ಮೋದಿ ಬಂಡೀಪುರಕ್ಕೆ ಬಂದರೆ ಮತ ಹಾಕಲ್ಲ

ಬೆಂಗಳೂರು,ಏ,೯:ಮೋದಿ ಅವರು ಸಫಾರಿ ಧರಿಸಿ ವನ್ಯಜೀವಿ ವೀಕ್ಷಿಸಲು ಬಂಡೀಪುರಕ್ಕೆ ಆಗಮಿಸಿದರೆ ಜನ ಮತ ಹಾಕುವುದಿಲ್ಲ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ರಾಜ್ಯದಲ್ಲಿ ಪ್ರವಾಹ, ಕೋವಿಡ್‌ನಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಭೇಟಿ ನೀಡಲಿಲ್ಲ. ಈಗ ಬಂಡೀಪುರದಲ್ಲಿ ಸಫಾರಿ ವೀಕ್ಷಣೆಗೆ ಬಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸಫಾರಿ ಸೂಟು ಧರಿಸಿ ಸಫಾರಿ ವೀಕ್ಷಣೆಗೆ ಬಂದರೆ ಜನ ಅದನ್ನು ನಂಬುವುದಿಲ್ಲ ಎಂದು ಹೇಳಿದರು.
ಕಾಡು ಪ್ರಾಣಿಗಳು ಜನರ ಮೇಲೆ ದಾಳಿ ನಡೆಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂತ್ರಸ್ಥರ ಮನೆಗೆ ಭೇಟಿ ನೀಡಿಲ್ಲ. ಈಗ ಸಫಾರಿ ವೀಕ್ಷಣೆಗೆ ಬಂದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಅರಣ್ಯ ಭಾಗದಲ್ಲಿ ಆಹಾರ, ಅಪೌಷ್ಠಿಕತೆ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಪ್ರಧಾನಿಯವರು ಗಮನ ಹರಿಸಿಲ್ಲ. ಜನರು ಬೀದಿಗೆ ಬಿದ್ದಾಗ ಅವರ ಸಮಸ್ಯೆ ಆಲಿಸಲು ರಾಜ್ಯಕ್ಕೆ ಭೇಟಿ ನೀಡಲಿಲ್ಲ. ಈಗ ಚುನಾವಣಾ ಸಂದರ್ಭದಲ್ಲಿ ಸರಣಿ ಭೇಟಿ ಕೈಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.