ಮೋದಿ ಗಡ್ಡಕ್ಕೂ ರಾಮಮಂದಿರಕ್ಕೂ ಸಂಬಂಧ

ಬಾಗಲಕೋಟೆ, ಡಿ.೨೮- ಪ್ರಧಾನಿ ನರೇಂದ್ರ ಮೋದಿಯವರು ಆಧ್ಮಾತ್ಮಿಕವಾಗಿದ್ದಾರೆ. ಹಾಗಾಗಿ ಅವರು ಕೇಶ ತೆಗೆಯದೇ ಇರುವುದರಲ್ಲಿ ತಪ್ಪೇನಿಲ್ಲ ಎಂದು ಪೇಜಾವರ ಶ್ರೀಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ರಾಮಮಂದಿರ ನಿರ್ಮಾಣದವರೆಗೆ ಕೇಶ ತೆಗೆಯೋದಿಲ್ಲ ಎಂದು ದೀಕ್ಷೆ ತೆಗೆದುಕೊಂಡಿದ್ದಾರಾ ಮೋದಿ ಎಂಬ ಪ್ರಶ್ನೆಗೆ ಸದ್ಯ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಗೆ ಆಗಮಿಸಿದ್ದ ಪೇಜಾವರ ಶ್ರೀಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಮಂದಿರ ನಿರ್ಮಾಣಕ್ಕೆ ಕಾಣಿಕೆ ಸಂಗ್ರಹಣೆಗೆ ಚಾಲನೆ ನೀಡಿದರು. ನಂತರ ಮಾಧ್ಯಮದವರ ಜೊತೆ ಮಾತನಾಡುತ್ತಾ, ಪ್ರಧಾನಿ ಮೋದಿ ದೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದರು. ನಮ್ಮಲ್ಲಿ ದೇವಸ್ಥಾನದ ಕಾರ್ಯ ಇಂತಹದ್ದೆಲ್ಲ ಇರುತ್ತೆ, ಆ ಹೊತ್ತಿಗೆ ನಾವು ದೀಕ್ಷಾ ಬದ್ಧರಾಗೋದು ಅಂತ ಇದೆ. ಅದೇ ರೀತಿ ಮೋದಿ ಅವರು ರಾಮಮಂದಿರ ಕಾರ್ಯಕ್ಕಾಗಿ ದೀಕ್ಷೆ ತೊಟ್ಟಿದ್ದಾರೆಂದು ಊಹಿಸಿದರು. ಮೋದಿಯವರು ರಾಮಮಂದಿರದ ಭೂಮಿಪೂಜೆಯನ್ನು ನೆರವೇರಿಸಿದ್ದರು.
ಅಲ್ಲದೆ ರಾಮಮಂದಿರದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದು, ಸಹಜವಾಗಿಯೇ ನಮ್ಮಲ್ಲಿ ಕೇಶಾಧಿಗಳನ್ನು ತೆಗೆಯುವುದಿಲ್ಲ. ನೈತಿಕ ನೆಲೆಯಲ್ಲಿ ನಮ್ಮಲ್ಲಿ ಮಂದಿರ ನಿರ್ಮಾಣವಾಗುವ ತನಕ ಗಡ್ಡ, ತಲೆಗೂದಲು ತೆಗೆಯುವುದಿಲ್ಲ. ಬಹುಷಃ ಮೋದಿಯವರು ಅದನ್ನು ಪಾಲನೆ ಮಾಡಿರಬಹುದು. ಅಲ್ಲದೆ ಮೋದಿಯವರು ಆಧ್ಮಾತ್ಮಿಕ
ವಾಗಿದ್ದಾರೆ. ಹಾಗಾಗಿ ಅವರು ಕೇಶ ತೆಗೆಯದೇ ಇರುವುದರಲ್ಲಿ ತಪ್ಪೇನಿಲ್ಲ ಎಂದು ಶ್ರೀಗಳು ತಿಳಿಸಿದರು.