ಮೋದಿ ಜನ್ಮದಿನ ಅಂಗವಾಗಿ ರಕ್ತದಾನ ಶಿಬಿರ

ಲಕ್ಷ್ಮೇಶ್ವರ,ಸೆ.18: ಪಟ್ಟಣದ ವರ್ತಕರ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 72ನೇ ಜನ್ಮದಿನದ ನಿಮಿತ್ಯ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ರಾಮಣ್ಣ ಲಮಾಣಿ ಅವರು ಮಾತನಾಡಿ ಎಂಟು ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಇಡೀ ಜಗತ್ತು ಭಾರತವನ್ನು ಬೆಕ್ಕಸ ಬೆರಗಾಗಿ ನೋಡುವಂತೆ ಮಾಡಿದ ಜಗತ್ತಿನ ಶ್ರೇಷ್ಠ ನಾಯಕರಾಗಿ ಹೊರಹೊಮ್ಮಿದ್ದಾರೆ.
ಎಂಟು ವರ್ಷಗಳಲ್ಲಿ ಅನೇಕ ಸಂಕಷ್ಟಗಳು ಎದುರಾದರೂ ಎದೆಗುಂದದೆ ಧೈರ್ಯದಿಂದ ಸಾಧನೆ ಮಾಡಿದ ಶ್ರೇಯಸ್ಸು ಮೋದಿಯವರಿಗಿದ್ದು ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ಜನರ ಮನವನ್ನು ಗೆದ್ದಿದ್ದಾರೆ ಎಂದರು.
ಅವರು ಕೋವಿಡ್ ನಂತಹ ಕಠಿಣ ಸಂದರ್ಭದಲ್ಲಿ ದೇಶದ ಜನರ ಪ್ರಾಣ ಉಳಿಸಲು ಏನೆಲ್ಲ ಹರಸಾಹಸ ಮಾಡಿದ್ದು ಇಡೀ ಜಗತ್ತಿಗೆ ಗೊತ್ತಿದೆ. ಆ ಕಾರಣಕ್ಕಾಗಿ ಜಗತ್ತು ಎಂದು ಮೋದಿಯವರನ್ನೇ ಅನುಕರಣೆ ಮಾಡುವಂತಹ ಸಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಡಳ ಬಿಜೆಪಿ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ಯುವ ಮೋರ್ಚಾ ಅಧ್ಯಕ್ಷ ನವೀನ್ ಹಿರೇಮಠ, ಪುರಸಭೆ ಅಧ್ಯಕ್ಷ ಅಶ್ವಿನಿ ಅಂಕಲಕೋಟಿ, ನಗರ ಘಟಕದ ಅಧ್ಯಕ್ಷ ದುಂಡೇಶ ಕೊಟಗಿ, ವಿರುಪಾಕ್ಷ ಅಣ್ಣಿಗೇರಿ, ಪೂರ್ಣಿಮಾ ಪಾಟೀಲ್, ಗಂಗಾಧರ ಮೆಣಸಿನಕಾಯಿ, ರೋಟರಿ ಹುಬ್ಬಳ್ಳಿ ಯ ಗಂಗಾಧರ್ ಗುಂಡಪ್ಪನವರ, ನೀಲಪ್ಪ ಕರ್ಜೆಕ್ಕಣ್ಣವರ, ಪ್ರವೀಣ್ ಗೌಡ ಪಾಟೀಲ್, ಪ್ರಕಾಶ ಮಾದನೂರ, ಸಂಗಮೇಶ ಬೆಳವಲಕೊಪ್ಪ, ರಮೇಶ ಹಾಳದೋಟದ, ಸಿದ್ದನಗೌಡ ಬಳ್ಳೊಳ್ಳಿ, ಪೂರ್ಣಾಜಿ ಕರಾಟೆ, ಸಂತೋಷ್ ಜಾವೂರ್, ಸೋಮಣ್ಣ ಉಪನಾಳ ಸೇರಿದಂತೆ ಅನೇಕ ಮುಖಂಡರು ಇದ್ದರು.