ಮೋದಿ ಜನ್ಮದಿನಕ್ಕೆ ಸಸಿ ನೆಟ್ಟ
ಬಿಜೆಪಿಯ ಓಬಿಸಿ ಮೋರ್ಚಾ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.23:  ದೇಶದ ಹೆಮ್ಮೆಯ ಪ್ರಧಾನ ಮಂತ್ರಿ  ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ  ಬಿಜೆಪಿ ಪಕ್ಷ ಸೇವಾ ಪಾಕ್ಷಿಕ ಆಚರಣೆ ಮಾಡುತ್ತಿದೆ. ಇದರ ಹಿನ್ನಲೆಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ  ಸಸಿ ನೆಡುವ ಕಾರ್ಯ ಜಿಲ್ಲೆಯ ಎಲ್ಲಾ ಮಂಡಲದಲ್ಲಿ ಹಮ್ಮಿಕೊಂಡಿದೆ.
ಈ ಕಾರ್ಯದಲ್ಲಿ  ಪಕ್ಷದ  ಜಿಲ್ಲಾ ಅಧ್ಯಕ್ಷ ಮುರಾರಿ ಗೌಡ, ಉಪಾಧ್ಯಕ್ಷ  ವೀರಶೇಖರ್ ರೆಡ್ಡಿ, ಹಿಂದುಳಿದ ವರ್ಗಗಳ ಮೋರ್ಚಾ
ಜಿಲ್ಲಾ ಅಧ್ಯಕ್ಷ  ಬಿ.ಕೆ. ಗಾದಿಲಿಂಗನಗೌಡ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್,  ಬಳ್ಳಾರಿ ನಗರ ಅಧ್ಯಕ್ಷ ಕೆ. ಬಿ. ವೆಂಕಟೇಶ್ವರ, ಮಹಾನಗರ ಪಾಲಿಕೆ ಸದಸ್ಯರಾದ ಮೋತ್ಕರ್ ಶ್ರೀನಿವಾಸ್, ಹನುಮಂತ ಗುಡಿಗಂಟಿ ,ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ  ತಿಪ್ಪಣ್ಣ,ಜಿಲ್ಲಾ ಪ್ರಧಾನ ಕಾರ್ಯದರ್ಶಿ   ಧನುಂಜಯ ಹಮಲ್,  ಉಪಾಧ್ಯಕ್ಷ ರಾದ ಕೆ. ಬಾಬು, ಸಂಯೋಜಕ ಜನಾರ್ಧನ್ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು ,ಪ್ರಮುಖರು ಪಾಲ್ಗೊಂಡಿದ್ದಾರೆ.