ಮೋದಿ ಜನ್ಮದಿನ ೧೫ ದಿನ ಆಚರಣೆ

ದೇವದುರ್ಗ.ಸೆ.೧೭- ಪ್ರಧಾನಿ ನರೇಂದ್ರ ಮೋದಿ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅವರ ಜನ್ಮದಿನ ನಿಮಿತ್ತ ಇಂದು ಪತ್ರಕರ್ತರು, ಪತ್ರಿಕಾ ಏಜಂಟರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಆಯೋಜಿಸಿದ್ದ ಪತ್ರಕರ್ತರು ಹಾಗೂ ಪತ್ರಿಕಾ ಏಜೆಂಟರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ದೇಶದ ಪ್ರಧಾನಿಗಳು ಈವರೆಗೆ ಪತ್ರಕರ್ತರ ಬಗ್ಗೆ ಕಾಳಜಿವಹಿಸಿಲ್ಲ. ನರೇಂದ್ರ ಮೋದಿ ಅವರ ವಿಶೇಷ ಕಾಳಜಿಯಿಂದ ಇಂಥ ಕಾರ್ಯಕ್ರಮ ಆಯೋಜಿಸಿ ಸಮಾಜದ ಸ್ವಾಥ್ಯ ಕಾಪಾಡುವ ಪತ್ರಕರ್ತರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಈ ಶಿಬಿರ ಆಯೋಜನೆ ಮಾಡಿದ್ದೇವೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಸಿಬ್ಬಂದಿ, ವೈದ್ಯರು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
ತಾಲೂಕಿನಲ್ಲಿ ಆರೋಗ್ಯ ಕ್ಷೇತ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸದರಿ ಆಸ್ಪತ್ರಯನ್ನು ಮೇಲ್ದರ್ಜೆಗೇರಿಸುವ ಗುರಿ ಹಾಕಿಕೊಳ್ಳಲಾಗಿದೆ. ಐದು ಪ್ರಾಥಮಿಕ ಆಸ್ಪತ್ರೆಗಳನ್ನು ಸಮುದಾಯ ಕೇಂದ್ರವಾಗಿ ಮೇಲ್ದರ್ಜೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಿನಲ್ಲಿ ಉತ್ತಮ ವೈದ್ಯರ ತಂಡವಿದ್ದು, ಕರೊನಾ ,ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಿ ತಾಲೂಕಿನ ಜನರಿಗೆ ಉತ್ತಮ ಸೇವೆ ನೀಡಿದ್ದಾರೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಬನದೇಶ್ವರ, ಡಾ.ಶಿವಾನಂದ ಚೌವ್ಹಾಣ್, ಗಂಗಾಧರ್, ತಾಜುದ್ದೀನ್ ಇತರರಿದ್ದರು.