಿ ಕೇಶವರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.04: ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆಯೇ ಮುಖ್ಯ ಹೊರೆತು ಅವರಿಗೆ ಜನ ಸಾಮಾನ್ಯರ ಸಂಕಷ್ಟ ಅಲ್ಲ. ಅವರ ಮಾತಿಗೆ ಮತದಾರರು ಮರುಳಾಗಬೇಡಿ ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೊರ್ಲಗುಂದಿ ದೊಡ್ಡ ಕೇಶವರೆಡ್ಡಿ ಹೇಳಿದ್ದಾರೆ.
ಅವರು ಇಂದು ನಗರದ ಕಾಕರ್ಲತೋಟ, ಗುಗ್ಗರಹಟ್ಟಿ  ಮೊದಲಾದ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮತದಾರರಿಗೆ ಬಿಜೆಪಿಯ ಬಂಡವಾಳದ ಬಗ್ಗೆ ತಿಳಿಸಿದರು.
ರಾಜ್ಯದಲ್ಲಿ ಅತಿವೃಷ್ಟಿ ಬಂದು ಸಾವಿರಾರು ಜನತೆ ಸಂಕಷ್ಟಕ್ಕೆ ಸಿಲುಕಿದರೂ ನೋಡಲು ಬಾರದ, ಸೂಕ್ತ ಪರಿಹಾರ ನೀಡದ ಪ್ರಧಾನಿ ಮೋದಿ ಅವರು ಜಿಲ್ಲೆಗೆ ಚುನಾವಣಾ ಪ್ರಚಾರಕ್ಕೆ ಮಾತ್ರ ಬರುತ್ತಿದ್ದಾರೆ ಇಂತಹವರ ಪಕ್ಷಕ್ಕೆ ಸರಿಯಾದ ಪಾಠ ಕಲಿಸಿ ಎಂದರು. 
ಜನ ಸಮಾನ್ಯರು ದಿನ ನಿತ್ಯದ ಬೆಲೆ ಏರಿಕೆಯಿಂದ ಬಡ, ಮಧ್ಯಮ ವರ್ಗ ತತ್ತರಿಸಿರುವುದರ ಬಗ್ಗೆ ಪ್ರಶ್ನೆ ಮಾಡಿ, ಬಡ ಮತ್ತು ಜನ ಸಮಾನ್ಯರ ಬದುಕಿಗೆ ನೆರವಾಗಬಲ್ಲ  ಯೋಜನೆಗಳನ್ನು ಜಾರಿಗೆ ತಂದಿರುವ ಆಮ್ ಆದ್ಮಿಗೆ ಮತ ನೀಡಿ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಅವರೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.