
ಸಿಂಧನೂರು,ಫೆ.೨೬- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತ ನೋಡಿ ಮೆಚ್ಚಿದ ಪಾಕಿಸ್ತಾನದ ಜನ ಮೋದಿ ಪಾಕಿಸ್ತಾನದ ಪ್ರಧಾನಿ ಮಂತ್ರಿಯಾಗಲಿ ಎಂದು ಭಯಸುತ್ತಾರೆ. ಎಂದರೆ, ಪ್ರಧಾನಿ ಭಾರತ, ಪಾಕಿಸ್ತಾನ ಅಲ್ಲದೆ ಇಡೀ ವಿಶ್ವ ಮೆಚ್ಚುವಂತಹ ನಾಯಕರಾಗಿ ಬೆಳೆದಿದ್ದಾರೆ ಎಂದು ಬಿಜೆಪಿಯ ಪಕ್ಷದ ರಾಜ್ಯ ಅಧ್ಯಕ್ಷರಾದ ನಳೀನ ಕುಮಾರ ಕಟೀಲು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ದೇಶ ಅಭಿವೃದ್ಧಿ ಮಾಡದೆ ಬರಿ ಭ್ರಷ್ಟಾಚಾರ ಮಾಡಿತು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿವೃದ್ಧಿ ಮಾಡುವ ಜೊತೆಗೆ ಇಡಿ ವಿಶ್ವ ಮೆಚ್ಚುವಂತಹ ಕೆಲಸ ಮಾಡಿ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿಯ ಪರ ಜನರ ಒಲವು ಇದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ೧೫೦ ಕ್ಕೂ ಮೇಲ್ಪಟ್ಟ ಸ್ಥಾನ ಗಳನ್ನು ಗೆಲ್ಲುವ ಮೂಲಕ ಮತ್ತೆ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಸಿಂಧನೂರು ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಹರಳುವದು ಗ್ಯಾರಂಟಿ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯ ಮಂತ್ರಿ ಗಾದಿಗಾಗಿ ಗುದ್ದಾಟ ನಡೆದಿದೆ ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಮನೆಯಲ್ಲಿ ಜಗಳ ನಡೆದಿದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉತ್ತಮ ಬಜೆಟ್ ಹಾಗೂ ಅಭಿವೃದ್ಧಿ ಕೆಲಸ ನೋಡಿ ಜನ ಬಿಜೆಪಿ ಪಕ್ಷಕ್ಕೆ ಆರ್ಶಿವಾದ ಮಾಡಲಿದ್ದಾರೆ.
ಕೆ. ಕರಿಯಪ್ಪ ಪಕ್ಷಕ್ಕೆ ಬರುವ ಬಗ್ಗೆ ಕೇಳಿದ ಪಶ್ನೆಗೆ ಉತ್ತರಿಸಿದ ಅವರು ಯಾರೆ ಪಕ್ಷಕ್ಕೆ ಬಂದರು ಸ್ವಾಗತ ಪಕ್ಷಕ್ಕೆ ಬಂದ ಮೇಲೆ ಅವರು ಇಲ್ಲಿ ಪವಿತ್ರರಾಗುತ್ತಾರೆ ಎಂದರು.
ಮಹೇಶ ತೆಂಗಿನ ಕಾಯಿ, ಸಿದ್ಧ ರಾಜ, ಕೆ.ವೀರುಕ್ಷಪ್ಪ, ಪ್ರತಾಪ ಪಾಟೀಲ್, ಕೊಲ್ಲಾ ಶೇಷ ಗಿರಿ ರಾವ್, ಮಧ್ವ ಆಚಾರ್ಯ, ಕೆ. ಮರಿಯಪ್ಪ, ದೊಡ್ಬಬಸವರಾಜ, ರಾಜೇಶ ಹಿರೇಮಠ, ಕೆ. ಹನಮೇಶ, ಅಮರೆಗೌಡ ಸೇರಿದಂತೆ ಇತರರು ಇದ್ದರು.