ಮೋದಿ ಪ್ರಮಾಣ ವಚನ ; ಕಾರ್ಯಕರ್ತರ ಸಂಭ್ರಮಾಚರಣೆ

ತಾಳಿಕೋಟೆ:ಜೂ.10: ದೇಶದ ಪ್ರಧಾನಿಯಾಗಿ ಮೂರನೇ ಭಾರಿಗೆ ನರೇಂದ್ರ ಮೋದಿಜಿ ಅವರು ಪ್ರಮಾಣ ವಚನ ಸ್ವಿಕರಿಸುತ್ತಿದ್ದಂತೆ ತಾಳಿಕೋಟೆ ಪಟ್ಟಣದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಟಾಕ್ಷೀ ಸಿಡಿಸಿ ಗುಲಾಲ ಎರಚಿ, ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು.
ಪಟ್ಟಣದ ಶಿವಾಜಿ ಮಹಾರಾಜರ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಅಭಿಮಾನಿಗಳು ಪಟಾಕ್ಷೀ ಸಿಡಿಸುವದರೊಂದಿಗೆ ಸಂಭ್ರಮಿಸಿದರಲ್ಲದೇ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ಪ್ರಧಾನಿ ಮೋದಿಜಿ ಅವರಿಗೆ ಜೈಕಾರವನ್ನು ಹಾಕಿದರು.
ಪಟ್ಟಣದ ಪುರಸಭಾ ಸದಸ್ಯ ಜೈಸಿಂಗ್ ಮೂಲಿಮನಿ ಅವರು ದೇಶದ ಪ್ರಧಾನಿಯಾಗಿ ಮೂರನೇ ಭಾರಿಗೆ ಪ್ರಮಾಣ ವಚನ ಸ್ವಿಕರಿಸುತ್ತಿರುವ ಹಿನ್ನೇಲೆ ಪಟ್ಟಣದ ರಜಪೂತ ಸಮಾಜದ ಬಡಾವಣೆಯ ಮನೆಗಳಿಗೆ ಯುವಕರ ಮೂಲಕ ಸಸಿಗಳನ್ನು ವಿತರಿಸಿ ಪರಿಸರ ಜಾಗ್ರತಿ ಮೂಡಿಸಿದರು.