ಮೋದಿ ಜೀವನಚರಿತ್ರೆ ಪ್ರದರ್ಶನಿ, ವಿಚಾರ ಸಂಕಿರಣ

ಬೀದರ ಸೆ 21 ಬಿಜೆಪಿ ನಗರ ಮಂಡಲ ವತಿಯಿಂದ ಇಂದು ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಹುಟ್ಟುಹಬ್ಬದ ನಿಮಿತ್ಯ ಸೇವಾ ಪಾಕ್ಷಿಕ ಅಡಿಯಲ್ಲಿ ಭಾರತ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿ ಅವರ ಜೀವನ ಚರಿತ್ರೆ ಕುರಿತು ಪ್ರದರ್ಶನಿ ಹಾಗು ವಿಚಾರ ಸಂಕಿರಣ ನಡೆಯಿತು.
ಬೀದರ ನಗರದ ಶ್ರೀ ಸಿದ್ಧಾರೂಢ ಗುಂಪಾ ಸಭಾಂಗಣದಲ್ಲಿ ಹಿರಿಯ ಸಮಾಜ ಸೇವಕ ಶಿವಾನಂದ ದಾಡಿಗೆ ಯುವಕರನ್ನು ಉದ್ದೇಶಿಸಿ ಭಾರತದ ಇತಿಹಾಸ ಹಾಗು ಇಂದಿನ ರಾಷ್ಟಮೆಚ್ಚಿದ ನಾಯಕ ನರೇಂದ್ರಮೋದಿ ಮಾಡಿದ ಅನೇಕ ಜನಪರ ಕಾಳಜಿ ಉಳ್ಳನಿರ್ಧಾರ ಬಗೆ ವಿಸ್ತಾರವಾಗಿ ಮಾತಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿ ಹೊಸಳ್ಳಿ ವಹಿಸಿದರು. ಜಿಲ್ಲಾ ಪ್ರಧಾನಕಾರ್ಯದರ್ಶಿ ಅರ್ಹಂತ ಸಾವಳೇ, ಕಾರ್ಯದರ್ಶಿ ಕಿರಣ ಪಾಟೀಲ್, ನಗರ ಸಭೆ ಸದಸ್ಯರಾದರಾಜಾರಾಮ ಚಿಟ್ಟಾ, ಗುಣವಂತ್ ಭಾವಿಕಟ್ಟೆ, ಉದಯ ಹಲ್ವಯ, ನಗರ ಪ್ರಧಾನಕಾರ್ಯದರ್ಶಿ ಸುಭಾಶ್ ಮಡಿವಾಳ, ಗಣೇಶ ಭೋಸಲೇ, ಶಶಿಕಾಂತ ಮೋದಿ, ವೀರೇಶ
ಸ್ವಾಮಿ, ನರೇಶ ಗೌಳಿ, ರೋಶನ್ ವೆರ್ಮಾ, ನವೀನ ಚಿಟ್ಟಾ, ಮಹಾನಂದಾ ಪಾಟೀಲ್ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರದೇರ್ಶನಿ ಸಂಚಾಲಕ ಸುನೀಲ ಗೌಳಿ,ಸಹಸಂಚಾಲಕ ನಿತಿನ ನಾವಲ್ಲ ಕಲೆ ಕಾರ್ಯಕ್ರಮ ನಡೆಸಿಕೊಟ್ಟರು.