ಮೋದಿ ಪ್ರಮಾಣ ವಚನ ಸ್ವೀಕಾರ: ಕಾರ್ಯಕರ್ತರ ಸಂಭ್ರಮ

ವಿಜಯಪುರ,ಜೂ.11 : ಹೆಮ್ಮೆಯ ನಾಯಕ ನರೇಂದ್ರ ಮೋದಿಯವರು ಸತತ 3 ನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಭಾನುವಾರ ಸಂಜೆ ವಿಜಯಪುರ ನಗರದ 32 ನೇ ವಾರ್ಡಿನ ಶ್ರೀ ಲಿಂಗೇಶ್ವರ ದೇವಸ್ಥಾನದ ಮುಂಭಾಗ ವಾರ್ಡಿನ ಸದಸ್ಯ ಶಿವರುದ್ರ ಬಾಗಲಕೋಟ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಅದ್ದೂರಿಯಾಗಿ ಸಂಭ್ರಮಾಚರಣೆ ಮಾಡಿದರು.
ಈ ವೇಳೆ ಬಿಜೆಪಿ ನಗರ ಮಂಡಲ ಕಾರ್ಯದರ್ಶಿ ವಿನೋದ ತೆಲಸಂಗ, ಮುಖಂಡರಾದ ಸಂತೋಷ ಹುಣಶ್ಯಾಳ, ಮುತ್ತು ಶಾಹಪುರ, ಪ್ರಶಾಂತ ಕವಿಶೆಟ್ಟಿ, ಅಪ್ಪು ಲೋಣಿ, ಶಿವಲಿಂಗ ಹುಣಶ್ಯಾಳ, ಹಿರಿಯರಾದ ಸೂರಪ್ಪ ಚಡಚಣ ಸೇರಿದಂತೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಭಾಗಿಯಾಗಿದ್ದರು