ಮೋದಿ ಈ ದೇಶ ಕಂಡ ಅಪರೂಪದ ಪ್ರಧಾನಮಂತ್ರಿ : ಗುರುನಾಥ ರಾಜಗೀರಾ

ಬೀದರ್: ಸೆ.21:ನರೇಂದ್ರ ಮೋದಿಯವರು
ಈ ದೇಶ ಕಂಡ ಅಪರೂಪದ ಪ್ರಧಾನಮಂತ್ರಿಯಾಗಿದ್ದು ಅವರ ಕಾರ್ಯ ಶೈಲಿ ಇಂದಿನ ರಾಜಕಾರಣಿಗಳಿಗೆ ಮತ್ತು ಯುವಕರಿಗೆ ಮಾದರಿಯಾಗಿದೆ, ದೇಶದ ಪ್ರತಿಯೊಬ್ಬರು ಹೆಮ್ಮೆ ಪಡುವ ರೀತಿಯಲ್ಲಿ ಅವರು ಕೆಲಸ ಮಾಡುತಿದ್ದಾರೆ ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಗುರುನಾಥ ರಾಜಗೀರಾ ಅವರು ಹೇಳಿದರು.

ಔರಾದ ಪಟ್ಟಣದ ಅಮರೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ‘ಸೇವಾ ಪಾಕ್ಷಿಕ’ ಅಭಿಯಾನದಡಿಯಲ್ಲಿ ಪ್ರಧಾನಿ ನರೇಯ ಮೋದಿಯವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ದೇಶವೇ ತನ್ನ ಕುಟುಂಬ, ಬಡವರು, ದಮನಿತರು, ಶೋಷಿತರು ತನ್ನ ಬಂಧುಗಳು ಎಂದು ಬದುಕುತ್ತಿದ್ದಾರೆ, ನುಡಿದಂತೆ ನಡೆಯುತ್ತಿರುವ ಏಕೈಕ ಪ್ರಧಾನಿ ಮೋದಿ ಅವರು ನಮ್ಮ ದೇಶದ ಹೆಮ್ಮೆ,ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಜನ್ಮ ಪಡೆದ ಮೊದಲ ಪ್ರಧಾನಮಂತ್ರಿಯು ಕೂಡ ಮೋದಿ ಅವರಾಗಿದ್ದಾರೆ.

ಅತ್ಯಯ ಸಲ್ರಿಯಯ, ಕ್ರಿಯಾಶೀಲ ಹಾಗೂ ದೇಶದೊಳಿತಿಗಾಗಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡು ಸೇವಾ ಹಾಗೂ ಸಮರ್ಪಿತ ಭಾವದಿಂದ ಹಗಲಿರುಳೆನ್ನದೆನೆ ಭಾರತ ಹಾಗೂ ಭಾರತೀಯರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತಿದ್ದಾರೆ.

ದೇಶದ ಅರ್ಥಿಕವ್ಯವಸ್ಥೆಯಲ್ಲಿ ಜನಸಾಮಾನ್ಯರೂ ಕೂಡ ನೇರವಾಗಿ ಪಾಲ್ಗೊಳ್ಳುವಂತೆ ಮಾಡಿದ ಪ್ರಧಾನ ಮಂತ್ರಿ ಜನ್ ಧನ್ ಯೋಜನಾ, ದೇಶದ ಅರ್ಥ ವ್ಯವಸ್ಥೆ ಬದಲಾವಣೆಯ ನೂತನ ಮೈಲುಗಲ್ಲಾಗಿದೆ. ದೇಶದಲ್ಲಿ ಕೈಗಾರಿಕಾ ಕ್ರಾಂತಿಯಾಗಲು ಮೇಕ್ ಇನ್ ಇಂಡಿಯ, ಯೋಜನೆ ಮೂಲಕ ಸುಲಭವಾಗಿ ವ್ಯವಹಾರ ನಡೆಸಲು ಸಾಧ್ಯವಾಗುವಂತಹ ಉತ್ತಮ ವಾಣಿಜ್ಯ ವಾತಾವರಣ ಕಲ್ಪಿಸಿಕೊಟ್ಟಿದ್ದಾರೆ.
ಕಾರ್ಮಿಕ ನೀತಿ ಸುಧಾರಣೆ ಹಾಗೂ ಕಾರ್ಮಿಕ ಘನತೆ ಹೆಚ್ಚಿಸುವ ” ಶ್ರಮ ಏವ ಜಯತೆ ” ಯೋಜನೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತಮ್ಮಲ್ಲಿ ಯುವ ಜನತೆಯ ಕೌಶಲ್ಯ ಸಂಪನ್ಮೂಲವನ್ನು ಕಾಯ್ದುಕೊಳ್ಳುವಂತೆ ಮಾಡಿದ್ದಾರೆ ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರೊಟ್ಟಿಗೆ ಕೈ ಜೋಡಿಸಬೇಕಿದೆ ಎಂದು ಗುರುನಾಥ ರಾಜಗೀರಾ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಮುಖಂಡರಾದ ಬಸವರಾಜ ಹಳ್ಳೆ ಅವರು ಮೋದಿಯವರು ಜನ್ಮದಿನದ ನಿಮಿತ್ತ ಸೇವಾ ಪಾಕ್ಷಿಕ ಅಭಿಯಾನದಡಿಯಲ್ಲಿ
ದೇಶಾದ್ಯಂತ ಸ್ವಚ್ಚತಾ ಕಾರ್ಯಕ್ರಮ,ರಕ್ತದಾನ ಶಿಬಿರ,
ಉಚಿತ ಆರೋಗ್ಯ ತಪಾಸಣಾ ಶಿಬಿರ, ದಿವ್ಯಾಂಗರಿಗೆ ಕೃತಕ ಅಂಗ ಅಥವಾ ಉಪಕರಣಗಳ ವಿತರಣೆ, ವನಮಹೋತ್ಸವ ಹಾಗೂ ವಿಚಾರ ಸಂಕಿರಣ ಸೇರಿದಂತೆ ಇನ್ನಿತರ ಸೇವಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಜನೋಪಕಾರಿ ಸೇವೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಮೋದಿಯವರ ಹುಟ್ಟುಹಬ್ಬವನ್ನು ಆಚರಣೆ ಮಾಡುತಿದ್ದೆವೆ ಮೋದಿಯವರ ಈ ದೇಶದ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮ ಪಡುತಿದ್ದಾರೆ ಅವರೊಟ್ಟಿಗೆ ನಾವೆಲ್ಲರು ಕೈ ಜೊಡಿಸಬೇಕಿದೆ ಆಗ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ಸಂಜು ವಡಿಯಾರ್, ಅಮರೇಶ್ವರ ಪದವಿ ಪೂರ್ವ ಕಾಲೇಜಿನ ಕಾಲೇಜಿನ ಪ್ರಾಚಾರ್ಯರಾದ ಆರ್.ಪಿ ಮಠ, ಉಪನ್ಯಾಸಕರಾದ ಡಿ.ಬಿ ಬೊಳೆಗಾವೆ, ಅಮರೇಶ್ವರ ಗೋಶಾಲೆಯ ಅಧ್ಯಕ್ಷರಾದ ಶಿವರಾಜ ಅಲ್ಮಾಜೆ ಪ್ರಮುಖರಾದ ಬಸವರಾಜ ಸೋಂಬರೆ, ಆನಂದ ದ್ಯಾಡೆ ಸೇರಿದಂತೆ ಇತರರಿದ್ದರು.