ಮೋದಿ -ಜರ್ಮನ್ ಚಾನ್ಸಲರ್ ಭೇಟಿ

ನವದೆಹಲಿ, ಮಾ.೨-ಭಾರತ ಪ್ರವಾಸದಲ್ಲರುವ ಜರ್ಮನಿ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ರಕ್ಷಣಾ ಸಂಬಂಧಗಳನ್ನು ಹೆಚ್ಚಿಸುವ ಪ್ರಾಮುಖ್ಯತೆ ಕೇಂದ್ರೀಕರಿಸಲು ಉಭಯ ನಾಯಕರ ನಡುವೆ ಪ್ರಮುಖ ವಿಷಯ ಕುರಿತು ಚರ್ಚೆ ನಡೆಸಲಾಗಿದೆ .ಜರ್ಮನ್ ಚಾನ್ಸೆಲರ್ ಈ ಭೇಟಿ ಭಾರತದೊಂದಿಗೆ ಸಂಬಂಧಗಳ ಪುನರುಜ್ಜೀವನಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಲಾಗಿದೆ

ಕಳೆದೆರಡು ದಶಕಗಳಲ್ಲಿ ಜರ್ಮನಿಯೊಂದಿಗಿನ ಭಾರತದ ಸಂಬಂಧವು ವಿಭಿನ್ನವಾಗಿ ಕೆಲವು ಮಹತ್ವದ ಬೆಳವಣಿಗೆಗಳನ್ನು ಕಂಡಿದೆ ಅದರಲ್ಲಿಯೂ ರಕ್ಷಣಾ ಸಹಕಾರ, ಉತ್ಪಾದಕ ಉದ್ಯೋಗಿಗಳ ವಲಸೆ, ಇಂಧನ ಭದ್ರತೆ ಮತ್ತು ಇತರ ಡೊಮೇನ್‌ಗಳ ನಡುವೆ ವ್ಯಾಪಾರ ಹೂಡಿಕೆಯ ಕ್ಷೇತ್ರದಲ್ಲಿ ವಿವಿಧ ಪಾಲುದಾರಿಕೆಗಳ ಮೂಲಕ ಉಭಯ ದೇಶಗಳ ನಡುವೆ ಉತ್ತಮ ಸಂಬಂಧ ಹೊಂದಿವೆ.

ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಭಾರತ ಭೇಟಿಯು ರಾಜಕೀಯ, ಆರ್ಥಿಕ, ಭದ್ರತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಮತ್ತಷ್ಟು ಸಹಕರಿಸುವ ಅವರ ಪರಸ್ಪರ ಇಚ್ಛೆಯನ್ನು ದೃಢಪಡಿಸಿದೆ.

ಹಿರಿಯ ಅಧಿಕಾರಿಗಳು ಮತ್ತು ಇತರ ಪ್ರಮುಖ ಸಂಸ್ಥೆಗಳಲ್ಲಿ ಸೀಮೆನ್ಸ್ ಮತ್ತು ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರ ಸಂಘಗಳ ಮುಖ್ಯಸ್ಥರು ಸೇರಿದಂತೆ ವ್ಯಾಪಾರ ನಿಯೋಗದೊಂದಿಗೆ ಆಗಮಿಸಿದ್ದಾರೆ.

ಜರ್ಮನಿಯು ಯುರೋಪಿಯನ್ ಒಕ್ಕೂಟದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ವಿದೇಶಿ ನೇರ ಹೂಡಿಕೆಯ ಭಾರತದ ಅತಿದೊಡ್ಡ ಮೂಲಗಳಲ್ಲಿ ಒಂದಾಗಿದೆ. ಪ್ರಸ್ತುತ ದೇಶ ಜಾಗತಿಕ ಮಟ್ಟದಲ್ಲಿ ಪಾಲಿದಾರಿಕೆಯನ್ನು ಹೊಂದಿದೆ ಎಂದು ಹೇಳಲಾಗಿದೆ.

ಸಭೆಯ ಸಮಯದಲ್ಲಿ ಚರ್ಚೆಗೆ ಒಳಗಾದ ಇತರ ಪ್ರಮುಖ ಕ್ಷೇತ್ರಗಳೆಂದರೆ, ಜಾಗತಿಕ ಆರ್ಥಿಕತೆಗೆ ಭಾರತ ಒಡ್ಡುತ್ತಿರುವ ಬೆಳವಣಿಗೆಯ ಅವಕಾಶಗಳಿಂದಾಗಿ ಭಾರತದಲ್ಲಿನ ಸಾರಿಗೆ, ರಾಸಾಯನಿಕಗಳು, ಸೇವಾ ವಲಯ ಮತ್ತು ಆಟೋಮೊಬೈಲ್‌ಗಳಲ್ಲಿ ಜರ್ಮನಿಯ ಹೂಡಿಕೆ ವಿಷಯದ ಕುರಿತು ಮಹತ್ವದ ಸಮಾಲೋಚನೆ ನಡೆಸಿದೆ.