ಮೋದಿ ಜನ್ಮದಿನ : ರಸಪ್ರಶ್ನೆ ಮೋದಿಯವರ ಆಡಳಿತ ವಿಶ್ವಕ್ಕೆ ಮಾದರಿ: ರೆಡ್ಡಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸೆ.25- ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವಿಶ್ವಕ್ಕೆ ಮಾದರಿಯಾಗಿದೆಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರು ಇಂದು ನಗರದ ಬಿಪಿಎಸ್ ಸಿ ಶಾಲೆಯಲ್ಲಿ ಮೋದಿ ಅವರ 71 ನೇ ಜನ್ಮದಿನದ ಅಂಗವಾಗಿ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ
ಬಿಜೆಪಿ ಜಿಲ್ಲಾ ಯುವ ಮೋರ್ಚಾ  ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮೋದಿ ಅವರ ಉತ್ತಮ ಆಡಳಿತದಿಂದ ಇಂದು ದೇಶ ಕೋವಿಡ್ ಸೋಂಕನ್ನು ಸಮರ್ಥವಾಗಿ ಎದುರಿಸಿದೆ. ಮುಂದುವರೆದ ಹಣೆ ಪಟ್ಟಿಕೊಂಡ ದೇಶಗಳಿಗಿಂತಲೂ ತ್ವರಿತವಾಗಿ ಲಸಿಕೆ ಕಂಡು ಹಿಡಿದು ಇಂದು ದೇಶದಲ್ಲಿ  80 ಕೋಟಿ ಡೋಸ್ ಲಸಿಕೆ ಹಾಕಲಾಗಿದೆಂದರು.
ಭ್ರಷ್ಟಾಚಾರ ರಹಿತ  ಆಡಳಿತ, ದೇಶದ ಭದ್ರತೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ವಿಶ್ವದ ಗಮನ ಸೆಳೆದಿವೆ ಎಂದರು.
ಸಮಾರಂಭದಲ್ಲಿ ಬುಡಾ ಅಧ್ಯಕ್ಷ. ಪಿ.ಪಾಲನ್ನ, ಪಾಲಿಕೆ ಸದಸ್ಯ ಶ್ರೀನವಾಸ್ ಮೋತ್ಕರ್, ರಾಬಕೋ ಒಕ್ಕೂಟದ ಸದಸ್ಯ ವೀರಶೇಖರ ರೆಡ್ಡಿ ಮೊದಲಾದವರು ಇದ್ದರು.